Blog

       ಶ್ರೀಗಂಧ ತನ್ನ ಪರಿಮಳ ಮತ್ತು ದುಬಾರಿ ಬೆಲೆಗೆ ಜನಪ್ರಿಯ. ಶ್ರೀಗಂಧ ಅತ್ಯಂತ ದುಬಾರಿ ಮರಗಳಲ್ಲೊಂದು. ಇವು slow growing ಅಥವಾ ನಿಧಾನವಾಗಿ ಬೆಳೆಯುವ ಮರಗಳಾಗಿವೆ ಸಾಮಾನ್ಯವಾಗಿ 15ರಿಂದ 20 ವರ್ಷಗಳು ಬೇಕಾಗುತ್ತದೆ ಮತ್ತು ಕೆಲವು ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತವೆ. ಹಾಗಾಗಿ ಇದರ ಬೆಲೆ ದುಬಾರಿ. ಶ್ರೀಗಂಧ ಬೆಳೆದರೆ ಕೋಟಿ ಆದಾಯ ಮಾಡಬಹುದು ಎಂದು ಹೇಳುತ್ತಾರೆ, ಅದು ನಿಜವೇ?

       ಮೊದಲನೆಯದಾಗಿ ಶ್ರೀಗಂಧ ಬೆಳೆಯುವುದು ಸುಲಭವಲ್ಲ. ಇದನ್ನು ಎಲ್ಲಾ ಕಡೆ ಬೆಳೆಯಲಾಗುವುದಿಲ್ಲ. ಹಾಗಾಗಿ ಬೆಳೆಯುವಾಗ ರೈತರು ಎಡವಟ್ಟು ಮಾಡಿಕೊಳ್ಳುವುದೇ ಜಾಸ್ತಿ. ಶ್ರೀಗಂಧ ಒಂದು stress loving tree, ಇದಕ್ಕೆ ಹೆಚ್ಚು ನೀರು ಕೊಡದೇ ಉಷ್ಣ ತಾಪಮಾನದಲ್ಲಿ ಬೆಳೆಸಬೇಕು. ಹೆಚ್ಚು ನೀರು ಕೊಟ್ಟರೆ heartwood ಮತ್ತು ಎಣ್ಣೆಯ ಅಂಶ ಅಭಿವೃದ್ಧಿಯಾಗದೇ ಮರದ ಗುಣಮಟ್ಟ ಕುಸಿಯುತ್ತದೆ. ಇದರಿಂದ ಬೆಲೆ ಸಿಗದೇ ಆದಾಯ ಕೂಡ ಸಿಗುವುದಿಲ್ಲ. ರೈತರು ಮಾಡುವ ಇನ್ನೊಂದು ತಪ್ಪೆಂದರೆ host plant ಆಯ್ಕೆ. ಶ್ರೀಗಂಧ ಮರಗಳ ಬೇರಿನ ವ್ಯವಸ್ಥೆ ಬೇರೆ ಮರಗಳಂತೆ ಅಭಿವೃದ್ಧಿಯಾಗಿರುವುದಿಲ್ಲ. ಹಾಗಾಗಿ host plant ಅಥವಾ ತಿಥೇಯ ಸಸ್ಯ/ಮರದ ಅವಶ್ಯಕತೆ ಇರುತ್ತದೆ. ಇದರ ಮುಖಾಂತರವೇ ಶ್ರೀಗಂಧ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಸರಿಯಾದ host plant ಆಯ್ಕೆ ಮಾಡುವುದು ಅತ್ಯಂತ ಅವಶ್ಯಕ. ಯಾವುದೇ ಕಾರಣಕ್ಕೂ ಶ್ರೀಗಂಧಕ್ಕಿಂತ ಹೆಚ್ಚು ಎತ್ತರ ಬೆಳೆಯದ ಮರಗಳನ್ನು host plantಗಳಾಗಿ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಮರಗಳಿಗೆ ಉತ್ತಮ ಬೆಳಕು ಮತ್ತು ತಾಪಮಾನ ದೊರೆಯುತ್ತದೆ. ಶ್ರೀಗಂಧ ಬೆಳೆಯಲು ಇರುವ ಮತ್ತೊಂದು ಸಮಸ್ಯೆಯೆಂದರೆ ಅದು ಕಳ್ಳರ ಕಾಟ. ದುಬಾರಿ ಮರವಾದ ಶ್ರೀಗಂಧ ಕಳ್ಳಕಾಕರ ಹಾವಳಿಗೆ ಒಳಗಾಗುವುದು ಸಾಮಾನ್ಯವಾಗಿದೆ. ಶ್ರೀಗಂಧ ಕಳುವು ತಪ್ಪಿಸಲು ಮತ್ತು ರಕ್ಷಣೆ ಒದಗಿಸಲು ಮೈಕ್ರೋ ಚಿಪ್ ಅಳವಡಿಸಬಹುದು. ಶ್ರೀಗಂಧ ರಕ್ಷಣೆಗೆ ಸರ್ಕಾರದಿಂದ ಸವಲತ್ತು ಕೂಡ ದೊರೆಯುತ್ತದೆ. 1 ಎಕರೆಯಲ್ಲಿ ಸುಮಾರು 100 ಶ್ರೀಗಂಧ ಬೆಳೆಯಬಹುದಾದ್ದರಿಂದ, ಈಗಿನ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 2 ಕೋಟಿ ತನಕ ಆದಾಯ ಪಡೆಯಬಹುದು.

       ಸರ್ಕಾರ ಶ್ರೀಗಂಧ ಬೆಳೆಯುವುದರ ಮೇಲಿದ್ದ ನಿಷೇಧ ತೆಗೆದುಹಾಕಿದ ಮೇಲೂ ಶ್ರೀಗಂಧ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಬೇಡಿಕೆ ಕೂಡ ಹೆಚ್ಚಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬಹುದು. ಇಷ್ಟು ಲಾಭವಿರುವ ಶ್ರೀಗಂಧವನ್ನು ಬೆಳೆಯಲು host plantಗಳಾಗಿ ಯಾವ ಬೆಳೆಗಳನ್ನು ಬೆಳೆಯಬಹುದು? ಇದರ ರಕ್ಷಣೆ ಹೇಗೆ? ಸರ್ಕಾರ e-protection system ಮೂಲಕ ರೈತರಿಗೆ ಹೇಗೆ ಸಹಾಯ ಮಾಡುತ್ತದೆ? ಮತ್ತಿತರ ಶ್ರೀಗಂಧ ಸಂಬಂಧಿತ ಪ್ರಶ್ನೆಗಳಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=uGe52DRITc4

 

ಬರಹ: ರವಿಕುಮಾರ್

 

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #sandalwood  #forestcrops  #heartwood  #hostplants  #agribusiness  #sandalwoodcultivation  #earnmore  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing