Blog

ಕೃಷಿಯಲ್ಲಿ ಮೊದಲ ಪ್ರಯತ್ನ. ಸಾವಯವ ಕೃಷಿ ಪದ್ಧತಿಯಲ್ಲೇ ಬೆಳೆ ಬೆಳೆದಿದ್ದಾರೆ ರೈತ ಪರಶುರಾಮ್. ಕಬ್ಬು, ಜೋಳ, ಶೇಂಗಾ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಗ್ರಾಮದ ರೈತರಾದ ಪರಶುರಾಮ್ ಅವರಿಗೆ ಇದು ವ್ಯವಸಾಯದ ಮೊದಲ ಅನುಭವ. ಯಾವುದೇ ರಾಸಾಯನಿಕ ಬಳಸದೆ ಬೆಳೆ ಬೆಳೆಯುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಕಬ್ಬು, ಶೇಂಗಾ ಮತ್ತು ಜೋಳ ಬೆಳೆಗಳನ್ನು ಬೆಳೆದಿದ್ದಾರೆ.

 

ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಗುಣಲಕ್ಷಣಗಳು ಉತ್ತಮಗೊಂಡಿವೆ. ಇದರ ಫಲವಾಗಿ ಮಣ್ಣು ಮೃದುವಾಗಿದೆ. ಇವರು ಜಮೀನಿನ ಒಂದು ಭಾಗದಲ್ಲಿ ಜೋಳ ಬಿತ್ತಿದ್ದರೆ, ಇನ್ನೊಂದು ಭಾಗದಲ್ಲಿ ಮುಖ್ಯ ಬೆಳೆಯಾಗಿ ಕಬ್ಬು ಮತ್ತು ಅಂತರ ಬೆಳೆಯಾಗಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಆದಾಯಕ್ಕಾಗಿ ಒಂದು ವರ್ಷದ ಮುಖ್ಯ ಬೆಳೆಗೆ ಕಾಯದೆ, ನಡುವಿನ ಅಂತರದಲ್ಲಿ ಶೇಂಗಾ ಬೆಳೆದು ಅಧಿಕ ಲಾಭ ಗಳಿಸುವ ಆಕಾಂಕ್ಷೆ ಪರಶುರಾಮ್ ಅವರದ್ದು.

 

ಅಂತರ ಬೆಳೆಲಾಭಗಳು

- ಆದಾಯಕ್ಕಾಗಿ ಕೇವಲ ಮುಖ್ಯ ಬೆಳೆಯ ಮೇಲೆ ಅವಲಂಬಿತರಾಗದೆ, ಅಂತರ ಬೆಳೆಯಿಂದಲೇ ಆದಾಯ ಪಡೆಯಬಹುದು.

- ಉತ್ತಮ ಯೋಜನೆಯೊಂದಿಗೆ ಕೆಲವೊಮ್ಮೆ ಮುಖ್ಯ ಬೆಳೆಗಿಂತಲೂ ಹೆಚ್ಚು ಆದಾಯ ಗಳಿಸಬಹುದು.

- ವರ್ಷ ಕಾಯದೆ ಪ್ರತಿ ತಿಂಗಳೂ ಆದಾಯ ಗಳಿಸಬಹದು.

- ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಸಾರಜನಕ ಸ್ಥಿರೀಕರಣಗೊಂಡು, ಮುಖ್ಯ ಬೆಳೆಗೆ ಉತ್ತಮ ಪೋಷಕಾಂಶ ದೊರೆಯುತ್ತದೆ.

       ಕೃಷಿಯಲ್ಲಿ ಉತ್ತಮ ಆದಾಯಗಳಿಸಲು ಪ್ರತಿ ತಿಂಗಳು, ಪ್ರತಿ ವಾರ ಆದಾಯ ಗಳಿಸುವಂತೆ ಯೋಜನೆ ಮಾಡಿಕೊಳ್ಳಬೇಕು. ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಕೃಷಿ ಅಳವಡಿಸಿಕೊಳ್ಳುವುದರಿಂದ ಒಂದೇ ಬೆಳೆಯ ಬೆಲೆಯ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು ಮತ್ತು ಆರ್ಥಿಕವಾಗಿ ಸದೃಗೊಳ್ಳಬಹುದು.

 

https://www.youtube.com/watch?v=My_sRzLCNDg&list=PLuN9VcGQAtK5WwZx1slEtAvjt8vv4jrjk&index=12

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: 

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 

ಬರಹ: ರವಿಕುಮಾರ್

 

#kannadablog  #drsoil  #biofertilzer  #microbiagrotech  #agricultureblogs  #agricultureinkannada  #integratedfarming  #organicfarming  #organicrops  #sustainablefarming  #highyield  #healthycrop  #soilhealth  #fertileland  #soilfertility  #biofertilizers  #lowinvestment  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing