Blog

       ಎರೆಹುಳುಗಳ ಸಂಖ್ಯೆ ಒಂದು ಜಮೀನಿನ ಫಲವತ್ತತೆಯನ್ನು ತೋರಿಸುತ್ತದೆ. ಮಣ್ಣಿನ ಫಲವತ್ತತೆಯ ಸೂಚಕ ಎರೆಹುಳು ಎನ್ನಬಹುದು. ಹೇರಳವಾಗಿ ಎರೆಹುಳುಗಳು ಇವೆ ಎಂದರೆ ಮಣ್ಣಿನಲ್ಲಿ ಸಾವಯವ ತ್ಯಾಜ್ಯಗಳು ಹೇರಳವಾಗಿವೆ ಎಂದರ್ಥ. ಮೈಕ್ರೋಬಿ ಸಂಸ್ಥೆಯು ರೈತರಿಗೆ ಸಾವಯವ ಕೃಷಿಯ ಬಗ್ಗೆ ದಶಕದಿಂದ ತಿಳಿಸುತ್ತಾ ಬಂದಿದೆ. ರೈತರನ್ನು ಸಾವಯವದ ಕಡೆ ಹೋಗಲು ಪ್ರೇರೇಪಿಸುತ್ತಿದೆ. ಎರೆಹುಳುಗಳ ಜೊತೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಮೈಕೋರೈಜಾದ ಅಭಿವೃದ್ಧಿಯಾಗುತ್ತದೆ. ಇದು ಬೆಳೆಗಳ ಬೇರಿಗೆ ಅಂಟಿ ಇನ್ನೂ ವಿಸ್ತಾರವಾಗಿ ಹರಡುತ್ತವೆ ಮತ್ತು ಸಸ್ಯಗಳಿಗೆ ಎಟುಕದ ಪೋಷಕಾಂಶಗಳನ್ನು ಸಸ್ಯಗಳ ಬೇರುಗಳಿಗೆ ರವಾನಿಸುತ್ತದೆ. ಬೇರುಗಳಿಗೆ ಹೆಲ್ಮೆಟ್ ರೀತಿ ಸುರಕ್ಷತೆ ನೀಡುತ್ತದೆ.

 

ಎರೆಹುಳುಗಳು ಮಣ್ಣಿನಲ್ಲಿ ಇರುವುದರಿಂದ ಆಗುವ ಲಾಭಗಳು

- ಎರೆಹುಳುಗಳು ಮಾಡುವ ರಂಧ್ರಗಳಿಂದ ಮಣ್ಣು ಸಡಿಲಗೊಳ್ಳುತ್ತದೆ. ಇದರಿಂದ ನೀರು ಇಂಗುವ ಸಾಮರ್ಥ್ಯ ಹೆಚ್ಚಾಗುತ್ತದೆ.

- ತ್ಯಾಜ್ಯಗಳನ್ನು ತಿಂದು ಸಸ್ಯಗಳಿಗೆ ಬೇಕಾದ ಪೋಷಕಾಂಶಗಳಾಗಿ ಪರಿವರ್ತಿಸುತ್ತದೆ.

- ಕೆಳ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಮೇಲ್ಮಣ್ಣಿಗೆ ತರುತ್ತದೆ.

 

       ಹೀಗೆ ಹಲವಾರು ರೀತಿ ಬೆಳೆಗಳ ಸಮೃದ್ಧ ಬೆಳವಣಿಗೆಗೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಎರೆಹುಳು ಸಹಾಯ ಮಾಡುತ್ತದೆ. ಹೆಚ್ಚಿನ ಇಳುವರಿ ಮತ್ತು ಮಣ್ಣನ್ನು ಫಲವತ್ತಾಗಿಸಲು ರೈತರು ಎರೆಹುಳುಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ನೋಡಬೇಕು. ಅದಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡಬೇಕು.

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ

https://www.youtube.com/watch?v=IaAP2bAIj74&t=1s

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #highyield  #healthycrop  #soilhealth  #fertileland  #soilfertility  #biofertilizers  #organicfertilizers  #earthworm  #vermicompost  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing