ಮಳೆಗಾಲದಲ್ಲಿ ಕೇವಲ ಮನುಷ್ಯರಿಗಷ್ಟೇ ಅಲ್ಲ, ಬೆಳೆಗಳಿಗೂ ರೋಗ-ರುಜಿನಗಳು ಹೆಚ್ಚಾಗುತ್ತವೆ. ಶೀತದಿಂದಾಗಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಅಡಿಕೆಯಲ್ಲಿ ಕೊಳೆರೋಗದಂತಹ ರೋಗಗಳು ಲಗ್ಗೆಯಿಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಮಳೆ ಹೆಚ್ಚಾದಾಗ ತೋಟದಲ್ಲಿನ ಬೆಳೆಗಳನ್ನು ಶೀತದಿಂದ ಬರುವ ರೋಗಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?
ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿಯ ಅಂಡ್ರಾಪುರ ಗ್ರಾಮದ ಈ ರೈತ ತಮ್ಮ ತೋಟದಲ್ಲಿ ಅಡಿಕೆ, ತೆಂಗು, ಕಾಫಿ, ಮೆಣಸು ಹೀಗೆ ಹಲವಾರು ಬೆಳೆಗಳನ್ನು ಬೆಳೆದಿದ್ದಾರೆ. ರೋಗಗಳು ಬರಬಾರದೆಂದು ಮುಂಜಾಗ್ರತೆಯಾಗಿ ತಮ್ಮ ತೋಟಕ್ಕೆ ಬೋರ್ಡೋ ಮಿಶ್ರಣ ಸಿಂಪಡಿಸಲು ಮುಂದಾಗಿದ್ದಾರೆ. ಬೋರ್ಡೋ ತಯಾರಿಸುವ ವಿಧಾನವನ್ನು ಕೂಡ ತಿಳಿಸಿಕೊಟ್ಟಿದ್ದಾರೆ.
ಬೋರ್ಡೊ ಮಿಶ್ರಣ ತಯಾರಿಸುವ ವಿಧಾನ
ಮೊದಲು ಸುಣ್ಣವನ್ನು ನೀರಿನಲ್ಲಿ ಕರಗಿಸಿ ಸಿದ್ಧಗೊಳಿಸಬೇಕು. ಕಲ್ಲು ಸುಣ್ಣವಾದರೆ 3-3.5 ಕೆ ಜಿ, ಪುಡಿ ಸುಣ್ಣವಾದರೆ 2 ಕೆ.ಜಿ ಸುಣ್ಣವನ್ನು ನೀರಿನಲ್ಲಿ ಮಿಶ್ರಣಗೊಳಿಸಬೇಕು. 200 ಲೀ ಡ್ರಮ್ ನಲ್ಲಿ ಅರ್ಧಕ್ಕೆ ಅಂದರೆ 100 ಲೀಟರ್ ಗೆ ಮಿಶ್ರಣ ಮಾಡಿಕೊಳ್ಳಬೇಕು.
ಇನ್ನೊಂದು ಬಕೆಟ್ ನಲ್ಲಿ 2 ಕೆ.ಜಿ ಕಾಪರ್ ಸಲ್ಫೇಟ್ ಅನ್ನು ಕರಗಿಸಿ ಸಿದ್ಧಗೊಳಿಸಬೇಕು.
ಎರಡೂ ದ್ರಾವಣಗಳು ಸಿದ್ಧವಾದ ಮೇಲೆ, ಸುಣ್ಣದ ಮಿಶ್ರಣಕ್ಕೆ ಕಾಪರ್ ಸಲ್ಫೇಟ್ ಅನ್ನು ನಿಧಾನವಾಗಿ ಮಿಶ್ರಣ ಮಾಡಬೇಕು. ಯಾವಾಗಲೂ ಸುಣ್ಣದ ನೀರಿಗೆ ಮಾತ್ರ ಕಾಪರ್ ಸಲ್ಫೇಟ್ ದ್ರಾವಣವನ್ನು ಹಾಕಬೇಕು.
ದ್ರಾವಣ ಸಿದ್ಧವಾದ ಮೇಲೆ ಇದನ್ನು ಅಡಿಕೆ, ತೆಂಗು, ಮೆಣಸು, ಕಾಫಿ ಬೆಳೆಗಳಿಗೆ ಕೊಡಬಹುದು. ತೆಂಗಿಗೆ ಪ್ರತಿ ಮರಕ್ಕೆ 5 ಲೀಟರ್ ಅನ್ನು ಬುಡದಿಂದ 4 ಅಡಿ ದೂರದಲ್ಲಿ ಹಾಕಬೇಕು. ಅಡಿಕೆಗೆ 1 ಅಡಿ ದೂರದಲ್ಲಿ ಪ್ರತಿ ಮರಕ್ಕೆ 2 ಲೀಟರ್ ಹಾಕಬಹುದು. ಮೆಣಸು ಮತ್ತು ಕಾಫಿಗೆ 1 ಲೀಟರ್ ಸಾಕಾಗುತ್ತದೆ.
ಹೀಗೆ ರೈತರೇ ಸ್ವತಃ ಬೋರ್ಡೋ ದ್ರಾವಣ ತಯಾರಿಸುವುದರಿಂದ ಖರ್ಚು ಕಡಿಮೆಯಾಗುತ್ತದೆ ಎಂದು ಈ ರೈತ ಹೇಳುತ್ತಾರೆ. ಖರ್ಚು ಕಡಿಮೆ ಮಾಡಿಕೊಳ್ಳುವುದು ಹೇಗೆ? ಕಾಪರ್ ಸಲ್ಫೇಟ್ ಹೆಚ್ಚಾದರೆ ಇದು ಮರಗಳಿಗೆ ಹಾನಿಕಾರಕವಾಗುತ್ತದೆ. ಬೋರ್ಡೋ ದ್ರಾವಣ ಸರಿಯಾಗಿ ತಯಾರಾಗಿದೆಯೇ ಇಲ್ಲವೆ ಎಂದು ಹೇಗೆ ತಿಳಿಯುವುದು? ಹೀಗೆ ಮತ್ತಿತರ ವಿಷಯಗಳ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ …..
https://www.youtube.com/watch?v=9bZ48dhn8aQ
ಬರಹ: ರವಿಕುಮಾರ್
Blog