ಭಾರತದಲ್ಲಿ ಮಾವಿನ ನಂತರ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಬೆಳೆ ಬಾಳೆ. ಉತ್ಪಾದನೆ ಮತ್ತು ಇಳುವರಿಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಸುಮಾರು 50ಕ್ಕೂ ಹೆಚ್ಚು ತಳಿಗಳನ್ನು ಬಾಳೆಯಲ್ಲಿ ಕಾಣಬಹುದು. ಪ್ರಮುಖ ಹಣ್ಣಿನ ಬೆಳೆಯಾದ ಬಾಳೆ ಮನುಷ್ಯನ ಆರೋಗ್ಯ ವೃದ್ಧಿಸಲು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ ಮತ್ತು ಕೃಷಿ ಭೂಮಿಗೆ ಬಹಳಷ್ಟು ತ್ಯಾಜ್ಯಗಳನ್ನು ನೀಡುವುದರ ಜತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಹಾಯಕ.
ಇದೀಗ ಗುಂಪು ಬಾಳೆ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಗುಂಪು ಬಾಳೆಯಲ್ಲಿ ಸಿಗುವ ಲಾಭಗಳ ಬಗ್ಗೆ ರೈತರು ಅರಿಯುತ್ತಾ ಗುಂಪು ಬಾಳೆ ಪದ್ಧತಿಯನ್ನು ಹೆಚ್ಚು ಹೆಚ್ಚು ಅನುಸರಿಸುತ್ತಿದ್ದಾರೆ. ಗುಂಪು ಬಾಳೆ ಪದ್ಧತಿ ರೈತನ ಶ್ರಮ, ಖರ್ಚು ಕಡಿಮೆ ಮಾಡುವುದರ ಜತೆಗೆ ವರ್ಷಪೂರ್ತಿ ಆದಾಯ ನೀಡುತ್ತದೆ. ಸರಿಯಾದ ಅಂತರದೊಂದಿಗೆ ವೈಜ್ಞಾನಿಕ ವಿಷಯಗಳನ್ನು ತಿಳಿದು ಗುಂಪು ಬಾಳೆ ಬೆಳೆದರೆ, ಲಕ್ಷ ಲಕ್ಷ ಆದಾಯ ಕಟ್ಟಿಟ್ಟ ಬುತ್ತಿ. ಅದೇ ರೀತಿಯಾಗಿ ಇಲ್ಲೊಬ್ಬ ಕೃಷಿಕರಾದ ಚಂದ್ರಪ್ಪ ಹಿಂದೆ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೆ ಯಾವ ಬೆಳೆಯಲ್ಲಿಯೂ ಲಾಭ ಪಡೆದಿರಲಿಲ್ಲ. ಹೀಗಾಗಿ ತರಕಾರಿ ಬೆಳೆಗಳನ್ನು ತೆಗೆದು 7 ಎಕರೆಯಲ್ಲಿ ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನು ಬೆಳೆಯೋಕೆ ಶುರುಮಾಡಿದ್ದರಿಂದ ಈಗ ವರ್ಷಪೂರ್ತಿ ಆದಾಯದಲ್ಲಿಯೇ ಸಾಗುತ್ತಿದ್ದಾರೆ. 7 ಎಕರೆ ತೋಟವನ್ನು ಒಬ್ಬರೆ ನಿರ್ವಹಣೆ ಮಾಡುತ್ತಾ, ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಾ ಬಾಳೆಯನ್ನು ಬೆಳೆಯುತ್ತಿದ್ದಾರೆ. ಅವರ ತೋಟ ಹೇಗಿದೆ? ಅಲ್ಲಿ ಅನುಸರಿಸಿರುವ ವೈಜ್ಞಾನಿಕ ವಿಷಯಗಳೇನು? ಬನ್ನಿ ತಿಳಿಯೋಣ.
ವಿಡೀಯೋಗಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ
https://www.youtube.com/watch?v=IQF_f_WxZf4&t=255s
ಬಾಳೆ ಬೆಳೆಯನ್ನು ಹೆಚ್ಚಾಗಿ ಒಂಟಿ ಪದ್ಧತಿಯಲ್ಲಿ ಬೆಳೆಯುವುದನ್ನೇ ಕಂಡಿದ್ದೆವೆ. ಇದರಿಂದ ರೈತರು ಹೆಚ್ಚಿನ ಇಳುವರಿ ಪಡೆಯೋಕೆ ಸಾಧ್ಯವಾಗುವುದಿಲ್ಲ. ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಆದರಿಂದ ಗುಂಪು ಬಾಳೆಯನ್ನು ಬೆಳೆದರೆ 10 ರಿಂದ 20 ವರ್ಷದ ವರೆಗೆ ಬೆಳೆಯಲು ಸಾಧ್ಯ. ಆದಾಯವೂ ಹೆಚ್ಚು.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ: ವನಿತಾ ಪರಸನ್ನವರ್
#DrSoilBanana #OrganicBanana #Bumperyieldinbanana #howtodoorganicfarming #organicbanana #farminginKarnataka #organicbananaripening #organicbananafertilizer #OrganicbananafarminginKannada
Blog