ಹೂ ಬೆಳೆಯಯಲ್ಲಿ ಕೀಟಗಳ ಹಾವಳಿ ಹೆಚ್ಚಾಗಿರುತ್ತೆ. ಸುಗಂಧಭರಿತ ಪರಿಮಳ ಸೂಸುವ ಹೂಗಳು ಕೀಟಗಳ ಬಾಧೆಗೆ ತುತ್ತಾಗುವುದು ಸಹಜ. ಹೀಗಾಗಿ ಹೂ ಬೆಳೆಯಲ್ಲಿ ಕೀಟಬಾಧೆ ತಡೆಗೆ ಕೃಷಿಕರು ರಾಸಾಯನಿಕ ಸ್ಪ್ರೇ ಗಳಿಗೆ ಮೊರೆ ಹೋಗುತ್ತಾರೆ. ಕೀಟ ಬಾಧೆಯ ತಡೆಯುವಲ್ಲಿ ವಿಫಲವಾಗಿ ರಾಸಾಯನಿಕದ ವಿಷದಿಂದ ಇಡೀ ಬೆಳೆಯನ್ನೇ ನಾಶ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ರಾಸಾಯನಿಕ ಸ್ಪ್ರೇಗಳನ್ನು ಬಳಸದೆ ಗುಲಾಬಿ ತೋಟದಲ್ಲಿ ನುಸಿ ಕೀಟ ಬಾಧೆಯನ್ನು ತಡೆಗಟ್ಟುವುದು ಹೇಗೆ?.
ಗುಲಾಬಿ ತೋಟದ ಸುತ್ತ ಬದುವಿನಲ್ಲಿ ತೊಗರಿ, ಹೆಸರು, ಅಲಸಂದಿ ಹೀಗೆ ದ್ವಿದಳ ಧಾನ್ಯಗಳನ್ನು ಬೆಳೆದುಕೊಂಡರೆ, ಮುಖ್ಯ ಬೆಳೆಯಾದ ಗುಲಾಬಿ ಗೆ ನುಸಿ ಹುಳುಗಳು ಹಾನಿ ಮಾಡದೆ, ದ್ವಿದಳ ಧಾನ್ಯಗಳ ಮೇಲೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ಗುಲಾಬಿ ಬೆಳೆ ಆರೋಗ್ಯವಾಗಿ ಬೆಳೆಯೋಕೆ ಸಾಧ್ಯವಾಗುತ್ತದೆ. ರಾಸಾಯನಿಕ ಸ್ಪ್ರೇಗಳನ್ನು ಬಳಸಿ ಭೂಮಿ ಫಲವತ್ತತೆಯನ್ನು ಹಾಳುಮಾಡಲು ಅವಕಾಶ ವಿರುವುದಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ರಾಮಮೂರ್ತಿ ಎಂಬ ಕೃಷಿಕರು, ಸಾವಯವ ಕೃಷಿ ಪದ್ಧತಿಯಲ್ಲಿ ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಬೆಳೆಯುತ್ತಿರುವ ಗುಲಾಬಿ ಬೆಳೆಯಲ್ಲಿ ಯಾವುದೇ ತರಹದ ರೋಗ ಬಾಧೆ ಕೀಟ ಬಾಧೆಯ ತೊಂದರೆ ಇಲ್ಲ. ಇವರ ಕೃಷಿ ಭೂಮಿಯಲ್ಲಿ ಎರೆಹುಳುಗಳ ಸಂಖ್ಯೆ ಹೇರಳವಾಗಿದ್ದು, ಮಣ್ಣು ಮೃದುವಾಗಿ ಫಲವತ್ತತೆಯಾಗಿದೆ. ಕಡಿಮೆ ಖರ್ಚಿನಲ್ಲಿ ಕೃಷಿಕ ಗುಲಾಬಿ ಬೆಳೆಯಲ್ಲಿ ಅಧಿಕ ಲಾಭ ಪಡೆಯುತ್ತಿದ್ದು ದಿನಕ್ಕೆ 60 ರಿಂದ 80 ಕೆ.ಜಿಯ ವರೆಗೆ ಹೂ ಇಳುವರಿ ಪಡೆಯುತ್ತಿದ್ದಾರೆ. ಇನ್ನು ಕೀಟಬಾಧೆ ತಡೆಯಲು, ಬದುವಿನಲ್ಲಿ ತೊಗರಿ ಬೆಳೆ ಬೆಳೆದು ಪ್ರಾಯೋಗಿಕವಾಗಿ ಯಶಸ್ಸನ್ನು ಕಂಡಿದ್ದಾರೆ.
ಗುಲಾಬಿ ಬೆಳೆಗೆ ಡಾ.ಸಾಯಿಲ್ ಹೇಗೆ ಬಳಕೆ ಮಾಡುತ್ತಿದ್ದಾರೆ? ಗುಲಾಬಿ ಬೆಳೆ ಯಾವ ರೀತಿಯಾಗಿ ಬೆಳೆಯುತ್ತಿದೆ ಎಂಬುದನ್ನು ವಿಡೀಯೋ ಮುಖಾಂತರ ನೋಡಿ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=4GeF8kJfLv4&t=217s
ಬರಹ: ವನಿತಾ ಪರಸನ್ನವರ
#rosefarming #flowerfarming #rosefarminginindia #rosefarmingingreenhouse #rose #farming #rosefarminginopenfield #rosefarm #roses
Blog