Blog

ಬಿದಿರು ಒಂದು ಅರಣ್ಯ ಕೃಷಿ. ಹಿಂದೆಲ್ಲಾ ಅತ್ಯಲ್ಪ ಮಂದಿ ಬಿದಿರು ಬೆಳೆದರೂ ಅದನ್ನು ಒಂದು ವಾಣಿಜ್ಯ ಬೆಳೆಯಾಗಿ ಕಂಡದ್ದು ತೀರಾ ಕಡಿಮೆ. ಏಕೆಂದರೆ, ಬಿದಿರು ಕಡಿಯಲು, ಸಾಗಿಸಲು ಮತ್ತು ಕಡಿದ ಬಿದಿರನ್ನು ಮಾರಾಟ ಮಾಡಲು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಅಲ್ಲಿ ಇಲ್ಲಿ ಕೆಲವರು ಬೆಳೆದರೂ ತಮ್ಮ ಮನೆಯ ಉಪಯೋಗಕ್ಕೆ ಆಗುವಷ್ಟನ್ನು ಮಾತ್ರ ಬೆಳೆದುಕೊಳ್ಳುತ್ತಿದ್ದರು. ಆದರೆ, ಬಿದಿರಿನ ಮೇಲಿದ್ದ ಎಲ್ಲ ಕಾನೂನು ನಿರ್ಬಂಧಗಳನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರ ತೆರವುಗೊಳಿಸಿದೆ. ಹೀಗಾಗಿ ಈಗ ಯಾರುಬೇಕಾದರೂ ಬಿದಿರು ಬೆಳೆಯಬಹುದು. ಅಷ್ಟೇ ಅಲ್ಲದೆ ಪ್ರತಿ ಬಿದಿರು ಗಿಡದ ನಿರ್ವಹಣೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಕೂಡ ಸಿಗುತ್ತದೆ.

 

ತಜ್ಞರು ಸಲಹೆ ಮಾಡಿದ ರೀತಿಯಲ್ಲೇ ನಿಗದಿತ ಅಂತರದಲ್ಲಿ ನಾಟಿ ಮಾಡಿದಾಗ ಒಂದು ಎಕರೆಗೆ 900 ರಿಂದ 1000 ಬಿದಿರಿನ ಗಿಡಗಳು ಕೂರುತ್ತವೆ. 3 ವರ್ಷಗಳ ನಂತರ ಬಿದಿರು ಕಟಾವಿಗೆ ಸಿದ್ಧವಾಗಿ, ಆದಾಯ ಬರಲು ಆರಂಭವಾಗಲಿದ್ದು, ಒಂದು ಸಾವಿರ ಬಿದಿರಿನ ಗಿಡಗಳಿಂದ 40 ಟನ್ ಬಿದಿರು ತೆಗೆಯಬಹುದು. ಮೊದಲ ವರ್ಷ 1.50 ಲಕ್ಷದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಮೂರನೇ ವರ್ಷ ಆರಂಭವಾಗುವ ಈ ಆದಾಯ ಸುಮಾರು 80-90 ವರ್ಷಗಳವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಬೆಳೆದ ಬಿದಿರು ಮಾರಾಟಕ್ಕೆ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಪೀಠೋಪಕರಣಗಳಿಗೆ ಬಿದಿರು ಹೆಚ್ಚು ಬಳಕೆಯಾಗುವ ಕಾರಣ ನೀವು ಬೆಳೆಯುವ ವಿಷಯ ತಿಳಿದರೆ ಹಲವು ಕಂಪನಿಗಳು ಸ್ವತಃ ರೈತರ ಬಳಿ ತೆರಳಿ ಬಿದಿರು ಖರೀದಿಸುತ್ತವೆ.

 

ಹಾಗಾದರೆ, ಬಿದಿರು ಬೆಳೆಯುವುದು ಹೇಗೆ? ಅದರಿಂದ ಆದಾಯ ಗಳಿಸುವುದು ಹೇಗೆ? ಬಿದಿರು ಬೆಳೆಯಬೇಕೆಂದರೆ ಸಸಿಗಳು ಎಲ್ಲಿ ಸಿಗುತ್ತವೆ? ಮಾರುಕಟ್ಟೆ ಹೇಗಿದೆ? ಎಂಬುದರ ಮಾಹಿತಿ ತಿಳಿಸಿಕೊಡಲಾಗಿದೆ.

ವೀಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=HlBNKDZFRpE

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ಬರಹ: ವನಿತಾ ಪರಸನ್ನವರ್

 

#bamboofarming  #organicbamboofarming  #earnlakhsinbamboo  #marketingbamboo  #agriculturetechnology  #howtogrowbamboo  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing