Blog

ಸೆಣಬಿನ ಬೀಜಗಳನ್ನು ಎಲ್ಲಾ ಬೆಳೆಗಳ ಮಧ್ಯದಲ್ಲಿ ಬಿತ್ತಬಹುದು ಅಥವಾ ಖಾಲಿ ಜಮೀನಿನಲ್ಲಿ ಬಿತ್ತಬಹುದು

        • ಅವಧಿ: 45 ರಿಂದ 50 ದಿನಗಳು
        • ಇಳುವರಿ: 10 ರಿಂದ 15 ಟನ್ /ಎಕರೆಗೆ
        • ಬೀಜದ ಪ್ರಮಾಣ : 15 ರಿಂದ 20 ಕೆಜಿ ಪ್ರತಿ ಎಕರೆಗೆ
  • ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಅನುಕೂಲಕರವಾದ ಬದಲಾವಣೆಗೆ ಸಹಕಾರಿಯಾಗುವುದು.
  • ಮಣ್ಣಿನಲ್ಲಿ ಸಾವಯವ ಅಂಶವನ್ನು ಕಾಪಾಡಿಕೊಂಡು ಬರುವುದು.
  • ಮಣ್ಣಿನಲ್ಲಿರುವ ಜೈವಿಕ ಸೂಕ್ಷ್ಮಾಣುಗಳ ಚಟುವಟಿಕೆ ಹಾಗೂ ಅಭಿವೃದ್ಧಿಗೆ ನೆರವಾಗುವುದು. ಇದರಿಂದ ಸಾವಯವ ವಸ್ತುಗಳು ಕಳೆತು, ಅವುಗಳಲ್ಲಿರುವ ಪೋಷಕಾಂಶಗಳು ಬೆಳೆಗೆ ಲಭ್ಯವಾಗುವುದು.
  • ಮಣ್ಣಿನ ಕೆಳ ಪದರಗಳಲ್ಲಿರುವ ಪೋಷಕಾಂಶಗಳನ್ನು ಬೇರುಗಳು  ಹೀರಿಕೊಳ್ಳುವುದರಿಂದ ಈ ಗಿಡಗಳನ್ನು ಕಿತ್ತು ಮತ್ತೆ ಮಣ್ಣಿನಲ್ಲಿ ಸೇರಿಸುವ ಮೂಲಕ ಆಳದಲ್ಲಿರುವ ಸಸ್ಯ ಪೋಷಕಾಂಶಗಳನ್ನು ಮೇಲ್ಪದರಕ್ಕೆ ತರುವ ಕ್ರಿಯೆ ಉಂಟಾಗುವುದು.
  • ಹಸಿರೆಲೆ ಗೊಬ್ಬರದ ಸಸ್ಯಗಳು ಮಣ್ಣಿನ ಮೇಲೆ ಹೊದಿಕೆಯಾಗಿರುವುದರಿಂದ ಮಳೆಯ ನೀರು ಹೆಚ್ಚಾಗಿ ಇಂಗಿ, ಮಣ್ಣು ಕೊಚ್ಚಿಹೋಗುವುದು ಕಡಿಮೆಯಾಗುವುದಲ್ಲದೆ, ಮಣ್ಣಿನಲ್ಲಿ ತಾಪ ಕಡಿಮೆಯಾಗಿರುವುದು.
  • ವಾತಾವರಣವಲ್ಲಿರುವ ಸಾರಜನಕದ ಸ್ಥಿರೀಕರಣ ಕ್ರಿಯೆಯಲ್ಲಿ ನೆರವಾಗುವುದು.
  • ಸಸ್ಯಗಳ ಕೊಳೆಯುವಿಕೆಯಾಗುವಾಗ ಹೊರಬರುವ ಆಮ್ಲಗಳಿಂದ ಪೋಷಕಾಂಶ ಲಭ್ಯತೆ ಹೆಚ್ಚುವುದು.
  • ಕ್ಷಾರ ಮಣ್ಣಿನ ಸುಧಾರಣೆಯಲ್ಲಿ ನೆರವಾಗುವುದು.
  • ಜಂತು ಹುಳುವಿನ ಬಾಧೆಯ ನಿಯಂತ್ರಣದಲ್ಲೂ ನೆರವಾಗುವುದು

     ಕೃಷಿ ಜಮೀನಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಪೋಷಕಾಂಶವನ್ನು, ಅದೂ ಕೂಡ ಕಡಿಮೆ ಖರ್ಚಿನಲ್ಲಿ ಒದಗಿಸಲು ಸೆಣಬು ಬೀಜ ಬಿತ್ತನೆ ಪೂರಕ. ಮೊದಲ ಮಳೆ ನೀರು ನೆಲಕ್ಕೆ ಬಿದ್ದಾಗ ಮೇಲ್ಮಣ್ಣು ಮತ್ತು ಅಲ್ಲಿರುವ ಸಾವಯವ ತ್ಯಾಜ್ಯಗಳು ಮಳೆ ನೀರಿನ ಜತೆ ಅಲ್ಲಿಂದ ತೆರವಾಗುತ್ತದೆ. ಸಕಾಲದಲ್ಲಿ ಭೂಮಿಗೆ ಗೊಬ್ಬರದ ಪೂರೈಕೆ ಆದರೆ, ಅವು ಬೆಳೆಗಳಿಗೆ ದೊರೆತು ಅಥವಾ ಮಣ್ಣಿಗೆ ಸೇರಿ ಫಲವತ್ತತೆ ವೃದ್ಧಿಯಾಗುತ್ತದೆ.

https://www.youtube.com/watch?v=ZjElTIEcmDI&t=15s

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing