Blog

 

       ಕೃಷಿಯಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿ ಶ್ರೇಷ್ಠ. ಆದರೆ ಸಾವಯವ ಕೃಷಿಯಲ್ಲೂ ಅದೇ ರಾಗ ಅದೇ ಗೋಳು, ಡಾ.ಸಾಯಿಲ್ ಬಳಸಿದ್ರೂ, ಅದ್ರಲ್ಲೂ ಸಹ ರಾಸಾಯನಿಕ ಕೃಷಿಯಷ್ಟೆ ಇಳುವರಿ ಬರೋದು. ಏನೂ ವ್ಯತ್ಯಾಸ ಇಲ್ಲ ಅನ್ನೋ ಎಷ್ಟೋ ರೈತರಿಗೆ ಉತ್ತರ ಲ್ಲಿದೆ.

       ಮೊದಲನೇ ವಿಷಯ, ಡಾ.ಸಾಯಿಲ್ ಅನ್ನು ಬಳಸಿದ ಮಾತ್ರಕ್ಕೆ ಇಳುವರಿ ಅಧಿಕವಾಗಿಬಿಡುವುದಿಲ್ಲ. ಯಾಕೆಂದರೆ ಅದೊಂದು ಉಪಕಾರಿ ಸೂಕ್ಷ್ಮಜೀವಿಗಳ ಮಿಶ್ರಣ. ಉಪಕಾರಿ ಸೂಕ್ಷ್ಮಜೀವಿಗಳು ವೃದ್ಧಿಸಲು ಸೂಕ್ತ ವಾತಾವರಣ ಇದ್ದಾಗ ಮಾತ್ರವೇ ಡಾ.ಸಾಯಿಲ್ ಅಧಿಕ ಇಳುವರಿಗೆ ಸಹಕಾರಿ. ಹಾಗಾದರೆ ಅಧಿಕ ಇಳುವರಿ ಪಡೆಯಲು ಏನು ಮಾಡಬೇಕು? ಸಾವಯವ ರೈತರು ಮಾಡುತ್ತಿರುವ ಪ್ರಮಾದಗಳೇನು? ಅವನ್ನು ಸರಿಪಡಿಸಿಕೊಳ್ಳುವುದು ಹೇಗೆ?

 

ರೈತರು ಮಾಡುತ್ತಿರುವ ಪ್ರಮಾದಗಳು

1. ಕಳೆನಾಶಕಗಳ ಬಳಕೆ

       ರೈತರು ಮಾಡುವ ಮೊದಲನೇ ತಪ್ಪು ರಾಸಾಯನಿಕ ಕಳೆನಾಶಕ ಬಳಸುವುದು. ಕಳೆನಾಶಕ ಬಳಕೆ ಸಾವಯವ ಕೃಷಿಯಲ್ಲ ಮತ್ತು ಇವುಗಳನ್ನು ಬಳಸುವುದರಿಂದ ಮಣ್ಣಿನ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಇದರಿಂದ ಮಣ್ಣಿನ ಫಲವತ್ತತೆ ಕುಂಠಿತಗೊಳ್ಳತ್ತದೆ. ಹಾಗಾದರೆ ಕಳೆ ಬಂದರೆ ಏನು ಮಾಡಬೇಕು? ಕಳೆ ಕಡಿಮೆ ಬರುವ ಹಾಗೆ ಮಾಡಬಹುದು. ಕೆಲವು ಬೆಳೆಗಳಲ್ಲಿ ನಡುವೆ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಮತ್ತು ಬಂದ ಕಳೆಗಳನ್ನು ಹೊದಿಕೆ(Mulching) ಮಾಡುವುದರಿಂದ ಕಳೆಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದು.

 

2. ನೀರಿನ ನಿರ್ವಹಣೆ

       ಎರಡನೆಯ ತಪ್ಪು ನೀರಿನ ನಿರ್ವಹಣೆ. ನೀರಿನ ಅಭಾವದಿಂದ ನಷ್ಟ ಮಾಡಿಕೊಂಡವರಿಗಿಂತ ಅತೀ ಹೆಚ್ಚು ನೀರಿನಿಂದ ನಷ್ಟ ಮಾಡಿಕೊಂಡವರೇ ಹೆಚ್ಚು. ನೀರು ಹೆಚ್ಚಾದರೆ ಮಣ್ಣಿನ ಉಪಕಾರಿ ಸೂಕ್ಷ್ಮಾಣು ಜೀವಿಗಳು ನಾಶವಾಗಿ, ಅಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ವೃದ್ಧಿಸುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಕುಂಠಿತಗೊಳ್ಳುತ್ತದೆ.

 

3. ಕೃಷಿ ತ್ಯಾಜ್ಯಗಳು

       ಕೃಷಿ ತ್ಯಾಜ್ಯಗಳು ಇಲ್ಲದಿರುವುದು ರೈತರು ಮಾಡುವ ಮತ್ತೊಂದು ತಪ್ಪು. ಜಮೀನಿನಲ್ಲಿ ತ್ಯಾಜ್ಯಗಳಿದ್ದರೆ ಹೊರಗಡೆಯಿಂದ ರಾಸಾಯನಿಕಗಳನ್ನು ತರುವ ಅವಶ್ಯಕತೆಯೇ ಬರುವುದಿಲ್ಲ. ಕಳೆಗಳನ್ನು ತ್ಯಾಜ್ಯಗಳಾಗಿ ಬಳಸಿಕೊಳ್ಳಬಹುದು. ಜಮೀನಿನಲ್ಲಿ ತ್ಯಾಜ್ಯಗಳನ್ನು ಹೆಚ್ಚಿಸಲು ಏನು ಮಾಡಬಹುದು?

       ಡಾ.ಸಾಯಿಲ್ ಬಳಸುವುದರ ಜೊತೆಗೆ ರೈತರು ತಾವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಂಡರೆ ಉತ್ತಮ ಇಳುವರಿ, ಅಧಿಕ ಲಾಭ ಗಳಿಸಬಹುದು. ಈ ಮೂರು ತಪ್ಪುಗಳಿಂದ ಆಗುವ ಅನಾಹುತಗಳು ಹಲವಾರು. ಇವುಗಳಿಂದ ಮಣ್ಣು, ಉಪಕಾರಿ ಸೂಕ್ಷ್ಮಾಣು ಜೀವಿಗಳು ಮತ್ತು ಇಳುವರಿಯ ಮೇಲಾಗುವ ಪರಿಣಾಮ ಮತ್ತು ಪರಿಹಾರಗಳನ್ನು ತಿಳಿಯಲು ಕೆಳಗಿನ ಲಿಂಕ್  ಕ್ಲಿಕ್ ಮಾಡಿ.

https://www.youtube.com/watch?v=VaWUbl9FDS8

 

ಬರಹ: ರವಿಕುಮಾರ್

 

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #mistakesinorganicfarming  #learnorganicfarming  #correctwayoffarming  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing