Blog

       ಸಾವಯವ ಕೃಷಿ ಉತ್ತಮವೋ ಅಥವಾ ರಾಸಾಯನಿಕ ಕೃಷಿ ಪದ್ಧತಿ ಉತ್ತಮವೋ? ಇದೇ ಈ ಅಪ್ಪ-ಮಗನ ವಾದ. ಮಗನಿಗೆ ಸಾವಯವ ಕೃಷಿ ಹಿಡಿಸಿದರೆ, ಸಾವಯವ ಕೃಷಿ ಪದ್ಧತಿಯಿಂದ ನಷ್ಟದ ಹಾದಿ ಹಿಡಿಯಬೇಕಾಗುತ್ತದೆ ಎಂಬುದು ಅಪ್ಪನ ವಾದ. ಇವರಿಬ್ಬರಲ್ಲಿ ಯಾರು ಸರಿ? ಸಾವಯವ ಕೃಷಿಯಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಎಷ್ಟೋ ರೈತರ ಅನಿಸಿಕೆ. ಆದರೆ ಸಾಯವಯವದಲ್ಲಿ ರಾಸಾಯನಿಕ ಪದ್ಧತಿಗಿಂತ ಕಡಿಮೆ ಖರ್ಚು ಮತ್ತು ಇಳುವರಿ ಹೆಚ್ಚಾಗುತ್ತದೆ.

 

ರಾಸಾಯನಿಕ ಪದ್ಧತಿ ಅನುಸರಿಸುತ್ತಿರುವ ಎಷ್ಟೋ ರೈತರಿಗೆ ರಾಸಾಯನಿಕಗಳ ಬಳಕೆಯಿಂದ ಆಗುತ್ತಿರುವ ಪರಿಣಾಮಗಳು ಮತ್ತು ಅದರ ಕಾರ್ಯಗಳೇನು ಎಂಬುದು ಗೊತ್ತಿಲ್ಲವೆಂಬುದು ಮಗನ ವಾದವಾದರೆ, ಸಾವಯವದಿಂದ ಅಪಾಯ ಎಂಬುದು ಅಪ್ಪನ ವಾದ. ಸಾವಯವ ಪದ್ಧತಿಯಲ್ಲಿ ಕಳೆ ನಿಯಂತ್ರಣ ಮಾಡಲಾಗುವುದಿಲ್ಲ, ಭೂಮಿ ಹೊಂದಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂಬ ಪ್ರಶ್ನೆಗಳಿಗೆ ಮೈಕ್ರೋಬಿ ತಂಡ ಉತ್ತರ ನೀಡಿತು.

 

       ಮಂಡ್ಯ ಜಿಲ್ಲೆಯ ಮೈಕ್ರೋಬಿ ಫೌಂಡೇಶನ್ ಸಂಚಾಲಕರು ಮತ್ತು ಸಂಪನ್ಮೂಲ ವ್ಯಕ್ತಿಯಾದ ಜೋಗಿಗೌಡರು ಸಾವಯವ ಕೃಷಿಯ ಮಹತ್ವ ತಿಳಿಸಿ, ಸಾವಯವ ಪದ್ಧತಿಯಿಂದ ಹೇಗೆ ಲಾಭ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಕಬ್ಬಿನ ಬೆಳೆಯ ಮಧ್ಯೆ ಅಂತರಬೆಳೆ ಬೆಳೆದು ಸಂಪಾದನೆ ಹೆಚ್ಚಿಸಿಕೊಳ್ಳಬಹುದು. ಆದರೆ ಕಬ್ಬಿನ ಮಧ್ಯೆ ದ್ವಿದಳ ಧಾನ್ಯ ಬೆಳೆಯಬೇಕು, ಇದರಿಂದ ಮಣ್ಣಿಗೆ ಸಾರಜನಕ ದೊರಕಿ ಫಲವತ್ತಾಗುತ್ತದೆ ಎಂದು ತಿಳಿಸಿದರು. ಸದ್ಯಕ್ಕೆ ರಾಗಿ ಬೆಳೆದಿರುವ ರೈತರಿಗೆ ಅದರಿಂದಾಗುವ ಅನಾನುಕೂಲದ ಬಗ್ಗೆ ತಿಳಿಸಲಾಯಿತು. ಸಾವಯವ ಕೃಷಿಯಿಂದ ಆಗುವ ಲಾಭಗಳು, ಆದಾಯ ಏರಿಕೆ, ಮಣ್ಣು ಫಲವತ್ತತೆಯ ಬಗ್ಗೆ ತಿಳಿಸಿಕೊಡಲಾಯಿತು.

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ

https://www.youtube.com/watch?v=O3wzgkF56sU

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #organicfarming  #sustainablefarming  #highyield  #healthycrop  #soilhealth  #fertileland  #soilfertility  #biofertilizers  #sugarcane  #lowinvestment  #chemicalfarming  #conventionalfarming  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing