ಸಾವಯವ ಕೃಷಿ ಪದ್ಧತಿಯಲ್ಲಿ ಕೀಟಬಾಧೆ, ರೋಗಬಾಧೆ, ಕಳೆ ನಿಯಂತ್ರಣ ಕಷ್ಟ ಎಂದುಕೊಳ್ಳುವ ರೈತರು, ಈ ವಿಚಾರಗಳನ್ನು ತಿಳಿದುಕೊಳ್ಳಲೇ ಬೇಕು. ಇವುಗಳ ನಿಯಂತ್ರಣ ತುಂಬಾ ಸರಳವಾಗಿದ್ದು, ಸಾವಯವ ಕೃಷಿಯಲ್ಲಿ ಸರಳ ಸಾಧನಗಳಿಂದ ನಿಯಂತ್ರಿಸಬಹುದಾಗಿದೆ.
ಹೌದು, ಯಾವುದೇ ರಾಸಾಯನಿಕ ಕೀಟನಾಶಕಗಳಿಲ್ಲದೆ, ಕಳೆನಾಶಕ ಸ್ಪ್ರೇ ಗಳಿಲ್ಲದೆ, ಜೈವಿಕ ಸ್ಪ್ರೇಗಳು, ಸಾವಯವ ಸ್ಪ್ರೇಗಳನ್ನು ನಮ್ಮ ಸುತ್ತಮುತ್ತಲಿನ ಪರಿಸರದಿಂದ, ಆಕಳು ಗಂಜಲ, ಇತ್ಯಾದಿಗಳಿಂದ, ಸಾವಯವ ಸ್ಪ್ರೇಗಳನ್ನು ತಯಾರಿಸುವ ಸುಲಭವಾದ ದಾರಿ ಇದೆ. ಇವುಗಳನ್ನು ಬಳಸುವುದರಿಂದ ನಿಮ್ಮ ಕೃಷಿ ಭೂಮಿಯ ಮಣ್ಣು ಆರೋಗ್ಯವಾಗಿರುತ್ತದೆ. ಬೆಳೆದ ಬೆಳೆ ಕೈಗೆ ಸಿಗುತ್ತದೆ. ನಾವು ಕೃತಕವಾಗಿ ದೊರೆಯುವ ರಾಸಾಯನಿಕ ಸ್ಪ್ರೇಗಳನ್ನು ಬಳಸಿದರೆ ಭೂಮಿಯ ಫಲವತ್ತತೆ ಹಾಳಾಗಿ, ಬೆಳೆ ನೆಲಕಚ್ಚುವುದಂತು ಖಂಡಿತ.
ಇನ್ನು ಸಾವಯವ ಕೃಷಿಯಲ್ಲಿ ಕಳೆ ನಿಯಂತ್ರಣ ಮಾಡುವುದಂತು ತುಂಬಾ ಕಷ್ಟಕರವಾದ ಸಂಗತಿ. ಇದನ್ನ ಹೇಗೆ ನಿಯಂತ್ರಣ ಮಾಡುವುದೆಂದು ರೈತರು ಚಿಂತೆಗೆ ಒಳಗಾಗುತ್ತಾರೆ. ಕಳೆಯನ್ನು ಕೂಡ ರಾಸಾಯನಿಕ ಸ್ಪ್ರೇ ಗಳಿಲ್ಲದೆ ಸುಲಭವಾಗಿ ನಿಯಂತ್ರಣ ಮಾಡಬಹುದಾಗಿದೆ.
ರೋಗ, ಕೀಟ ಹಾಗೂ ಕಳೆ ನಿರ್ವಹಣಾ ಕ್ರಮಗಳಲ್ಲಿ, ಸೀತಾಫಲ ಎಲೆ, ಬೇವಿನ ಎಲೆ, ಬಿಲ್ವಪತ್ರದ ಎಲೆ, ಶುಂಠಿ. ಬೆಳ್ಳುಳ್ಳಿ, ಮೆಣಸಿನಕಾಯಿ ಬಳಸಿಕೊಂಡು ನಿರ್ವಹಣೆ ಮಾಡಬಹುದು.
- ನೀಮ್ ಅಸ್ತ್ರ * ಅಗ್ನಿ ಅಸ್ತ್ರ * ಬ್ರಹ್ಮಸ್ತ್ರ * ದಶಪರಣಿಯ ಕಷಾಯ ಅಸ್ತ್ರಗಳ ಮುಖಾಂತರ ಕೀಟ, ರೋಗ ಮತ್ತು ಕಳೆಯನ್ನು ಬೆಳೆಗಳಿಂದ ದೂರ ಮಾಡಬಹುದು. ಹಾಗಾದ್ರೆ ಇವುಗಳನ್ನು ತಯಾರಿಸಿಕೊಳ್ಳುವ ಬಗೆ ಹೇಗೆ? ಹೇಗೆಲ್ಲಾ ತಯಾರಿಸಿಕೊಳ್ಳಬೇಕು? ಏನೆಲ್ಲಾ ಬಳಕೆ ಮಾಡಿಕೊಳ್ಳಬೇಕು? ಸಾವಯವದಲ್ಲಿ ಕೀಟನಾಶಕ, ಕಳೆನಾಶಕವನ್ನು ಬೆಳೆಗಳಿಗೆ ಯಾವ ರೀತಿಯಾಗಿ ಬಳಸಬೇಕೆಂಬುದರ ಸಮಗ್ರ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=6hgkeUoMfiw&t=992s
ಬರಹ: ವನಿತಾ ಪರಸನ್ನವರ್
Blog