Blog

ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಪ್ರಯತ್ನ.

 

ಮನುಷ್ಯ ತಿನ್ನುವ ಮೂರನೇ ಒಂದರಷ್ಟು ಅಂದರೆ ಶೇ. 70ರಷ್ಟು ಆಹಾರ ಜೇನುನೊಣಗಳನ್ನು ಅವಲಂಬಿಸಿದೆ. ಬಾಕಿ ಉಳಿದ ಶೇ. 30 ಚಿಟ್ಟೆ , ದುಂಬಿ ಸೇರಿದಂತೆ ಇತರ ಕೀಟ ಸಂತತಿಯನ್ನು ಅವಲಂಬಿಸಿದೆ. ಹೀಗಾಗಿ, ಜೇನುನೊಣಗಳು ಇಲ್ಲದೇ ಇದ್ದರೆ ನಾವು ತಿನ್ನುವ ಯಾವ ವಸ್ತುವೂ ನಮ್ಮ ಕೈಸೇರದು.. ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೇ ಈಗ ಸಂಚಕಾರ ಬಂದಿದೆ. 10-15  ವರ್ಷಗಳಿಂದ ಜೇನುನೊಣಗಳು ಕಣ್ಮರೆಯಾಗುತ್ತಿವೆ.

 

ರೈತಮಿತ್ರ ಎಂದರೆ ಎರೆಹುಳುಗಳು ನೆನಪಾಗುತ್ತವೆ. ಆದರೆ ಜೇನುನೊಣಗಳು ಕೂಡ ಅನ್ನದಾತರ ಮಿತ್ರ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ರೈತರು ಬೆಳೆ ಬೆಳೆಯುವಾಗಲೂ ಈ ನೊಣಗಳ ಪಾತ್ರ ಬಲು ಮಹತ್ವವಾದುದು. ಇದು ಹಲವರಿಗೆ ಆದಾಯದ ಮೂಲವೂ ಹೌದು. ಬದುಕಿನುದ್ದಕ್ಕೂ ಬೇರೆಯವರಿಗೆ ಸಿಹಿ ಕೊಡಲು ಕಷ್ಟಪಡುವ ಈ ಪುಟ್ಟ ಜೀವಗಳು ಈಗ ಕಹಿ ನುಂಗುತ್ತಿವೆ. ಬದುಕನ್ನೇ ಕಳೆದುಕೊಳ್ಳುತ್ತಿವೆ. ಜೇನುನೊಣಗಳನ್ನು ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಅದಕ್ಕೇನು ದೊಡ್ಡ ತ್ಯಾಗ ಮಾಡಬೇಕಾಗಿಲ್ಲ. ನಾವಿದ್ದ ಪರಿಸರ ಚೆನ್ನಾಗಿಟ್ಟರೆ ಅಷ್ಟೇ ಸಾಕು. ಅದರ ಜತೆಗೆ  ಸಾವಯವ ಕೃಷಿ ಪದ್ಧತಿ ಅನುಸರಿಸುವುದು, ಮರಗಿಡಗಳನ್ನು ಬೆಳೆಸಬೇಕಷ್ಟೆ. ನೆನಪಿರಲಿ… ಜೇನುನೊಣವಿದ್ದರೆ ನಾವಿರುತ್ತೇವೆ.

 

 ವನಿತಾ ಪರಸಣ್ಣವರ್

 

https://youtu.be/EGQF5rtRZ7U

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

#microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing