Blog

       ಅಡಿಕೆ ರೈತರಿಗೆ ಲಾಭತರುವ ಬೆಳೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಅತಿ ಹೆಚ್ಚು ನಿರ್ವಹಣೆಯಿಲ್ಲದೆ ಬೆಳೆಯಬಹುದು. ಆದರೆ ಮೂಲಭೂತ ನಿರ್ವಹಣೆಯಲ್ಲಿ ಎಡವಿದರೆ ಸಮಸ್ಯೆಗಳು ಕಾಣಿಸಿಕೊಂಡು ಇಳುವರಿ ಕಡಿಮೆಯಾಗುವುದಂತೂ ಸತ್ಯ. ಇಲ್ಲೊಬ್ಬ ರೈತರ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ 500 ಗಿಡಗಳು ನಾಶಗೊಂಡಿದ್ದಾವೆ. ಇದಕ್ಕೆ ಪರಿಹಾರ ಏನು? ಸಮಸ್ಯೆಗಳ ಮೂಲ ಹುಡುಕುವುದು ಹೇಗೆ? ನೋಡೋಣ ಬನ್ನಿ….

 

       ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗನ್ನಾಯಕನಹಳ್ಳಿಯ ಉಮಾಶಂಕರ್ ಅವರು ತಮ್ಮ 6 ಎಕರೆ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದಾರೆ. 10 ವರ್ಷದ ಈ ಅಡಿಕೆ ತೋಟದಲ್ಲಿ ಮೊದಲು 3 ಸಾವಿರ ಮರಗಳಿದ್ದವು ಆದರೆ ಸುಳಿ ರೋಗ ಮತ್ತು ಕೊಳೆರೋಗಗಳಿಗೆ ಸಿಲುಕಿ 500 ಗಿಡಗಳು ಸತ್ತುಹೋಗಿವೆ. ಇರುವ 2500 ಮರಗಳಲ್ಲೂ ಗರಿಗಳು ಒಣಗುತ್ತಿವೆ. ಇವೆಲ್ಲ ಸಮಸ್ಯೆಗಳ ಮೂಲ ಹುಡುಕಲು ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರು ತೋಟಕ್ಕೆ ಭೇಟಿ ನೀಡಿದರು. ತೋಟವನ್ನು ಪರಿಶೀಲಿಸಿ ಸಮಸ್ಯೆಗಳನ್ನು ಕಂಡುಹಿಡಿದು ರೈತರಿಗೆ ತಿಳಿಸಿದರು.

 

       ಉಮಾಶಂಕರ್ ಅವರು ತಮ್ಮ ತೋಟದಲ್ಲಿ ಹೆಚ್ಚು ನೀರು ಹಾಯಿಸುತ್ತಿದ್ದರ ಪರಿಣಾಮ, ತೋಟದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದಾವೆ ಎಂದು ತಿಳಿಸಿದರು. ಈ ರೈತ ತೋಟಕ್ಕೆ ಮಣ್ಣನ್ನು ಹೆಚ್ಚು ಹೊಡೆಸಿರುವುದರಿಂದ ಕೂಡ ಸಮಸ್ಯೆಗಳು ಉದ್ಭವಿಸಿವೆ ಎಂದು ತಿಳಿಸಿದರು. ಇವೆರಡು ಕಾರಣದಿಂದ ಮಣ್ಣು ನಿರ್ಜೀವವಾಗುತ್ತಿದೆ, ಉಪಕಾರಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಕಡಿಮೆಯಾಗಿದೆ. ಎರೆಹುಳುಗಳ ಸಂಖ್ಯೆ ಕಡಿಮೆಯಾಗಿವೆ. ತ್ಯಾಜ್ಯಗಳ ಕಳೆಯುವಿಕೆ ಕಡಿಮೆಯಾಗಿ ಮಣ್ಣಿನ ಫಲವತ್ತತೆ ಕುಂಠಿತಗೊಂಡಿದೆ. ಮಣ್ಣಿನ ಜೀವಿಗಳ ಚಟುವಟಿಕೆ ಕಡಿಮೆಯಾದ್ದರಿಂದ ಬೇರುಗಳಿಗೆ ಪೌಷ್ಟಿಕಾಂಶದ ಲಭ್ಯತೆ ಕಡಿಮೆಯಾಗಿ ಅಡಿಕೆ ಮರಗಳು ನಿಶ್ಯಕ್ತವಾಗಿವೆ. ಹಾಗಾಗಿ ಅಡಿಕೆ ಮರಗಳು ರೋಗ, ಕೀಟಬಾಧೆಗಳಿಗೆ ತುತ್ತಾಗಿ ಬೆಳವಣಿಗೆ ಮತ್ತು ಇಳುವರಿ ಕುಂಠಿತಗೊಂಡಿವೆ.

 

 

ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಪೂರ್ತಿ ವಿಡೀಯೋ ನೋಡಿ

https://www.youtube.com/watch?v=qg1-HD7uPPk&t=339s

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #highyield  #healthycrop  #soilhealth  #arecafarming  #arecanut  #diseasecontrol  #arecayield  #watermanagement  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing