ಕರ್ನಾಟಕದಲ್ಲಿ ಹತ್ತಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ರಾಯಚೂರು ಕೂಡ ಒಂದು. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಎಷ್ಟೋ ಜನರ ಆದಾಯದ ಮೂಲ ಹತ್ತಿ ಬೆಳೆಯಾಗಿದೆ. ಹತ್ತಿ ಬೆಳೆಯಲ್ಲಿ ಉತ್ತಮ ಆದಾಯ ಗಳಿಸಲು ರೈತರು ಮಾಡಬೇಕಿರುವ ಕೆಲಸಗಳೇನು? ಈ ಬಗ್ಗೆ ಕೆಲವು ರೈತರು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ರೈತರಾದ ರಂಗಪ್ಪ ಅವರ ಹತ್ತಿ ಬೆಳೆ ನೋಡಿ ಇತರ ರೈತರೂ ಕೂಡ ಇವರ ತಂತ್ರವನ್ನೇ ಬಳಸತೊಡಗಿದ್ದಾರೆ. ಇವರು ತಮ್ಮ ಹತ್ತಿ ಬೆಳೆಗೆ ಡಾ.ಸಾಯಿಲ್ ಬೀಜೋಪಚಾರ ಬಳಸಿ ಬಿತ್ತಿದ್ದರಿಂದ ಮೊಳಕೆ ಮತ್ತು ಬೆಳವಣಿಗೆ ಉತ್ತಮವಾಗಿದೆ. ಇದನ್ನು ಕಂಡ ಅಕ್ಕಪಕ್ಕದ ರೈತರು, ಇವರಿಂದ ಡಾ.ಸಾಯಿಲ್ ಬಗ್ಗೆ ತಿಳಿದುಕೊಂಡು ವ್ಯತ್ಯಾಸ ಕಂಡಿದ್ದಾರೆ. ಡಾ.ಸಾಯಿಲ್ ಬಳಕೆಯಿಂದ ಮಣ್ಣು ಮೃದುಗೊಂಡು ಬೆಳವಣಿಗೆ ಉತ್ತಮವಾಗಿದೆ ಎಂದು ರೈತರು ತಿಳಿಸುತ್ತಾರೆ. ತಮ್ಮ ಜಮೀನಿನಲ್ಲಿ ಎರೆಹುಳುಗಳನ್ನು ಎಂದೂ ಕಂಡಿರಲಿಲ್ಲ ಆದರೆ ಈಗ ಡಾ.ಸಾಯಿಲ್ ಫರ್ಟಿಲಿಟಿ ಬೂಸ್ಟರ್ ಬಳಕೆಯಿಂದ ಎರೆಹುಳುಗಳು ಕಾಣಸಿಗುತ್ತವೆಂದು ರೈತರು ಹೇಳುತ್ತಾರೆ.
ಡಾ.ಸಾಯಿಲ್ ಬೀಜೋಪಚಾರ ಬಳಕೆಯಿಂದ ಮೊಳಕೆ ಒಡೆಯುವ ಪ್ರಮಾಣ ಹೆಚ್ಚುತ್ತದೆ. ಬೆಳೆಯನ್ನು ನೋಡಿದ ಇತರ ರೈತರು ತಾವು ಕೂಡ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದಕ್ಕೆ ಒಲವು ತೋರಿಸಿದ್ದಾರೆ. ರಾಸಾಯನಿಕ ಬಳಸಿದ ಹತ್ತಿಗೆ ಹೋಲಿಸಿದರೆ ಸಾವಯವ ಹತ್ತಿಯ ಎಲೆಗಳು ಹಸಿರಾಗಿ, ಆರೋಗ್ಯಕರವಾಗಿವೆ. ಈ ತರಹದ ಬೆಳವಣಿಗೆ ಹಿಂದೆಂದೂ ನೋಡಿರಲಿಲ್ಲ ಎನ್ನುತ್ತಾರೆ ಇನ್ನೊಬ್ಬ ರೈತ. ಸಾವಯವ ಪದ್ಧತಿಯಲ್ಲಿ ಖರ್ಚು ಕಡಿಮೆಯಾಗುತ್ತದೆ ಎಂದು ಇತರರಿಗೆ ತಿಳಿಸುತ್ತಾರೆ.
ರೈತರ ಮಾತುಗಳನ್ನು ಕೇಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=Vc7R4PqP-KQ&t=1s
ಬರಹ: ರವಿಕುಮಾರ್
#kannadablog #drsoil #microbiagrotech #agricultureblogs #agricultureinkannada #organicfarming #seedtreatment #cotton #healthycotton #healthycrop #plantnutrition #highyieldhighincome #earthworm #beneficiarymicrobes #rootdevelopment
Blog