ಜೇನುಹುಳುವಿನ ಸಿಟ್ಟು ನಿಮಗೆ ಗೊತ್ತೇ ಇದೆ. ಜೇನು ಹುಳ ಹಾಗೆಲ್ಲ ಸುಮ್ಮನೆ ಕಚ್ಚುವುದಿಲ್ಲ. ನಾವೇನಾದರೂ ಅವಕ್ಕೆ ತೊಂದರೆ ಮಾಡಿದರೆ ಮಾತ್ರ ಅವು ಸಿಟ್ಟಿಗೇಳುತ್ತವೆ. ಜೀನಿನ ಗುಂಪಿನಲ್ಲಿ ಯಾವುದೇ ಒಂದು ಹುಳಕ್ಕೆ ತೊಂದರೆಯಾದರೂ ಸಾಕು. ಅವು ಗುಂಪಾಗಿ ಬಂದು ದಾಳಿ ಮಾಡುತ್ತವೆ. ಜೇನು ಹುಳ ಕಚ್ಚಿದರೆ ನಿರ್ಲಕ್ಷ್ಯ ಮಾಡುವಂತಿಲ್ಲ, ಬಹಳ ಹುಳು ಕಚ್ಚಿದಾಗ ವೈದ್ಯರ ಬಳಿ ಹೋಗಲೇ ಬೇಕು, ಜೇನು ಕಚ್ಚಿದಾಗ ಅದರ ಮುಳ್ಳು ಕಚ್ಚಿದ ಜಾಗದಲ್ಲಿ ಇರುತ್ತದೆ. ಅದನ್ನು ತಕ್ಷಣ ತೆಗೆಯಬೇಕು. ಆ ಮುಳ್ಳನ್ನು ತೆಗೆಯದಿದ್ದರೆ ನಂಜು ಹೆಚ್ಚುತ್ತದೆ. ಕಚ್ಚಿದ ಜಾಗ ಬಹಳ ಊದಿಕೊಳ್ಳುತ್ತದೆ.
ಅರಿಶಿಣ, ನೀರು, ಉಪ್ಪು:
ಜೇನು ಹುಳ ಕಚ್ಚಿದ ಜಾಗಕ್ಕೆ ಅರಿಶಿಣ, ಉಪ್ಪು, ನೀರು ಈ ಮೂರನ್ನು ಬೆರೆಸಿಕೊಂಡು ಹಚ್ಚಿಕೊಳ್ಳಬೇಕು. ಉರಿ, ಊದುವಿಕೆ, ನಂಜು, ತುರಿಕೆ ಕಡಿಮೆ ಆಗುತ್ತದೆ.
ಹಾಲು:
ಜೇನು ಹುಳ ಕಚ್ಚಿದ ತಕ್ಷಣ ತಣ್ಣಗಿನ ಹಾಲನ್ನು ಕುಡಿಯಬೇಕು. ಜೇನು ಕಚ್ಚಿದ ಉರಿಗೆ ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ. ಹಾಲು ಕುಡಿದರೆ ಹೊಟ್ಟೆ ಉರಿ ಕಡಿಮೆ ಆಗುತ್ತದೆ.
ಅರಿಶಿನ, ಬೆಲ್ಲ:
ಜೇನು ಹುಳ ಕಚ್ಚಿದ ತಕ್ಷಣ ಅರಿಶಿನ ಮತ್ತು ಬೆಲ್ಲವನ್ನು ಸೇರಿಸಿಕೊಂಡು 2 ಚಮಚ ತಿನ್ನಬೇಕು.
ಜೇನು ತುಪ್ಪ:
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ, ಜೇನು ಹುಳ ಕಚ್ಚಿದ ಜಾಗಕ್ಕೆ ಜೇನು ತುಪ್ಪವನ್ನು ಹಚ್ಚ ಬೇಕು. ಜೇನು ತುಪ್ಪ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ತುರಿಕೆಯಾಗುವುದಿಲ್ಲ.
ಮಂಜುಗಡ್ಡೆ:
ಜೇನು ಹುಳ ಕಚ್ಚಿದ ಜಾಗವನ್ನು ಸ್ವಚ್ಛವಾಗಿ ತೊಳೆದುಕೊಂಡು ಆ ಭಾಗಕ್ಕೆ ಮಂಜುಗಡ್ಡೆಯನ್ನು ಇಟ್ಟುಕೊಳ್ಳಬೇಕು. ಈ ರೀತಿ ಮಾಡಿದರೆ ವಿಷ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಬದನೆಕಾಯಿ:
ಜೇನು ಹುಳ ಕಚ್ಚಿದ 1 ದಿನ ಬದನೆಕಾಯಿಯನ್ನು ಸೇವಿಸಬಾರದು. ಬದನೆ ಕಾಯಿ ಸೇವಿಸಿದರೆ ಜೇನು ಕಚ್ಚಿದ ಜಾಗ ನಂಜು ಆಗುವ ಸಾಧ್ಯತೆ ಇರುತ್ತದೆ.
ಜೇನುನೊಣಗಳು ಶ್ರಮಜೀವಿಗಳು. ಇದೇ ಶ್ರಮ ಈ ಜೀವಗಳಿಗೆ ದೊಡ್ಡ ಮಟ್ಟದ ಸಿಹಿ ತರುತ್ತಿದೆ. ರಾಜ್ಯದಲ್ಲಿ ಜೇನುನೊಣಕ್ಕೊಂದು ದೊಡ್ಡ ಕಿರೀಟ ತೊಡಿಸಲು ರಾಜ್ಯ ಜೀವವೈವಿಧ್ಯ ಮಂಡಳಿ ಪಣತೊಟ್ಟಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜೇನುನೊಣಗಳಿಗೆ “ಕರ್ನಾಟಕ ರಾಜ್ಯದ ಕೀಟ’ದ ಸ್ಥಾನ ಸಿಗಲಿದೆ. ಈ ಪ್ರಯತ್ನ ಸಫಲವಾದರೆ “ರಾಜ್ಯ ಕೀಟ ಪಡೆದ ಮೊದಲ ರಾಜ್ಯ’ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಅದಕ್ಕಿಂತ ದೊಡ್ಡ ಸಿಹಿ ಮತ್ತೂಂದಿಲ್ಲ. ಆದರೆ, ಬರೀ ಜೇನಿಗೆ ಪಟ್ಟ ಕೊಟ್ಟು ನಾವು ಸುಮ್ಮನಾಗುವಂತಿಲ್ಲ. ಜೇನುನೊಣಗಳ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕಾಗಿದೆ. ಹಾಗಾಗಿ ಆದಷ್ಟು ಸಾವಯವ ಕೃಷಿಗೆ ಒತ್ತು ನೀಡಬೇಕಾಗಿದೆ.
ಬರಹ: ವನಿತಾ ಪರಸನ್ನವರ್
https://youtu.be/SFLMzU-7lKw
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
#microbitv #microbiagrotech #agriculturalnewschannel #agrinews #Drsoil #doctorsoil #drsoilnearme