ಸಾವಯವ ಮತ್ತು ನೈಸರ್ಗಿಕ ಕೃಷಿ ನಮ್ಮ ಪೂರ್ವಜರು ನಮಗೆ ಕೊಟ್ಟ ಬಳುವಳಿ. ಈ ಪದ್ಧತಿಯಲ್ಲಿ ಖರ್ಚು ಕಡಿಮೆ ಮತ್ತು ಇದರಿಂದ ಬಂದ ಫಸಲು ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿತ್ತು. ಆದರೆ ಈಗ ರಾಸಾಯನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗಳು ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಲಬುರಗಿ ಜಿಲ್ಲೆಯ ಜನಪ್ರಿಯ ನಾಯಕರು ಮತ್ತು ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಅವರು ಕೂಡ ಸಾವಯವ ಕೃಷಿಯ ಕಡೆ ಒಲವು ತೋರಿಸಿದ್ದಾರೆ.
ಅಫ್ಜಲ್ ಪುರ ತಾಲ್ಲೂಕಿನಲ್ಲಿರುವ ಶ್ರೀಯುತರ ಜಮೀನಿಗೆ ಭೇಟಿ ನೀಡಿದ ಮೈಕ್ರೋಬಿ ತಂಡ ಡಾ.ಸಾಯಿಲ್ ಮತ್ತು ಸಾವಯವ ಕೃಷಿಯ ಬಗ್ಗೆ ತಿಳಿಸಿತು. ಮಾಲೀಕಯ್ಯ ಗುತ್ತೇದಾರ್ ಅವರು ಟಿವಿಯಲ್ಲಿ ಡಾ.ಸಾಯಿಲ್ ಬಗ್ಗೆ ನೋಡಿದ್ದು, ಎರೆಹುಳುಗಳ ಅಭಿವೃದ್ಧಿ, ಮಣ್ಣು ಫಲವತ್ತತೆಯ ಅಭಿವೃದ್ಧಿಯ ಕಾರ್ಯವನ್ನು ಶ್ಲಾಘಿಸಿದರು. ಸಾವಯವ ಕೃಷಿಗೆ ಎಲ್ಲರೂ ಬರಬೇಕು ಎಂದು ಹೇಳಿದರು.
ತಮ್ಮ ಜಮೀನಿನ 6 ಎಕರೆಯಲ್ಲಿ ಡಾ.ಸಾಯಿಲ್ ಬಳಸಲು ಒಪ್ಪಿ ಮೈಕ್ರೋಬಿ ಸಂಸ್ಥೆಯ ಮಾರ್ಗದರ್ಶನ ಮತ್ತು ಸಲಹೆಯಂತೆ ನಡೆಯಲಿ ಎಂದು ಹೇಳಿದರು.
ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಅವರ ಸಂದರ್ಶನ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ…
https://www.youtube.com/watch?v=lg2QXajv6sM&t=15s
ಬರಹ: ರವಿಕುಮಾರ್
#kannadablog #drsoil #microbiagrotech #agricultureblogs #agricultureinkannada #organicfarming #integratedfarming #highyield #healthycrop #plantnutrition #cultivationtechniques #highyieldhighincome #sugarcane #sugarcanefarming #diseasecontrol
Blog