ಟೊಮ್ಯಾಟೋಗೆ ಪ್ರಸಿದ್ಧಿಯಾಗಿರುವುದು ಕೋಲಾರ ಜಿಲ್ಲೆ. ಬಹುತೇಕ ಜಮೀನುಗಳಲ್ಲಿ ಟೊಮ್ಯಾಟೋ ಬೆಳೆಯನ್ನು ನೋಡಬಹುದು. ಇದೇ ಜಿಲ್ಲೆಯ ಯುವಕರೊಬ್ಬರು ಉದ್ಯೋಗದ ಜೊತೆ ಟೊಮ್ಯಾಟೋ ಬೆಳೆ ಬೆಳೆದು ಕೃಷಿ ಮಾಡುತ್ತಿದ್ದಾರೆ. ಇವರು ಸಾವಯವ ಪದ್ಧತಿ ಅನುಸರಿಸಿ ತಮ್ಮ 1 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕೃಷ್ಣಾವರಂ ಗ್ರಾಮದ ವಿನೀತ್ ಟೊಮ್ಯಾಟೋ ಕೃಷಿ ಮಾಡುತ್ತಿರುವ ಯುವಕ. ಮೂಲತಃ BEML ನಲ್ಲಿ ಕೆಲಸ ಮಾಡುತ್ತಿರುವ ಇವರು ಸ್ವಯಂ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕೆಲಸ ಮತ್ತು ಕೃಷಿ ಎರಡನ್ನೂ ನಿಭಾಯಿಸುತ್ತಿರುವ ಇವರು ಯುವಕರಿಗೆ ಮಾದರಿ. 1 ಎಕರೆಯಲ್ಲಿ ಸಾಲಿಂದ ಸಾಲಿಗೆ 4 ಅಡಿ ಅಂತರದಂತೆ ಬೆಳೆ ಬೆಳೆದಿದ್ದಾರೆ. ನಾಟಿ ಮಾಡಿದ ಸಮಯದಲ್ಲಿ ನಿರಂತರವಾಗಿ 3 ದಿನ ಭಾರಿ ಮಳೆ ಸುರಿದರೂ ಗಿಡಗಳು ಉತ್ತಮವಾಗಿ ಬೆಳೆದಿವೆ.
ನಾಟಿ ಮಾಡುವ ಮುಂಚೆ ಡಾ.ಸಾಯಿಲ್ ಬೀಜೋಪಚಾರ ಬಳಸಿದ್ದರಿಂದ ಉತ್ತಮ ಮೊಳಕೆ ಬರಲು ಸಾಧ್ಯವಾಗಿದೆ. ವಿನೀತ್ ಅವರೇ ಹೇಳುವಂತೆ ಡಾ.ಸಾಯಿಲ್ ಬಳಸಿದ ನಂತರ ಮಣ್ಣು ಮೃದುಗೊಂಡಿದೆ. ಬೇರುಗಳ ಅಭಿವೃದ್ಧಿ ಉತ್ತಮಗೊಂಡು ಹೂ ಉದುರುವಿಕೆ ಕಡಿಮೆಯಾಗಿದೆ. ಇದರಿಂದಾಗಿ ನೀರು, ಪೋಷಕಾಂಶಗಳ ನಿರ್ವಹಣೆ ಉತ್ತಮವಾಗಿ ನಡೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಳುವರಿ ಉತ್ತಮವಾಗಿದೆ ಎಂದು ಬೀಗುತ್ತಾರೆ ರೈತ ವಿನೀತ್. ಸಾವಯವ ಪದ್ಧತಿಯಿಂದ ಗಿಡಗಳ ಬೆಳವಣಿಗೆ ಉತ್ತಮಗೊಂಡು ಇಳುವರಿ ಹೆಚ್ಚುತ್ತದೆ ಎಂಬುದು ಇವರ ನಿಲುವು.
ಸಾವಯವ ಕೃಷಿಯಿಂದ ರೈತರಿಗೆ ಖರ್ಚು ಕಡಿಮೆಯಾಗಿ ಆದಾಯ ಹೆಚ್ಚುತ್ತದೆ. ಬೆಳೆಗಳ ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಹೊರಗಿನಿಂದ ಕೊಡುವ ರಾಸಾಯನಿಕಗಳ ಅವಶ್ಯಕತೆ ಇರುವುದಿಲ್ಲ ಮತ್ತು ಬೆಳೆಗಳ ಬೆಳವಣಿಗೆ ಉತ್ತಮವಾಗುತ್ತದೆ, ರೋಗ-ರುಜಿನಗಳು ಕಡಿಮೆಯಾಗುತ್ತವೆ.
ಇವರ ಸಂದರ್ಶನ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಪೂರ್ತಿ ವಿಡೀಯೋ ನೋಡಿ…..
https://www.youtube.com/watch?v=bluqlca-NRM&t=316s
ಬರಹ: ರವಿಕುಮಾರ್
#kannadablog #drsoil #microbiagrotech #agricultureblogs #agricultureinkannada #integratedfarming #naturalfarming #organicfarming #highyield #healthycrop #soilhealth #tomato #tomatocrop #tomatoyield
Blog