Blog

ಕಡಲೆ ಒಂದು ಅತೀ ಮುಖ್ಯ ವಾಣಿಜ್ಯ ಬೆಳೆ. 2020ರಲ್ಲಿ ಭಾರತವು ಜಾಗತಿಕ ಮೊತ್ತದ ಒಟ್ಟು 73% ರಷ್ಟು ಕಡಲೆಯನ್ನು ಉತ್ಪಾದಿಸಿತ್ತು. ಈ ಮಟ್ಟಿಗೆ ಭಾರತದ ಕಡಲೆಗೆ ಬೇಡಿಕೆಯಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು. ಉತ್ತಮ ಇಳುವರಿಯಿಂದ ಆದಾಯ ಹೆಚ್ಚಿಸಿಕೊಳ್ಳಬಹುದು.

 

       ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಹೆಬ್ಬಾಳ ಗ್ರಾಮದ ರೈತ ವಿರೂಪಾಕ್ಷಪ್ಪ ಲಟ್ಟಿಯವರು 60 ಎಕರೆ ಜಮೀನಿನ ಮಾಲೀಕರು. ತಮ್ಮ 28 ಎಕರೆ ಜಮೀನಿನಲ್ಲಿ ಕಡಲೆ ಬೆಳೆದಿದ್ದಾರೆ. ಪ್ರತಿ ಬಾರಿ ರಾಸಾಯನಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದ ಇವರು, ಈ ಬಾರಿ ಡಾ.ಸಾಯಿಲ್ ಬಳಸಿ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದಾರೆ. ಬಿತ್ತನೆಗೂ ಮುನ್ನ ಡಾ.ಸಾಯಿಲ್ ಬೀಜೋಪಚಾರ ಬಳಸಿ ಬೀಜೋಪಚಾರ ಮಾಡಿದ್ದಾರೆ.

 

ಬೀಜೋಪಚಾರ ಮಾಡುವ ವಿಧಾನಕ್ಕಾಗಿ ಕೆಳಗಿನ ವಿಡೀಯೋ ನೋಡಿ

https://www.youtube.com/watch?v=NfIgs6yB44w&list=PLuN9VcGQAtK7HCkXFX6h2et0NFzC63cSN&index=4

 

ಬೀಜೋಪಚಾರ ಮಾಡಿದ್ದರ ಫಲವಾಗಿ ಎಲ್ಲಾ ಬೀಜಗಳೂ ಮೊಳಕೆಯೊಡೆದಿವೆ ಮತ್ತು ಯಾವುದೇ ರೋಗಗಳಿಲ್ಲದೇ ಆರೋಗ್ಯವಾಗಿ ಬಂದಿವೆ ಎನ್ನುತ್ತಾರೆ ರೈತ ವಿರೂಪಾಕ್ಷಪ್ಪ ಲಟ್ಟಿ. ಮೊದಲ ಬಾರಿಯೇ ಹೂ ಮತ್ತು ಕಾಯಿಗಳು ರಾಸಾಯನಿಕ ಪದ್ಧತಿಯಲ್ಲಿ ಬಂದಿದ್ದಕ್ಕಿಂತ ಹೆಚ್ಚು ಬಂದಿವೆ. ಮೊದಲು ಕೀಟನಾಶಕ ಬಳಸಿದರೂ ಕೀಟಗಳ ಹಾವಳಿ ಕಡಿಮೆಯಾಗುತ್ತಿರಲಿಲ್ಲ ಆದರೆ ಈಗ ಕೀಟ ಸಮಸ್ಯೆ ಇಲ್ಲವಾಗಿದೆ.

       ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಖರ್ಚು ಕಡಿಮೆಯಾಗುತ್ತದೆ ಮತ್ತು ರೋಗ-ಕೀಟಬಾಧೆಗಳು ಕಡಿಮೆಯಾಗುತ್ತವೆ ಎನ್ನುವುದು ವಿರೂಪಾಕ್ಷಪ್ಪ ಲಟ್ಟಿಯವರ ನಿಲುವು. ಎಲ್ಲಾ ರೈತರೂ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಸಂದೇಶ ನೀಡುತ್ತಾರೆ.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=yISg6q95bZc&list=PLuN9VcGQAtK4fwkNlyvDf8B6k5WbrTWCd&index=4

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

Subscribe to Microbi Agrotech: https://youtube.com/c/MICROBIAGROTECH...

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #organicfarming  #sustainablefarming  #highyield  #healthycrop  #soilhealth  #soilfertility  #biofertilizers  #lowinvestment  #chickpea  #chickpeacultivation  



Blog




Home    |   About Us    |   Contact    |   
microbi.tv | Website Promotion and Content Marketing through Ocat Online Catalog in India | Powered by Ocat Digital Pvt.Ltd