Blog

ಜಮೀನಿಗೆ ಮಣ್ಣು ಹೊಡೆಸುವುದರಿಂದ ಮಣ್ಣು ಫಲವತ್ತಾಗಿ, ಬೆಳೆಗಳು ಉತ್ತಮವಾಗಿ ಬರುತ್ತವೆ ಎಂಬುದು ಬಹುತೇಕ ರೈತರ ಅನಿಸಿಕೆ. ಎಲ್ಲಿಂದಲೋ ಮಣ್ಣು ತರಿಸಲು ಹಣ ಸುರಿಯುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಇದರ ಪ್ರಯೋಜನ ಎಷ್ಟು? ಇದರಿಂದ ನಿಜವಾಗಿಯೂ ಮಣ್ಣು ಫಲವತ್ತಾಗುತ್ತದೆಯೇ? ಉತ್ತಮ ಇಳುವರಿ ನಿರೀಕ್ಷಿಸಬಹುದೇ? ಇಲ್ಲೊಬ್ಬ ರೈತರು ತಮ್ಮ ಅನುಭವ ಹಂಚಿಕೊಂಡಿದ್ದಾರೆ ನೋಡೋಣ ಬನ್ನಿ…..

       ದಾವಣಗೆರೆ ಜಿಲ್ಲೆಯ ದಿಂಡರಹಳ್ಳಿ ಗ್ರಾಮದ ರುದ್ರೇಶ್ ಅಡಿಕೆ ಬೆಳೆಗಾರರು. ಎಲ್ಲಾ ರೈತರಂತೆ ಉತ್ತಮ ಅಡಿಕೆ ತೋಟ ಮಾಡುವುದು ಇವರ ಆಶಯ. ಆದರೆ ನಿರ್ವಹಣೆಯಲ್ಲಿ ಮಾಡಿದ ತಪ್ಪು ಮತ್ತು ರೋಗ ಬಾಧೆಯಿಂದ ಸುಮಾರು 900 ಅಡಿಕೆ ಮರಗಳನ್ನು ಕಳೆದುಕೊಂಡಿದ್ದಾರೆ. ಕೃಷಿಯಲ್ಲಿ ಮಣ್ಣಿನ ನಿರ್ವಹಣೆ ಮತ್ತು ಫಲವತ್ತತೆ ತುಂಬಾ ಮುಖ್ಯ ಎಂದು ಇವರು ಹೇಳುತ್ತಾರೆ. ಮಣ್ಣು ಹೊಡೆಸಿದರೆ ಮಣ್ಣು ಫಲವತ್ತಾಗುತ್ತದೆ ಎಂಬ ಇವರ ಅನಿಸಿಕೆ ಸುಳ್ಳಾಗಿ 900 ಅಡಿಕೆ ಮರಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಇರುವ ಮಣ್ಣನ್ನೇ ಫಲವತ್ತು ಮಾಡಿ ಖರ್ಚನ್ನು ಕಡಿಮೆ ಮಾಡಿಕೊಳ್ಳಬಹುದು. ಇವರ ಪೂರ್ತಿ ಸಂದರ್ಶನ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=iZmtoANgs78&t=161s

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #highyield  #healthycrop  #soilhealth  #arecafarming  #arecanut  #arecayield  #soilhealth  #fertileland  #soilfertility  



Blog




Home    |   About Us    |   Contact    |   
microbi.tv | Powered by Ocat Online Advertising Service in India