Blog

       ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಸರಗೂರು ಗ್ರಾಮದ ಈ ರೈತ ತಮ್ಮ 3.5 ಎಕರೆ ಜಮೀನಿನಲ್ಲಿ ಪಾಲಿಹೌಸ್ ನಲ್ಲಿ ವೀಳ್ಯದೆಲೆ ಬೆಳೆದು ಲಾಭ ಗಳಿಸುತ್ತಿದ್ದಾರೆ. ಪಾನ್ ಮತ್ತಿತರ ಖಾದ್ಯಗಳಲ್ಲಿ ಬಳಸಲಾಗುವ ತಳಿಯನ್ನು ಆಯ್ಕೆ ಮಾಡಿ ಕೃಷಿ ಮಾಡಿದ್ದಾರೆ ರೈತ ಪಾಷಾ. ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಬೆಳೆದಿದ್ದಾರೆ. ಲಕ್ಷಾಂತರ ಜನರು ತಿನ್ನುವ ವೀಳ್ಯದೆಲೆಯನ್ನು ಸಾವಯವದಲ್ಲೇ ಬೆಳೆದು ಜನರಿಗೆ ವಿಷಮುಕ್ತ ಆಹಾರ ಕೊಡಬೇಕು ಎಂದು ಸಾವಯವ ಕೃಷಿ ಆಯ್ದುಕೊಂಡೆ ಎನ್ನುತ್ತಾರೆ ಈ ಯುವ ರೈತ.

 

       ಡಾ.ಸಾಯಿಲ್ ಬಳಸಿದ ಮೇಲೆ ಮಣ್ಣು ಮೃದುವಾಗಿ ಫಲವತ್ತಾಗಿದೆ ಮತ್ತು ಗಿಡಗಳು ಉತ್ತಮವಾಗಿ ಬೆಳೆದಿವೆ. ಶೇಕಡಾ 60-70 ರಷ್ಟು ಇಳುವರಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪಾಷಾರವರು ಹೇಳುತ್ತಾರೆ. ಫ್ಯಾಬ್ರಿಕೇಶನ್ ಬಿಸಿನೆಸ್ ಮಾಡುತ್ತಾ ಕೃಷಿಯನ್ನೂ ಮಾಡುತ್ತಿರುವ ಇವರ ಜಮೀನಿನಲ್ಲಿ ಎರೆಹುಳುಗಳು ವೃದ್ಧಿಸಿವೆ.

     ಡಾ.ಸಾಯಿಲ್ ಕಡಿಮೆ ದರ ಮತ್ತು ಸುಲಭವಾಗಿ ಬಳಸಬಹುದಾದ ಉತ್ಪನ್ನವಾಗಿರುವುದರಿಂದ ಕೃಷಿ ಸುಲಭವಾಗುತ್ತದೆ. ಹಾಗಾಗಿ ಎಲ್ಲಾ ರೈತರೂ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಪಾಷಾ ಅವರು ಸಂದೇಶ ನೀಡುತ್ತಿದ್ದಾರೆ.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ….

https://www.youtube.com/watch?v=G7mi7WOeEKw&list=PLuN9VcGQAtK4664T6xrRkxAta-bsJNVtG

 

ಸಾವಯವ ಕೃಷಿಯ ಮಾಹಿತಿಗಾಗಿ ಸಂಪರ್ಕಿಸಿ: 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #organicfarming  #sustainablefarming  #highyield  #healthycrop  #soilhealth  #fertileland  #soilfertility  #biofertilizers  #lowinvestment  #betelleaf  #betelleafcultivation  #organicbetelleaf  



Blog




Home    |   About Us    |   Contact    |   
microbi.tv | Powered by Ocat Online Advertising Service in India