Blog

ಸಾವಯವ ಕೃಷಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೋಳಿಗೊಬ್ಬರ ಬೇಡಿಕೆ ಹೆಚ್ಚಿಸಿಕೊಳ್ಳತೊಡಗಿದೆ. ಕೋಳಿ ಹಿಕ್ಕೆ ಹಾಗೂ ದುರ್ವಾಸನೆಯಿಂದ ಕೆಲವೇ ವರ್ಷಗಳ ಹಿಂದೆ ಅವಕೃಪೆಗೆ ಒಳಗಾಗಿದ್ದ ಕೋಳಿ ಗೊಬ್ಬರ ಇಂದು ಟನ್ ಗಟ್ಟಲೇ ವ್ಯಾಪರವಾಗುತ್ತಿದೆ. ಆದರೆ ಕೋಳಿ ಗೊಬ್ಬರ ಬಳಸುವ ಮುನ್ನ ಕೃಷಿಕರು ವಹಿಸಿಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳು ಅತಿ ಮುಖ್ಯ.


ಈಗ ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ಕೃಷಿ ಭೂಮಿ ತೇವಾಂಶದಿಂದ ತತ್ತರಿಸುತ್ತಿವೆ. ಕೋಳಿ ಗೊಬ್ಬರ ಶೀತವಾತಾವರಣಕ್ಕೆ ಉತ್ತಮ ಮದ್ದಾಗಿದ್ದು ಬೆಳೆಯನ್ನು ಶೀತದಿಂದ ಉಳಿಸಿಕೊಳ್ಳಬಹುದು. ಕೋಳಿಗಳ ಗೊಬ್ಬರದಲ್ಲಿ ಇತರ ಪ್ರಾಣಿಗಳ ಗೊಬ್ಬರಗಳಿಗಿಂತ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂನಂತಹ ಪ್ರಧಾನ ಪೋಷಕಾಂಶ ಲಭ್ಯವಿರುತ್ತದೆ. ಇವುಗಳೊಂದಿಗೆ ಲಘು ಪೋಷಕಾಂಶಗಳಾದ ಕಬ್ಬಿಣ, ಮ್ಯಾಂಗನೀಸ್, ಕಾರ್, ಕೋಬಾಲ್ಟ್ , ಮ್ಯಾಲಿಬ್ಡಿನಂ ಸೇರಿ ಹಲವಾರು ಖನಿಜಗಳಿವೆ. ಕೋಳಿ ಗೊಬ್ಬರವನ್ನು ವ್ಯವಸ್ಥಿತವಾಗಿ ಶೇಖರಣೆ ಮಾಡುವ ಮುಖಾಂತರ ಬೆಳೆಗಳ ಮೇಲೆ ಪರಿಣಾಮಕಾರಿ ಗೊಬ್ಬರದ ಮೌಲ್ಯವನ್ನು ಹೆಚ್ಚಿಸಬಹುದು. ಸಾಮಾನ್ಯವಾಗಿ ಕೋಳಿಗಳಲ್ಲಿ ಜೀರ್ಣಾಂಗ ಮತ್ತು ಮೂತ್ರ ಜನಾಂಗವೂ ಶರೀರದ ಒಂದೇ ಭಾಗದಲ್ಲಿ ಸೇರಿರುವುದರಿಂದ ಮಲ ಮತ್ತು ಮೂತ್ರಗಳೆರಡು ಸೇರಿ ಹೊರಬರುತ್ತವೆ. ಹಾಗಾಗಿ ಇತರ ಪ್ರಾಣಿ ಮಲ ಮೂತ್ರಗಳಿಗಿಂತ ಇದು ಪರಿಣಾಮಕಾರಿಯಾಗಿರುತ್ತದೆ.


ಕೋಳಿ ಗೊಬ್ಬರವನ್ನು ನೇರವಾಗಿ ಬಿಸಿಲಿಗೆ ಶೇಖರಿಸಿದರೆ ಬಿಸಿಲ ಪ್ರಖರತೆಯಿಂದ ಗೊಬ್ಬರದಲ್ಲಿ ಪೋಷಕಾಂಶಗಳು ನಾಶವಾಗಿ ಗುಣಮಟ್ಟ ಕಡಿಮೆಯಾಗುತ್ತದೆ. ತಂಪಾದ ಸ್ಥಳ ಹಾಗೂ ಗುಂಡಿಗಳಲ್ಲಿ ಶೇಖರಿಸಿಡುವುದರಿಂದ ಅದರ ಮೌಲ್ಯ ವೃದ್ಧಿಸಬಹುದು, ಯಾವುದೇ ಕೊಟ್ಟಿಗೆ ಗೊಬ್ಬರವಿದ್ದರೂ, ಅದನ್ನು ನೆರಳಿನಲ್ಲಿಯೇ ಶೇಖರಿಸಿಡಬೇಕು. ಕೋಳಿ ಗೊಬ್ಬರವನ್ನು ತಂದ ಕೂಡಲೇ ಬೆಳೆಗಳಿಗೆ ಉಪಯೋಗಿಸಬಾರದು.  ಕೆಲವು ದಿನಗಳ ಕಾಲ ನೆರಳಿನಲ್ಲಿ ತಂಪಾದ ಜಾಗದಲ್ಲಿ ಶೇಖರಣೆ ಮಾಡಿ, ನಂತರ ಬೆಳೆಗಳಿಗೆ ನೀಡಬೇಕು. ಹೀಗೆ ಮಾಡುವುದರಿಂದ ಜೀವಾಣುಗಳು ಉತ್ಪತ್ತಿಯಾಗಿ ಬೆಳೆಗಳು ಆರೋಗ್ಯವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಸಾಧ್ಯವಾದಷ್ಟೂ ಬೆಳೆಗಳ ಆರಂಭಿಕ ಹಂತದಲ್ಲಿ ಉಪಯೋಗಿಸದೆ, ಬೆಳೆಗಳು 25% ಬೆಳೆವಣಿಗೆ ಆದ ನಂತರ ಜುಲೈನಿಂದ ಜವರಿ ವರೆಗಿನ ತಂಪಾದ ವಾತಾವರಣದಲ್ಲಿ ಉಪಯೋಗಿಸುವುದು ಬಹಳ ಪರಿಣಾಮಕಾರಿ.


ಇನ್ನು ಕೋಳಿ ಗೊಬ್ಬರದ ಬಳಕೆ ಕೃಷಿ ಭೂಮಿಗೆ ನೀಡುವ ಬಗೆ ಹೇಗೆ ಎಂಬುದರ ಸಮಗ್ರ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=tNffPWSDh4c&t=1545s


ಬರಹ: ವನಿತಾ ಪರಸನ್ನವರ್


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

#compost  #poultrymenure  #howtogivepoultrymenure  #usesofpoultrymenure  #howtosaveearth  #poultrymanure  #chickenmanure  #manure  #poultrymanuredryer  #poultry  #poultrymanuredrier  #poutrymanure  #poultrymanuredrying  #manuredryer  



Blog




Home    |   About Us    |   Contact    |   
microbi.tv | Powered by Ocat Online Advertising Service in India