Blog

       ಹಳ್ಳಿ ಬಿಟ್ಟು ಪಟ್ಟಣಕ್ಕೆ ಕೆಲಸ ಹುಡುಕಿ ಬರುವ ಈಗಿನ ಯುವಜನತೆಯ ಮಧ್ಯೆ,ಎಂಜಿನಿಯರ್ ಬೆಂಗಳೂರಿನಲ್ಲಿನ ಉದ್ಯೋಗ ಬಿಟ್ಟು ಕೃಷಿ ಮಾಡಲು ಹಳ್ಳಿಗೆ ಬಂದಿದ್ದಾರೆ. ಸಾವಯವ ಕೃಷಿಯ ಕಡೆ ಒಲವು ತೋರಿಸಿ, ಸಾವಯವ ಪದ್ಧತಿಯಲ್ಲಿ ದಾಳಿಂಬೆ ಮತ್ತು ಸೀಬೆ ಬೆಳೆದಿದ್ದಾರೆ. ಇವರು ಕೃಷಿಗೆ ಅದರಲ್ಲೂ ಸಾವಯವ ಕೃಷಿಗೆ ಬಂದ ಕಾರಣ ತಿಳಿಯೋಣ ಬನ್ನಿ

 

      ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಗಡದನಾಯಕನಹಳ್ಳಿ ಗ್ರಾಮದ ಸಂತೋಷ್ ಒಬ್ಬ BE ಪದವೀಧರ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಸಂತೋಷ್ ಅವರು, ಅದರಲ್ಲಿ ತೃಪ್ತಿ ಸಿಗದೆ ಕೃಷಿಯ ಕಡೆಗೆ ಮುಖ ಮಾಡಿದರು. ಅಪ್ಪ-ಚಿಕ್ಕಪ್ಪ ಮಾಡುತ್ತಿದ್ದ ಕೃಷಿಯ ಕಡೆಗೆ ಒಲವು ತೋರಿಸಿ, ಹುಟ್ಟೂರಿಗೆ ವಾಪಸ್ಸಾಗಿದ್ದಾರೆ. ದಾಳಿಂಬೆ ಬೆಳೆದಿರುವ ಇವರು, ಮೊದಲು ರಾಸಾಯನಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದರು. ಪ್ರಸ್ತುತ ಡಾ.ಸಾಯಿಲ್ ಬಳಸುತ್ತಾ ಸಾವಯವ ಕೃಷಿ ಅಳವಡಿಸಿಕೊಂಡಿದ್ದಾರೆ.

 

ಪ್ರಾಯೋಗಿಕವಾಗಿ ಡಾ.ಸಾಯಿಲ್ ಜೈವಿಕ ಗೊಬ್ಬರದ ಫಲಿತಾಂಶ ತಿಳಿಯಲು 1 ಎಕರೆಗೆ ಬಳಸಿದ್ದರು. ಉತ್ತಮ ಫಲಿತಾಂಶ ಬಂದಿದ್ದರ ಪರಿಣಾಮವಾಗಿ ಈಗ ತಮ್ಮ ಎಲ್ಲಾ ಜಮೀನಿಗೆ ಡಾ.ಸಾಯಿಲ್ ಜೈವಿಕ ಗೊಬ್ಬರ ಒಳಸುರಿ ಬಳಸಿದ್ದಾರೆ. ದಾಳಿಂಬೆ ಮತ್ತು ಸೀಬೆ ಎರಡೂ ಬೆಳೆಗೂ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ್ದು, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ದಾಳಿಂಬೆಯ ಬಣ್ಣ ಮತ್ತು ತೂಕ ಎರಡೂ ಹೆಚ್ಚಾಗಿವೆ. ಹಣ್ಣಿನ ರುಚಿ ಕೂಡ ಉತ್ತಮವಾಗಿದೆ. 2013ರಲ್ಲಿ ಕೃಷಿಗೆ ಬಂದ ಸಂತೋಷ್ ನಮ್ಮ ತೋಟದಲ್ಲಿ ಎಂದೂ ಎರೆಹುಳು ಕಂಡಿರಲಿಲ್ಲ, ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಸಾವಯವ ಕೃಷಿ ಅಳವಡಿಸಿಕೊಂಡ ಮೇಲೆ ಈಗ ನೋಡಿದ್ದೇನೆ ಎನ್ನುತ್ತಾರೆ. ಮಣ್ಣು ಈಗ ಮೃದುವಾಗಿದೆ, ಯಾವುದೇ ರೋಗ ಕಾಣಿಸಿಕೊಳ್ಳದಿರುವುದು ಆಶ್ಚರ್ಯ ಎನ್ನುತ್ತಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಮೇಲೆ ಖರ್ಚು ಅರ್ಧ ಆಗಿದ್ದಲ್ಲದೇ ಒಂದು ಗಿಡಕ್ಕೆ 32kg ಹಣ್ಣು ಬಂದಿದೆ, ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 

ತೈವಾನ್ ವೈಟ್ ಸೀಬೆ

 

       ದಾಳಿಂಬೆಯಲ್ಲದೆ  ತೈವಾನ್ ವೈಟ್ ತಳಿಯ ಸೀಬೆಯನ್ನು ಡಾ.ಸಾಯಿಲ್ ಬಳಸಿ ಬೆಳೆದಿದ್ದಾರೆ. ಒಂದು ಸೀಬೆ 600 ಗ್ರಾಂ ವರೆಗೂ ತೂಕ ಬಂದಿದೆ. ಎಲ್ಲಾ ರೈತರು ಡಾ.ಸಾಯಿಲ್ ಬಳಸಿ ಸಾವಯವ ಕೃಷಿ ಮಾಡಬೇಕು, ಇದರಲ್ಲಿ ಒಳ್ಳೆ ಫಲಿತಾಂಶ ಇದೆ ಎಂದು ಸಂತೋಷ್ ಸಂದೇಶ ಕೊಡುತ್ತಿದ್ದಾರೆ.

 

ಪೂರ್ತಿ ವಿಡೀಯೋ ನೋಡಲು, ಸಂತೋಷ್ ಅವರ ತೋಟ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ….

https://www.youtube.com/watch?v=biFY_WDD3Mo&list=PLuN9VcGQAtK7uGjoma0KyhEDYXw8mFJb8&index=3

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233



ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವ, ರೋಗ-ರುಜಿನಗಳ ಪತ್ತೆ, ಪರಿಹಾರ ಮತ್ತು ಶೈಕ್ಷಣಿಕ ವಿಡೀಯೋಗಳಿಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de...

 

ಬರಹ: ರವಿಕುಮಾರ್

 

#kannadablog  #drsoil  #biofertilzer  #microbiagrotech  #agricultureblogs  #agricultureinkannada  #integratedfarming  #organicfarming  #sustainablefarming  #highyield  #healthycrop  #soilhealth  #fertileland  #soilfertility  #biofertilizers  #lowinvestment  #pomegranate  #guava  



Blog




Home    |   About Us    |   Contact    |   
microbi.tv | Powered by Ocat Business Promotion Service in India