Blog

       ಕಬ್ಬು ನಮ್ಮ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆ. ಉಷ್ಣವಲಯದಲ್ಲಿ ಬೆಳೆಯಲಾಗುವ ಒಂದು ಬಹುವಾರ್ಷಿಕ ಬೆಳೆ ಇದಾಗಿದೆ. ಬ್ರೆಜಿಲ್ ಮತ್ತು ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳಾಗಿವೆ. ಕಬ್ಬನ್ನು ಸಕ್ಕರೆ ತಯಾರಿಸಲು ಬಳಸುವುದಲ್ಲದೆ, ಜಾನುವಾರುಗಳಿಗೆ ಮೇವಾಗಿ ಕೂಡ ಬಳಸಲಾಗುತ್ತದೆ. ಕಬ್ಬನ್ನು ಬೆಳೆಯಲು ಹಲವು ವಿಧಾನಗಳಿವೆ. ಸಾಮಾನ್ಯವಾಗಿ ಬೆಳೆಯುವ 4 ಅಡಿ ಅಂತರದ ವಿಧಾನ, ಜೋಡಿ ಸಾಲು ಪದ್ಧತಿ, ಇತ್ಯಾದಿ. ನಾವು ಇಲ್ಲಿ ಹೇಳಲು ಹೊರಟಿರುವುದು ರಿಂಗ್ ಪಿಟ್ ವಿಧಾನದ ಬಗ್ಗೆ. ಇಲ್ಲೊಬ್ಬ ರೈತರು ಈ ಮಾದರಿಯಲ್ಲಿ ಕಬ್ಬು ಬೆಳೆದಿದ್ದಾರೆ. ಹೇಗೆ ಮಾಡಿದ್ದಾರೆ? ಇದರಿಂದ  ಇವರಿಗೆ ಲಾಭವಾಗಿದೆಯಾ? ತಿಳಿಯೋಣ ಬನ್ನಿ.

 

       ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಶಿವಶರಣಪ್ಪ ಬುಳ್ಳರವರು ತಮ್ಮ 18 ಎಕರೆ ಜಮೀನಿನಲ್ಲಿ ಪೇರಲ, ತೆಂಗು, ಕರಿಬೇವು ಮುಂತಾದ ಬೆಳೆಗಳ ಜೊತೆ ರಿಂಗ್ ಪಿಟ್ ಮಾದರಿಯಲ್ಲಿ ಕಬ್ಬನ್ನೂ ಸಹ ಬೆಳೆದಿದ್ದಾರೆ. ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿದಲ್ಲಿ ಡಾ.ಸಾಯಿಲ್ ಬಳಸಿ ಕಬ್ಬನ್ನು ಬೆಳೆಯುತ್ತಿದ್ದಾರೆ. ಈ ಮಾದರಿಯಲ್ಲಿ ಗುಣಿಗಳನ್ನು ತೋಡಿ ಕಬ್ಬಿನ ಕಣ್ಣುಗಳನ್ನು ನೆಡಲಾಗುತ್ತದೆ. ಇವರು ಪ್ರಾಯೋಗಿಕವಾಗಿ ಸಾಲಿನಿಂದ ಸಾಲಿಗೆ ವಿವಿಧ ಅಂತರಗಳನ್ನು ಕೊಟ್ಟು, ಹೆಚ್ಚು ಇಳುವರಿಯ ಪರೀಕ್ಷೆ ಮಾಡುತ್ತಿದ್ದಾರೆ. 2 ಅಡಿ ಆಳದ ಗುಣಿಗಳನ್ನು ತೋಡಿ 20 ಕಣ್ಣುಗಳನ್ನು ನೆಟ್ಟಿದ್ದಾರೆ. ಈ ಪದ್ಧತಿಯಲ್ಲಿ ಬೆಳೆಯುವುದರಿಂದ ಗಾಳಿ-ಬೆಳಕು ಚೆನ್ನಾಗಿ ಸಿಗುತ್ತದೆ ಎಂದು ಶಿವಶರಣಪ್ಪ ಬುಳ್ಳರವರು ಹೇಳುತ್ತಾರೆ. ಗುಣಿ ಆಳ ಇರುವುದರಿಂದ ಕಬ್ಬು ಗಾಳಿಗೆ ಬೀಳದೆ ಗಟ್ಟಿಯಾಗಿ ನಿಲ್ಲುತ್ತವೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಖರ್ಚು ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಈ ರೈತ. ರಿಂಗ್ ಪಿಟ್ ಪದ್ಧತಿ ಅಥವಾ ಗುಣಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ನೀರು ಕೂಡ ಕಡಿಮೆ ಬೇಕಾಗುತ್ತದೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ರೈತ ಶಿವಶರಣಪ್ಪ ಬುಳ್ಳರವರು. ಇವರ ಪೂರ್ತಿ ಸಂದರ್ಶನ ಕೇಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=uxlY1FMmya4&t=78s

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #organicfarming  #integratedfarming  #highyield  #healthycrop  #sugarcane  #ringpit  #ringpitmethod  #plantnutrition  #cultivationtechniques  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing