Blog

       ವಿಜಯಪುರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ರೈತ ಮುದ್ದಿ ನಿಂಗಪ್ಪ ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಇಲ್ಲಿಯವರೆಗೆ ರಾಸಾಯನಿಕ ಬಳಸಿ ಕೃಷಿ ಮಾಡಿದ್ದ ಇವರು, ಸಾವಯವ ಕೃಷಿಯ ಫಲಿತಾಂಶ ನೋಡಿ ಬೆರಗಾಗಿದ್ದಾರೆ. ಹಾಗಾದರೆ ಇವರು ಅನುಸರಿಸಿರುವ ಕ್ರಮಗಳೇನು? ಇವರ ಅನುಭವವೇನು ತಿಳಿಯೋಣ.

 

       ರಾಸಾಯನಿಕ ಕೃಷಿ ಪದ್ಧತಿಯಿಂದ ಸಾವಯವ ಪದ್ಧತಿಯ ಕಡೆ ಪ್ರಯಾಣ ಪ್ರಾರಂಭಿಸಿರುವ ನಿಂಗಪ್ಪ ಅವರು, ಪ್ರಾಯೋಗಿಕವಾಗಿ 1 ಎಕರೆಯಲ್ಲಿ ಡಾ.ಸಾಯಿಲ್ ಬಳಸಿ ಕೃಷಿ ಮಾಡಿದರು. ಈಗ ತಮ್ಮ 13 ಎಕರೆಯಲ್ಲಿ ಸಾವಯವ ಕೃಷಿ ಮಾಡಲು ತಯಾರಾಗಿದ್ದಾರೆ. 1 ಎಕರೆಯಲ್ಲಿ ಮೆಣಸಿನ ಕಾಯಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದಾರೆ. ಅಕ್ಕಪಕ್ಕದ ಜಮೀನಿನಲ್ಲಿ ಮೆಣಸಿನ ಕಾಯಿ ಬೆಳೆಗೆ ಮುಟುರು ರೋಗದಂತಹ ರೋಗ-ರುಜಿನಗಳು ಬಂದಿದ್ದರೂ, ಇವರ ಬೆಳೆ ಆರೋಗ್ಯವಾಗಿ ಸಮೃದ್ಧವಾಗಿದೆ. ಇದರ ಶ್ರೇಯಸ್ಸು ಡಾ.ಸಾಯಿಲ್ ಬಳಸಿ ಮಾಡಿದ ಸಾವಯವ ಕೃಷಿಗೆ ಕೊಡುತ್ತಾರೆ ರೈತ ಮುದ್ದಿ ನಿಂಗಪ್ಪ. ಡಾ.ಸಾಯಿಲ್ ಬಳಸಿದ ಮೇಲೆ ಕೊತ್ತಂಬರಿ ಸೊಪ್ಪು ಉತ್ತಮವಾಗಿ ಬೆಳೆದು 35,000 ರೂ. ಗಳಿಸಿದೆ ಎಂದು ಹೇಳುತ್ತಾರೆ.

 

       ಡಾ.ಸಾಯಿಲ್ ಬೀಜೋಪಚಾರ್, ಸ್ಲರಿ ಬಳಸಿದ್ದಾರೆ. ಗಿಡಗಳಲ್ಲಿ ಬಿಳಿಬೇರುಗಳ ಬೆಳವಣಿಗೆ ಉತ್ತಮವಾಗಿದ್ದು, ಮಣ್ಣು ಕೂಡ ಮೃದುವಾಗಿದೆ. ಒಣಗಿದ್ದ ಟೊಮೇಟೊ ಗಿಡಗಳು ಕೂಡ ಡಾ.ಸಾಯಿಲ್ ಸ್ಪ್ರೇ ನಂತರ ಚಿಗುರೊಡೆದಿದೆ ಎಂದು ಉತ್ಸಾಹದಿಂದ ಹೇಳುತ್ತಾರೆ ರೈತ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ರಾಸಾಯನಿಕ ಪದ್ಧತಿಯಲ್ಲಿ ಉತ್ತಮ ಇಳುವರಿ ಸಿಗುತ್ತಿರಲಿಲ್ಲಿ, ಈಗ ಕೇವಲ 3 ಸಾವಿರ ರೂ ನಲ್ಲಿ ಉತ್ಕೃಷ್ಟ ಬೆಳೆ ತೆಗೆಯುತ್ತಿದ್ದಾರೆ.

       ಡಾ.ಸಾಯಿಲ್ ಬಳಸಿ ಸಾವಯವ ಕೃಷಿ ಮಾಡಿದರೆ ರೈತರು ಉಳಿಯಬಹುದು, ಲಾಭ ಗಳಿಸಬಹುದು ಎಂಬುದು ಇವರ ಆಶಯ. ಎಲ್ಲಾ ರೈತರೂ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ರೈತ ಮುದ್ದಿ ನಿಂಗಪ್ಪ.

 

ಇವರ ಪೂರ್ತಿ ಸಂದರ್ಶನ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಡಿಯೋ ನೋಡಿ….

https://www.youtube.com/watch?v=_vNMLmNncsg

 

ಬರಹ: ರವಿಕುಮಾರ್

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing