Blog

ಅಡಿಕೆ ತೋಟದಲ್ಲಿ ಸೌತೆಕಾಯಿ ಬೆಳೆದರೆ ಏನಾಗುತ್ತೆ? ತೋಟ ಹಾಳಾಗುತ್ತಾ? ಖಂಡಿತ ಇಲ್ಲಾ. ಆದರೆ ರಾಸಾಯನಿಕ ಬಳಸಿ ಬೆಳೆಯುವುದರಿಂದ ಅಡಿಕೆ ತೋಟ ಹಾಳಾಗುವುದು ಗ್ಯಾರಂಟಿ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ದೇವರಳ್ಳಿ ಗ್ರಾಮದ ಲೋಕೇಶ್ ಅವರು 240 ಅಡಿಕೆ ಮರಗಳನ್ನು ಹೊಂದಿದ್ದಾರೆ. ಮೊದಲು ಇವರು ರಾಸಾಯನಿಕ ಬಳಸುತ್ತಿದ್ದರು. ಮೈಕ್ರೋಬಿಯ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ಅವರು ಲೋಕೇಶ್ ಅವರಿಗೆ ಸಾವಯವ ಪದ್ಧತಿಯ ಬಗ್ಗೆ ತಿಳಿಸಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಲು ಸಲಹೆ ನೀಡಿದರು. ಕಳೆದ ವರ್ಷದಿಂದ ಡಾ.ಸಾಯಿಲ್ ಬಳಸುತ್ತಿರುವ ಇವರು ಉತ್ತಮ ಫಲಿತಾಂಶ ಕಂಡಿದ್ದಾರೆ. ಹೊಂಬಾಳೆ ಉದ್ದ ಬರುತ್ತಿದ್ದು, ಕಾಯಿಗಳೂ ಕೂಡ ಅಧಿಕವಾಗಿ ಬರುತ್ತಿದೆ ಎನ್ನುತ್ತಾರೆ.

       ಇನ್ನೊಬ್ಬ ರೈತರಾದ ರಾಮನಾಥಪ್ಪರವರು ಪದವೀಧರರು. ಆದರೂ ಕೃಷಿಯಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಇವರೂ ಕೂಡ ಸಾವಯವ ಕೃಷಿಕರಾಗಿದ್ದು ಡಾ.ಸಾಯಿಲ್ ಬಳಸಿ ಹೊಸ ಅಡಿಕೆ ಗಿಡಗಳನ್ನು ನೆಡಲು ಮುಂದಾಗಿದ್ದಾರೆ. ಸಾವಯವ ಕೃಷಿಯಲ್ಲಿ ತ್ಯಾಜ್ಯಗಳ ಬಳಕೆ ಮತ್ತುಉ ಳುಮೆ ಮಾಡದೇ ಇರುವುದರಿಂದ ಲಕ್ಷಾಂತರ ರೂಪಾಯಿ ಉಳಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಡಾ.ಸಾಯಿಲ್ ಬಳಸಿದ್ದರಿಂದ ಹರಳು ಉದುರುವಿಕೆ ಕಡಿಮೆಯಾಗಿದೆ, ಖರ್ಚು ಕಡಿಮೆಯಾಗಿದೆ ಎಂದು ಖುಷಿಯಿಂದ ಹೇಳುತ್ತಾರೆ.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ…..

https://www.youtube.com/watch?v=weMHuCnQ0Kk&t=1s

 

ಬರಹ: ರವಿಕುಮಾರ್

 

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #highyield  #healthycrop  #soilhealth  #fertileland  #soilfertility  #biofertilizers  #organicfertilizers  #areca  #arecanut  



Blog




Home    |   About Us    |   Contact    |   
microbi.tv | Powered by Ocat Online Advertising Service in India