ಶ್ರೀಗಂಧ ಮರವು ಅತ್ಯಂತ ಶ್ರೇಷ್ಠ ಮರ ಮತ್ತು ಅತ್ಯಂತ ಬೆಲೆ ಬಾಳುವ ಮರ. ಕಾಂಡ, ಬೇರು , ಎಲೆ, ಬೀಜ, ಪ್ರತಿಯೊಂದು ಭಾಗವೂ ತುಂಬಾನೇ ಬೆಲೆ ಬಾಳುವಂತವಾಗಿವೆ. ಹಿಂದೆ ಶ್ರೀಗಂಧ ಬೆಳೆಯುವುದು ಕಾನೂನು ಪ್ರಕಾರ ನಿಷಿದ್ಧವಾಗಿತ್ತು. ಆದರೆ ಈಗ ಕಾನೂನನ್ನು ಸಡಿಲಿಕೆ ಮಾಡಿದ್ದು, ಖಾಸಗಿ ಭೂಮಿಯಲ್ಲಿ ಬೆಳೆಸಬಹುದು. ಇದನ್ನು ಸರ್ಕಾರವೇ ನೇರವಾಗಿ ಖರೀದಿ ಮಾಡುತ್ತದೆ.
ಶ್ರೀಗಂಧ ಮರವು ಪರಾವಲಂಬಿ ಗಿಡ. ಬೇರೆಲ್ಲಾ ರೀತಿಯ ಕೃಷಿಯ ಮೂಲಕ ಲಕ್ಷಗಳ ಆದಾಯ ಗಳಿಸಲು ಹೇಗೆ ಸಾಧ್ಯವಿದೆಯೋ, ಅದೇ ರೀತಿ ಶ್ರೀಗಂಧದ ಮರ ಬೆಳೆಸುವ ಮೂಲಕ ಕೂಡಾ ಆದಾಯ ಗಳಿಸಬಹುದಾಗಿದೆ. ಸಾವಯವ ಸಮಗ್ರ ಸುಸ್ಥಿರ ಕೃಷಿಯಲ್ಲಿ ಅರಣ್ಯ ಕೃಷಿಯನ್ನು ಮಾಡಿಕೊಂಡು, ಶ್ರೀಗಂಧ ಮರವನ್ನು ಬೆಳೆಯಬಹುದು. ಇದರಿಂದ ರೈತರಿಗೆ ಕೋಟಿ ಕೋಟಿ ಆದಾಯ ಕಟ್ಟಿಟ್ಟಬುತ್ತಿ.
ಶ್ರೀಗಂಧದ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ, ಆದ್ದರಿಂದಲೇ ಇದನ್ನು ನೀರು ನಿಲ್ಲುವಂತಹ ಪ್ರದೇಶದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಮಾಡಿದರೆ ಸಸಿಗಳು ಕೊಳೆತು ಹೋಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಶ್ರೀಗಂಧ ಮರ ಬೆಳೆಯುವಾಗ ವಿಶೇಷ ಕಾಳಜಿ ವಹಿಸುವುದು ಉತ್ತಮ. ವೈಜ್ಞಾನಿಕವಾಗಿ ಬೆಳೆದರೆ ಮಾರ್ಕೇಟ್ ನಲ್ಲಿ ಬೇಡಿಕೆ ಹೆಚ್ಚು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕ್ ನ್ನು ಕ್ಲಿಕ್ ಮಾಡಿ
https://www.youtube.com/watch?v=uGe52DRITc4&t=66s
ಬರಹ: ವನಿತಾ ಪರಸಣ್ಣವರ್
#sandalwoodcultivation #redsandalwoodcultivation #sandalwoodfarming #sandalwood #sandalwoodcropcultivation #sandalwoodfarminginindia #sandalwoodcultivationinindia #sandalwoodtree #sandalwoodfarm #doubtsofsandalwoodcultivationkannada #indiansandalwoodcropcultivation #berichwithsandalwoodcultivation #idealfarmerinsandalwoodcultivation
Blog