Blog

ರೈತ ಬದಲಾದರೆ ತೋಟ ಬದಲಾಗುತ್ತಾ? ಬಹುತೇಕ ರೈತರಿಗೆ ಸರಿಯಾದ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನದ ಅರಿವಿನ ಕೊರತೆಯಿಂದ ಕೃಷಿಯಲ್ಲಿ ತಪ್ಪು ಮಾಡುತ್ತಿದ್ದಾರೆ. ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಉತ್ತಮ ಬೆಳೆ ಬೆಳೆಯಲಾಗದೆ ನಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾದರೆ ರೈತ ಹೇಗೆ ಬದಲಾಗಬೇಕು? ಇದರಿಂದ ಏನು ಲಾಭ?

 

       ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ದಾದಾಪೀರ್ ಇವರು ಸುಮಾರು 20 ವರ್ಷದಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತೋಟಗಾರಿಕೆ ಬೆಳೆಗಳಾದ ಪಪ್ಪಾಯ, ಅಡಿಕೆ ಇತ್ಯಾದಿ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಮೈಕ್ರೋಬಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಮಹದೇವಪ್ಪ ಅವರು ಜಮೀನಿಗೆ ಭೇಟಿ ನೀಡಿ ಕೃಷಿಕರು ಮಾಡುತ್ತಿರುವ ತಪ್ಪುಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.

 

ದಾದಾಪೀರ್ ಅವರ ತೋಟದಲ್ಲಿ ಡಾಡಿ, ಅಲ್ಲಿನ ಮಣ್ಣಿನ ಪರಿಶೀಲನೆ ಮಾಡಿದರು. ರಾಸಾಯನಿಕ ಬಳಕೆಯಿಂದ ಮಣ್ಣು ಫಲವತ್ತತೆ ಕಳೆದುಕೊಂಡು ಮಣ್ಣು ಗಟ್ಟಿಯಾಗಿದೆ. ಇದರ ಪರಿಣಾಮ ಮಣ್ಣಿನಲ್ಲಿ ಎರೆಹುಳುಗಳು ಇಲ್ಲವಾಗಿವೆ. ಬರಿಗಾಲಲ್ಲಿ ಡಾಡಿದರೆ ಮುಳ್ಳಿನ ಹಾಗೆ ಚುಚ್ಚುತ್ತದೆ ಎಂಬುದನ್ನು ರೈತರು ತಿಳಿದುಕೊಂಡಿದ್ದಾರೆ. 9 ತಿಂಗಳ ಅಡಿಕೆ ಸಸಿ ನೆಟ್ಟು 3 ತಿಂಗಳಾದರೂ ಬೆಳವಣಿಗೆ ಕುಂಠಿತವಾಗಿದೆ. ಇದರ ಕಾರಣ ಮಣ್ಣಿನ ಫಲವತ್ತತೆ ಕಳೆದುಕೊಂಡಿರುವುದು ಎಂಬುದನ್ನು ರೈತರಿಗೆ ಅರ್ಥೈಸಲಾಯಿತು.

       ತೋಟ, ಜಮೀನು ಬದಲಾಗಬೇಕಾದರೆ ರೈತ ಬದಲಾಗಬೇಕು. ನವೀನ ತಂತ್ರಜ್ಞಾನಗಳ ಅರಿವು ಬರಬೇಕು. ಕಲಿಯುವ ಮನೋಗುಣ ಬೆಳೆಯಬೇಕು. ದೇಶದ ರೈತರು ಕಲಿತು ಕೃಷಿ ಪದ್ಧತಿಯಲ್ಲಿ ಬದಲಾವಣೆ ತಂದರೆ, ಖಂಡಿತ ಕೇವಲ ಅಡಿಕೆ ತೋಟವಲ್ಲ ಎಲ್ಲಾ ಕೃಷಿಭೂಮಿಯಲ್ಲೂ ಬದಲಾವಣೆ ತರಬಹುದು.

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ

https://www.youtube.com/watch?v=3C8LEX7NCUI

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #highyield  #healthycrop  #soilhealth  #arecafarming  #arecanut  #arecayield  #soilhealth  #fertileland  #soilfertility  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing