Blog

       ಎರೆಹುಳು ರೈತನ ಮಿತ್ರ. ಕೃಷಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಎರೆಹುಳು ಇದ್ದರೆ ಮಣ್ಣು ಫಲವತ್ತಾಗುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚುತ್ತವೆ. ಕೃಷಿಭೂಮಿಯಲ್ಲಿ ಯಥೇಚ್ಛವಾಗಿ ಇರಬೇಕಾಗಿದ್ದ ಎರೆಹುಳು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ. ಕಾರಣ ರಾಸಾಯನಿಕ ಗೊಬ್ಬರಗಳ ಬಳಕೆ. ಎರೆಹುಳುಗಳು ಕಡಿಮೆ ಇವೆ ಎಂದರೆ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿವೆ ಎಂದು ತಿಳಿಸುತ್ತದೆ. ಅಂದರೆ ಫಲವತ್ತತೆ ಇಲ್ಲದ ಮಣ್ಣು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು.

 

       ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿನ ಖಾನಾಪುರ ಗ್ರಾಮದ ರೈತ ಮಾಳಪ್ಪ ಅವರು ಮೊದಲು ತಮ್ಮ ಜಮೀನಿನಲ್ಲಿ ಎರೆಹುಳು ಕಂಡೇ ಇರಲಿಲ್ಲ. ಆದರೆ ಈಗ ಎರೆಹುಳುಗಳ ಜೊತೆ ಬೇರಿನ ಉತ್ತಮ ಬೆಳವಣಿಗೆಯನ್ನು ನೋಡುತ್ತಿದ್ದಾರೆ. ರಾಸಾಯನಿಕ ಕೃಷಿ ತ್ಯಜಿಸಿ ಡಾ.ಸಾಯಿಲ್ ಬಳಸಿ ಸಾವಯವ ಕೃಷಿ ಅಳವಡಿಸಿಕೊಂಡಿದ್ದರ ಪರಿಣಾಮ ಈ ವ್ಯತ್ಯಾಸಗಳನ್ನು ಕಂಡಿದ್ದಾರೆ.

 

ಡಾ.ಸಾಯಿಲ್ ಬೀಜೋಪಚಾರ ಬಳಸಿ ಟೊಮ್ಯಾಟೋ ಬೆಳೆದಿದ್ದಾರೆ. ಮಣ್ಣಿನಲ್ಲಿ ಎರೆಹುಳು ಇದ್ದರೆ ಉಚಿತವಾಗಿ ಗೊಬ್ಬರ ತಯಾರಾಗುತ್ತದೆ. ಮಣ್ಣಿನಲ್ಲಿ ಓಡಾಡುತ್ತಾ ರಂಧ್ರಗಳನ್ನು ಸೃಷ್ಟಿಸುತ್ತವೆ ಮತ್ತು ತನ್ನ ತೂಕಕ್ಕಿಂತ ಐದು ಪಟ್ಟು ಹೆಚ್ಚು ಗೊಬ್ಬರ ತಯಾರಿಸುತ್ತದೆ. ನಿಮ್ಮ ಜಮೀನು ಎರೆಹುಳು ಕಾರ್ಖಾನೆಯಾಗಲು ರಾಸಾಯನಿಕಗಳ ಬಳಕೆ ನಿಲ್ಲಿಸಿ,  ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಾಗುತ್ತದೆ ಮತ್ತು ತ್ಯಾಜ್ಯಗಳನ್ನು ಕೊಡಬೇಕು. ಇದರಿಂದ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು ಬದುಕಲು ಬೇಕಾಗುವ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮಣ್ಣು ಫಲವತ್ತಾಗಿ ಬೆಳೆಗಳು ಉತ್ತಮವಾಗಿ ಬೆಳೆಯುತ್ತವೆ. ಕೃಷಿಯ ಖರ್ಚು ಕೂಡ ಇಳಿಮುಖ ಕಾಣುತ್ತದೆ. ರೈತರು ಕೃಷಿಯಲ್ಲಿ ಲಾಭ ಹೆಚ್ಚಿಸಿಕೊಳ್ಳಲು ಮಣ್ಣನ್ನು ಫಲವತ್ತಾಗಿಸುವುದು ಅನಿವಾರ್ಯ.

ಇದರ ಸಂಬಂಧಿಸಿದ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 

https://www.youtube.com/watch?v=KbUjx2Pz45A

 

 

ಬರಹ: ರವಿಕುಮಾರ್

 

 

#kannadablog  #drsoil  #microbiagrotech  #agricultureblogs  #agricultureinkannada  #organicfarming  #integratedfarming  #highyield  #healthycrop  #plantnutrition  #highyieldhighincome  #earthworm  #beneficiarymicrobes  #rootdevelopment  



Blog




Home    |   About Us    |   Contact    |   
microbi.tv | Powered by Ocat Online Advertising Service in India