ಕೃಷಿಯ ಜತೆಗೆ ಉಪಕಸುಬುಗಳು ರೈತನಿಗೆ ಆದಾಯ ಹೆಚ್ಚಿಸುವ ಮಾರ್ಗಗಳು, ರೈತರು ಉಪಕಸುಬುಗಳ ಆಯ್ಕೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತೆ. ಅದರಲ್ಲಿ ಮುರ್ರಾ ಎಮ್ಮೆ ತಳಿ ಉಪಕಸುಗಳಲ್ಲಿ ಆದಾಯ ಹೆಚ್ಚಿಸುವ ಒಂದು ಬ್ರ್ಯಾಂಡ್ ಅಂತ ಹೇಳಿದ್ರೆ ತಪ್ಪಾಗಲಾರದು. ಹೌದು ಹರಿಯಾಣ ರಾಜ್ಯದ ತಳಿಯಾಗಿರುವ ಮುರ್ರಾ ಹೆಚ್ಚು ಹಾಗೂ ಗುಣಮಟ್ಟದ ಹಾಲು ಕೊಡುವ ಎಮ್ಮೆ ತಳಿ. ಇದು ರೈತನ ಜೇಬು ತುಂಬಿಸುವ ನಂ 1 ಉಪಕಸುಬಾಗಿದೆ.
ಮುರ್ರಾ ಎಮ್ಮೆ ಸಾಕಲು ಹಸಿ ಹುಲ್ಲು, ಒಣ ಹುಲ್ಲು ಫೀಡ್ಸ್ ಸೇರಿ ದಿನಕ್ಕೆ 100 ರಿಂದ 120 ರೂ. ಖರ್ಚು ಬರುತ್ತದೆ. ಆದರೆ ದಿನಕ್ಕೆ 25 ರಿಂದ 30 ಲೀಟರ್ ವರೆಗೆ ಹಾಲು ಕರೆಯುವುದರಿಂದ ಈ ಖರ್ಚು ದೊಡ್ಡದಲ್ಲ. ಕೃಷಿಯಲ್ಲಿರುವವರು ಮೇವು ಬೆಳೆಗಳನ್ನು ಬೆಳೆದು ಆ ಖರ್ಚನ್ನು ನಿಲ್ಲಿಸಬಹುದು. ಅಲ್ಲದೆ ಮುರ್ರಾ ಸುಮಾರು 300 ದಿನಗಳ ವರೆಗೆ ಹಾಲು ಕೊಡುವ ಎಮ್ಮೆಗಳಾಗಿದ್ದು, 12 ವರ್ಷ ಬದುಕುತ್ತವೆ. ಇದರ ಹಾಲಿನ ಸಾಮರ್ಥ್ಯದ ಆಧಾರದ ಮೇಲೆ ಮುರ್ರಾ ಬೆಲೆ 1 ಲಕ್ಷ ರೂ. ನಿಂದ 1.5 ಲಕ್ಷ ರೂ. ವರೆಗೆ ಇದೆ. ಭಾರತದಲ್ಲಷ್ಟೆ ಅಲ್ಲಾ ಜಾಗತಿಕವಾಗಿ ಶ್ರೀಲಂಕಾ, ವಿಯೆಟ್ನಾಂ, ಚೀನಾ, ಮಲೇಷ್ಯಾ, ನೇಪಾಳ, ಬ್ರೆಜಿಲ್ ಸೇರಿ ಹಲವು ದೇಶಗಳಿಗೆ ಮುರ್ರಾ ಎಮ್ಮೆಗಳು ರಫ್ತಾಗುತ್ತಿವೆ.
300 ದಿನಗಳ ವರೆಗೆ ಹಾಲು ಕೊಡುವ ಮುರ್ರಾ ಸಾಕುವ ರೈತನಿಗೆ ದೀರ್ಘಾವಧಿವರೆಗೆ ಆದಾಯ ಲಭಿಸುತ್ತದೆ. ಸಾಮಾನ್ಯ ಹಸುವಿನ ಹಾಲಿನಲ್ಲಿ ಶೇ 3 ರಿಂದ 4 ಕೊಬ್ಬಿನಾಂಶವಿರುತ್ತದೆ. ಆದರೆ ಮುರ್ರಾ ಎಮ್ಮೆಯ ಹಾಲಿನಲ್ಲಿ ಶೇ 6.5 ರಿಂದ 8 ಇರುವುದರಿಂದ ಹಾಲಿನ ಬೆಲೆಯೂ ಹೆಚ್ಚು. ಹಾಗಾಗಿ ಮುರ್ರಾ ಮಾರುಕಟ್ಟೆಯಲ್ಲಿ ಹೆಚ್ಚಿನ ಡಿಮ್ಯಾಂಡ್ ಇರುವ ಎಮ್ಮೆ ತಳಿ. ಈ ತಳಿಯನ್ನು ಸಾಕಾಣಿಕೆ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಸಾವಯವ ಕೃಷಿಕರಾದ ರಾಜಕುಮಾರ್ ಅವರು 80 ಮುರ್ರಾ ಎಮ್ಮೆಯನ್ನು ಸಾಕಾಣಿಕೆ ಮಾಡುತ್ತಿದ್ದು, ಅದರಲ್ಲಿ 20 ಎಮ್ಮೆಯ ಹಾಲಿನಿಂದ ತಿಂಗಳಿಗೆ 3,60,000 ಆದಾಯ ಪಡೆಯುತ್ತಿದ್ದಾರೆ. ಹೈನುಗಾರಿಕೆಯಲ್ಲಿಯೇ ಲಕ್ಷ ಲಕ್ಷ ಆದಾಯ ಪಡೆಯುತ್ತಿರುವ ಇವರು ಹೇಗೆಲ್ಲಾ ಎಮ್ಮೆ ಸಾಕಾಣಿಕೆ ಮಾಡುತ್ತಿದ್ದಾರೆ ಎಂಬುದನ್ನು ಸ್ವತಃ ಕೃಷಿಕರಾದ ರಾಜಕುಮಾರ ಅವರು ಮೈಕ್ರೋಬಿ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.
ವೀಡಿಯೋಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=jfyRonmQwBU&t=56s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ : ವನಿತಾ ಪರಸನ್ನವರ್