Blog

ಮೇಕೆ ಸಾಕಾಣಿಕೆ ಇಂದು ಕೇವಲ ಉಪಕಸುಬಾಗಿ ಉಳಿದಿಲ್ಲ. ಮೇಕೆ ಸಾಕಾಣಿಕೆಯೂ ದೊಡ್ಡ ಉದ್ಯಮವಾಗಿ  ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಇರುವ ಕಾರಣಕ್ಕೆ ಜನರು ಕೃಷಿಯ ಜೊತೆಗೆ ಮೇಕೆ ಸಾಕಾಣಿಕೆ  ಮಾಡುತ್ತಿದ್ದಾರೆಕೆಲವರು ಮೇಕೆ ಹಾಲಿಗಾಗಿ ಸಾಕಿದರೆಇನ್ನೂ ಕೆಲವರು ಮಾಂಸಕ್ಕಾಗಿ ಸಾಕುತ್ತಾರೆಅದೇನೇ ಇರಲಿಉದ್ಯಮ ಆರಂಭಿಸುವ ಮೊದಲು, ಮೇಕೆ ಹಾಲಿಗಾಗಿ ಸಾಕಾಣಿಕೆ ಮಾಡುತ್ತಿದ್ದರೆ, ಯಾವ ಮೇಕೆ ತಳಿ ಉತ್ತಮಮಾಂಸಕ್ಕಾಗಿ ಮೇಕೆ ಸಾಕುತ್ತಿದ್ದರೆ, ಅದಕ್ಕೆ ಯಾವ ತಳಿ ಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

 

ಮೇಕೆಯಿಂದ ವರ್ಷಕ್ಕೆ ಎರಡು ಸಲ, ಕನಿಷ್ಠ ನಾಲ್ಕು ಮರಿಯಾದರೂ ಸಿಗುತ್ತವೆಇದನ್ನು ಆರು ತಿಂಗಳು ಚೆನ್ನಾಗಿ ಸಾಕಾಣಿಕೆ ಮಾಡುವುದರಿಂದ ಮಾಡಿ ಖರ್ಚಿಗಿಂತ ಎರಡರಿಂದ ನಾಲ್ಕು ಪಟ್ಟು ಹೆಚ್ಚಿನ ಆದಾಯ ಪಡೆಯಬಹುದುಬೆಳೆ ಮೇಕೆಗಳು 15-20 ಸಾವಿರವರೆಗೂ ಮಾರಾಟ ಮಾಡಬಹುದುಇದರಿಂದ ವರ್ಷ ಪೂರ್ತಿ ಕೈಯಲ್ಲಿ ಹಣ ಡಾಡಿಕೊಂಡಿರುತ್ತದೆ.

 

ಮೇಕೆ ಸಾಕಾಣಿಕೆಯ ಮಹತ್ವ ಅರಿತಿರುವ ಹಲವಾರು ಸಾವಯವ ಕೃಷಿಕರು, ಮೇಕೆ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಇವರು, ಸಾವಯವ ಕೃಷಿಯನ್ನು ಆಯ್ಕೆ ಮಾಡಿಕೊಂಡು ಕೃಷಿಯ ಜತೆಗೆ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಅದರ ಲಾಭಗಳು ಹೇಗಿವೆ? ಹೇಗೆಲ್ಲಾ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ವಿಡೀಯೋ ಮುಖಾಂತರ ವೀಕ್ಷಿಸಿ.

https://www.youtube.com/watch?v=4XKfpLK3xPE&t=21s


ಮೇಕೆಗಳನ್ನು ಒಂದೇ ವರ್ಷಕ್ಕೆ ಮಾರಾಟ ಮಾಡಿದರೂ ಲಾಭ ಗಳಿಸಬಹುದುಇದರೊಂದಿಗೆ  ಮೇಕೆ ಹಾಲುಗೊಬ್ಬರಕ್ಕೂ ಉತ್ತಮ ಬೇಡಿಕೆಯಿದೆಮೇಕೆ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದ್ದುಒಂದು ಸಮತೋಲನ ಆಹಾರದ ಮೂಲವಾಗಿದೆಅಲ್ಲದೆ ಮೇಕೆ ಹಾಲು ಸರಳವಾಗಿ ಜೀರ್ಣವಾಗುತ್ತದೆಹೀಗಾಗಿ ಚಿಕ್ಕ ಮಕ್ಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ. ಕೃಷಿ ಮಾಡಬೇಕೆಂದರೆ ಜಮೀನು ಇಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂಡುವ ಬದಲು, ಹೈನುಗಾರಿಕೆಯತ್ತ ಮುಖ ಮಾಡಿದರೆ ಲಕ್ಷ ಲಕ್ಷ ಆದಾಯವನ್ನು ಪಡೆಯಬಹುದು.


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233 

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿhttps://play.google.com/store/apps/de... 

► Microbi Agrotech Website: http://www.microbiagro.com 

► Subscribe to Microbi Agrotech: https://youtube.com/c/MICROBIAGROTECH... 

► Like us on Facebook: https://www.facebook.com/microbiagrot... 

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.


ಬರಹ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Website Promotion and Content Marketing through Ocat Online Catalog in India | Powered by Ocat Digital Pvt.Ltd