Blog

       ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯು ಕೃಷಿ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಷಯ. ರಾಸಾಯನಿಕ ಪದ್ಧತಿಯಿಂದ ಸಾವಯವ ಪದ್ಧತಿಯ ಕಡೆ ಬರಲು ಜನರು ಒಲವು ತೋರುತ್ತಿದ್ದಾರೆ. ವಿಷಮುಕ್ತ ಆಹಾರದ ಕಡೆ ಗ್ರಾಹಕರ ಬೇಡಿಕೆ ಹೆಚ್ಚಿರುವುದರಿಂದ ಮತ್ತು ಸಾವಯವ ಪದ್ಧತಿಯ ಕಡಿಮೆ ಖರ್ಚಿನ ಲಾಭಗಳಿಂದ ರೈತರು ಸಾವಯವದ ಕಡೆ ತಿರುಗುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳು ಅವಿಭಾಜ್ಯ ಅಂಗ ಮತ್ತು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ.

 

ಜೈವಿಕ ಗೊಬ್ಬರಗಳು ಎಂದರೇನು?

       ಜೈವಿಕ ಗೊಬ್ಬರಗಳು ಉಪಕಾರಿ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವ ಪದಾರ್ಥಗಳಾಗಿವೆ. ಇವು ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಸಸ್ಯಗಳು ಮತ್ತು ಮರಗಳ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಮಣ್ಣಿನ ಫಲವತ್ತತೆಯನ್ನು ಪುನಃಸ್ಥಾಪಿಸಲು ಜೈವಿಕ ಗೊಬ್ಬರಗಳ ಅಗತ್ಯವಿದೆ. ರಾಸಾಯನಿಕ ಗೊಬ್ಬರಗಳ ದೀರ್ಘಾವಧಿಯ ಬಳಕೆಯಿಂದ ಮಣ್ಣು ಹಾಳಾಗುತ್ತದೆ ಮತ್ತು ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ ಜೈವಿಕ ಗೊಬ್ಬರಗಳು ಸಾರಜನಕ, ಜೀವಸತ್ವಗಳು ಮತ್ತು ಪ್ರೋಟೀನ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸುತ್ತವೆ. ಇವು ರಸಗೊಬ್ಬರಗಳ ನೈಸರ್ಗಿಕ ರೂಪವಾಗಿವೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.

 

ಜೈವಿಕ ಗೊಬ್ಬರಗಳನ್ನು ಏಕೆ ಬಳಸಬೇಕು?


- ಇವು ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದಲ್ಲಿ ಸಿಗುತ್ತವೆ.

- ಜೈವಿಕ ಗೊಬ್ಬರಗಳು ಮಣ್ಣಿನ ರಚನೆ ಮತ್ತು ಇಳುವರಿಯನ್ನು ಉತ್ತಮಗೊಳಿಸುತ್ತವೆ.

- ರೈತನ ಮಿತ್ರ ಎರೆಹುಳುಗಳ ಸಂಖ್ಯೆ ಹೆಚ್ಚಾಗಲು ಸಹಾಯ ಮಾಡುತ್ತವೆ.

- ಅಪಕಾರಿ ರೋಗಕಾರಕ ಸೂಕ್ಷ್ಮಜೀವಿಗಳು ಅಭಿವೃದ್ಧಿನ್ನು ತಡೆಯುತ್ತವೆ.

- ಸಸ್ಯ ರೋಗಗಳಿಗೆ ಕಾರಣವಾಗುವ ಮಣ್ಣಿನಲ್ಲಿರುವ ಅನೇಕ ಹಾನಿಕಾರಕ ವಸ್ತುಗಳನ್ನು ನಾಶಪಡಿಸುತ್ತವೆ.

- ಜೈವಿಕ ಗೊಬ್ಬರಗಳು ಮಣ್ಣಿನ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

- ಜೈವಿಕ ಗೊಬ್ಬರಗಳು ಅರೆ-ಶುಷ್ಕ ಅಥವಾ ಕಡಿಮೆ ಮಳೆಯಾಗುವ ಪರಿಸ್ಥಿತಿಗಳಲ್ಲಿಯೂ ಸಹ ಪರಿಣಾಮಕಾರಿ ಎಂದು ಸಾಬೀತಾಗಿದೆ.

- ಜೈವಿಕ ಗೊಬ್ಬರಗಳು ನೈಸರ್ಗಿಕ ಗೊಬ್ಬರಗಳಾಗಿರುವುದರಿಂದ ಮಾಲಿನ್ಯಕಾರಕಗಳಿಂದ ಪರಿಸರವನ್ನು ರಕ್ಷಿಸುತ್ತದೆ.

 

ರಾಸಾಯನಿಕ ಗೊಬ್ಬರ

- ವಿಷಯುಕ್ತ ಆಹಾರ.

- ರಾಸಾಯನಿಕ ಗೊಬ್ಬರಗಳು ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗಿವೆ.

- ರಾಸಾಯನಿಕ ಬಳಕೆಯಿಂದ ಉಪಕಾರಿ ಸೂಕ್ಷ್ಮಜೀವಿಗಳು ನಶಿಸಿ ಮಣ್ಣು ಗಟ್ಟಿಯಾಗುತ್ತದೆ.

- ಅಪಕಾರಿ ರೋಗಕಾರಕ ಸೂಕ್ಷ್ಮಜೀವಿಗಳು ವೃದ್ಧಿಸುತ್ತವೆ.

- ಮಣ್ಣಿನ ಸಾವಯವ ಇಂಗಾಲ ಕ್ಷೀಣಿಸುತ್ತದೆ.

- ರಾಸಾಯನಿಕ ಗೊಬ್ಬರ ಬಳಸುವ ರೈತರಿಗೂ ಆರೋಗ್ಯ ಸಮಸ್ಯೆ.

 

       ಸಾವಯವ ಪದ್ಧತಿಯಿಂದ ಕೇವಲ ಮಣ್ಣಿನ ಆರೋಗ್ಯವಲ್ಲದೆ, ಮನುಷ್ಯರ ಆರೋಗ್ಯವೂ ವೃದ್ಧಿಸುತ್ತದೆ. ಸಾವಯವ ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ಜೈವಿಕ ಗೊಬ್ಬರಗಳು ಸೂಕ್ಷ್ಮಾಣು ಜೀವಿಗಳ ಆಗರವೇ ಆಗಿದ್ದು, ಬಳಸಲು ಸುರಕ್ಷಿತವಾಗಿದೆ. ಇವುಗಳ ಬಳಕೆಯಿಂದ ಬೆಳೆಗಳ ಇಳುವರಿ ಹೆಚ್ಚಾಗುವುದಲ್ಲದೇ ರೋಗ ಮತ್ತು ಕೀಟಬಾಧೆಗಳು ಕಡಿಮೆಯಾಗುತ್ತವೆ.

 

ಡಾ.ಸಾಯಿಲ್ ಜೈವಿಕ ಗೊಬ್ಬರಗಳು

https://www.youtube.com/watch?v=tGE1lbFXPlw&list=PLuN9VcGQAtK6PIM0r-95GXEbgMY1NptMX

 

ಬರಹ: ರವಿಕುಮಾರ್

 




Blog




Home    |   About Us    |   Contact    |   
microbi.tv | Powered by Ocat Business Promotion Service in India