ಸಾವಯವ ಕೃಷಿಯಲ್ಲಿ ಇಳುವರಿ ಹೆಚ್ಚುವುದಿಲ್ಲ ಎಂದು ಹೇಳುವವರು ಇದನ್ನು ಓದಲೇಬೇಕು. ರಾಸಾಯನಿಕ ಕೃಷಿಯಲ್ಲಿ ಖರ್ಚು ಹೆಚ್ಚು ಮತ್ತು ಆದಾಯ ಕಡಿಮೆ. ಇದರ ಜೊತೆ ಮಣ್ಣನ್ನು ಕೂಡ ಹಾಳು ಮಾಡುತ್ತದೆ. ಮಣ್ಣಿನ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಇಲ್ಲೊಬ್ಬ ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.
ರಾಯಚೂರು ಜಿಲ್ಲೆ, ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಈ ರೈತ, ಶೇಂಗಾ ಬೆಳೆದು ಡಬಲ್ ಆದಾಯ ಪಡೆದು ಇತರರಿಗೆ ಉದಾಹರಣೆಯಾಗಿದ್ದಾರೆ. ಕಳೆದ ಬಾರಿ ಬೆಳೆದ ಶೇಂಗಾಕ್ಕಿಂತ ಉತ್ತಮ ಇಳುವರಿ ಪಡೆದಿದ್ದಾರೆ. ರಾಸಾಯನಿಕ ಪದ್ಧತಿಯಲ್ಲಿ ಬೆಳೆದಾಗ 50-55 ಸಾವಿರ ರೂ. ಆದಾಯ ಗಳಿಸುತ್ತಿದ್ದ ರೈತ ಈಗ, 1.05 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಡಾ.ಸಾಯಿಲ್ ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಇವರ ಜಮೀನಿನಲ್ಲಿ ಮಣ್ಣು ಫಲವತ್ತಾಗಿ, ಎರೆಹುಳುಗಳು ಕಾಣಿಸತೊಡಗಿವೆ. ಈ ಪದ್ಧತಿಯಲ್ಲಿ ಖರ್ಚು ಕೂಡ ಕಡಿಮೆಯಾಗಿದೆ. ಕೇವಲ 3-4 ಸಾವಿರ ರೂ. ಖರ್ಚಿನಲ್ಲಿ 1 ಲಕ್ಷ ಆದಾಯ ಗಳಿಸಿರುವುದು ಶ್ಲಾಘನೀಯ ಸಂಗತಿ ಮತ್ತು ಸಾವಯವ ಕೃಷಿಯಿಂದ ಅಧಿಕ ಆದಾಯ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ…
https://www.youtube.com/watch?v=kP4iMSa0stE
ಬರಹ: ರವಿಕುಮಾರ್
Blog