ಅಡಿಕೆಯಲ್ಲಿ ಇಳುವರಿ ಕಡಿಮೆಯಾಗಲು ಕಾರಣ ಏನು ಗೊತ್ತಾ? ಅಧಿಕ ಆದಾಯ ಕೊಡುವ ಅಡಿಕೆಯಲ್ಲಿ ರೈತರು ಮುಗ್ಗರಿಸುವುದೇಕೆ? ಯಾವ ತಪ್ಪುಗಳಿಂದ ಅಡಿಕೆ ತೋಟದಲ್ಲಿ ರೋಗ-ರುಜಿನಗಳು ಕಾಣಿಸಿಕೊಳ್ಳುತ್ತವೆ?
ಇಳುವರಿ ಹೆಚ್ಚಿಸಿಕೊಂಡರೆ ಅಡಿಕೆಯಿಂದ ಒಬ್ಬ ರೈತ ಉತ್ತಮ ಆದಾಯ ಗಳಿಸಬಹುದು. ಆದರೆ ಉತ್ತಮ ಇಳುವರಿ ಬರಲು ನಿರ್ವಹಣೆ ಮತ್ತು ಪೋಷಕಾಂಶಗಳನ್ನು ಒದಗಿಸುವುದು ಅಗತ್ಯ. ಇದನ್ನು ತಿಳಿಸಲು ಮೈಕ್ರೋಬಿ ಆಗ್ರೋಟೆಕ್ ನ ಸಂಪನ್ಮೂಲ ವ್ಯಕ್ತಿಗಳು ಅಡಿಕೆ ತೋಟಕ್ಕೆ ಭೇಟಿ ನೀಡಿ ರೈತರಿಗೆ ತೋಟದ ನಿರ್ವಹಣೆಯನ್ನು ತಿಳಿಸುತ್ತಾ ಸಾಗಿದ್ದಾರೆ. ರೈತರಿಗೆ ಸಾವಯವ ಕೃಷಿಯ ಮಹತ್ವವನ್ನು ತಿಳಿಸುತ್ತಾ, ಕೃಷಿಯಲ್ಲಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುವಿನ ಮಹತ್ವ ತಿಳಿಸಿದರು. ಯಾವುದೇ ಬೆಳೆ ಉತ್ತಮವಾಗಿ ಬರಲು ಮಣ್ಣಿನ ಫಲವತ್ತತೆ ತುಂಬಾ ಮುಖ್ಯ. ಮಣ್ಣು ಫಲವತ್ತಾಗಲು ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳು ತುಂಬಾ ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ಅವರು ತಿಳಿಸಿದರು. ಇವುಗಳ ಕೊರತೆಯಿಂದಾಗಿ ತ್ಯಾಜ್ಯಗಳು ಕಳೆಯುವ ಬದಲು ಕೊಳೆಯುತ್ತಿವೆ ಎಂದು ರೈತರಿಗೆ ಮನವರಿಕೆ ಮಾಡಿದರು. ಕೃಷಿಯಲ್ಲಿ ಬಹುತೇಕ ಸಮಸ್ಯೆಗಳು ಮಣ್ಣಿನಿಂದ ಉದ್ಭವಿಸುತ್ತವೆ. ಅದರಲ್ಲೂ ಮಣ್ಣಿನ ಬಹುತೇಕ ಸಮಸ್ಯೆಗಳು ನೀರಿನಿಂದ ಬರುತ್ತದೆ ಎಂದು ವಿವರಿಸಿದರು.
ನೀರು ಎಷ್ಟು ಕೊಡಬೇಕು?
ನೀರು ಕೊಡುವ ವಿಚಾರದಲ್ಲಿ ರೈತರು ಎಡವುತ್ತಿರುವುದು ಸಾಮಾನ್ಯವಾಗಿದೆ. ಜ್ಞಾನದ ಕೊರತೆಯಿಂದ ಮತ್ತು ಸುಲಭವಾದ ನೀರಾವರಿ ತಂತ್ರಜ್ಞಾನದಿಂದ ವಿಪರೀತ ನೀರು ಕೊಡುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿ ಗಾಳಿಯಾಡದೇ ಉಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ತ್ಯಾಜ್ಯಗಳು ಕಳೆಯದೇ ಪೋಷಕಾಂಶಗಳು ದೊರಕುತ್ತಿಲ್ಲ. ಇದರ ಪರಿಣಾಮ ಹೆಚ್ಚು ಹೆಚ್ಚು ರಾಸಾಯನಿಕ ಬಳಸುವ ಅನಿವಾರ್ಯತೆ ಉಂಟಾಗಿದೆ.
ನೀರು ನಿರ್ವಹಣೆ ಅತಿ ದೊಡ್ಡ ಸಮಸ್ಯೆಯಾಗಿ ಮಣ್ಣಿನ ಫಲವತ್ತತೆ ಮತ್ತು ಸೂಕ್ಷ್ಮಾಣು ಜೀವಿಗಳ ನಾಶಕ್ಕೆ ಕಾರಣವಾಗಿದೆ. ಹಾಗಾಗಿ ರೈತರು ನೀರಿನ ನಿರ್ವಹಣೆಯನ್ನು ತಿಳಿದು ವ್ಯವಸಾಯ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಪೂರ್ತಿ ವಿಡೀಯೋ ನೊಡಿ……
https://www.youtube.com/watch?v=iMfS6YwkUUo&list=PLuN9VcGQAtK4-ekaTF27JLdMjjqefCkTE&index=26&t=160s
ಬರಹ: ರವಿಕುಮಾರ್
#kannadablog #drsoil #microbiagrotech #agricultureblogs #agricultureinkannada #integratedfarming #highyield #healthycrop #soilhealth #arecafarming #arecanut #diseasecontrol #arecayield #watermanagement
Blog