Blog

ಬೆಟ್ಟದ ನೆಲ್ಲಿ ಎಂದ ತಕ್ಷಣ, ಬಾಯಲ್ಲಿ ನೀರೂರಲು ಶುರುವಾಗುತ್ತೆ. ನಾವು ಎರಡು ವಿಧವಾದ ನೆಲ್ಲಿಯನ್ನು ನೋಡುತ್ತೇವೆ. ಒಂದು ನಾಡಿನ ನೆಲ್ಲಿಕಾಯಿ,ತ್ತೊಂದು ಹೆಚ್ಚಾಗಿ ಗುಡ್ಡ ಗಾಡುಗಳಲ್ಲಿ ಬೆಳೆದು, ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿ. ಚಿಕ್ಕವಯಸ್ಸಿನಲ್ಲಿ ನೆಲ್ಲಿಕಾಯಿಯ ರುಚಿಯನ್ನು ಉಪ್ಪು, ಖಾರದೊಂದಿಗೆ ಸ್ನೇಹಿತರ ಜತೆ ಚಪ್ಪರಿಸಿ ತಿಂದಿರುವ ನೆನಪುಗಳು ನಮಗುಂಟು. ಮನೆಯ ಹಿತ್ತಲ್ಲಿನಲ್ಲಿ, ಹೊಲಗಳಲ್ಲಿ ಬೆಳೆದಾಗ, ಅವುಗಳನ್ನು ಕಿತ್ತು ತಿನ್ನುವುದೇ ಖುಷಿ. ಆದರೆ ಈಗಿನ ದಿನಮಾನಲ್ಲಿ, ತಂತ್ರಜ್ಞಾನ ಬದಲಾದಂತೆ ಮರ ಗಿಡಗಳನ್ನು ನೋಡುವುದೂ ಸಹಿತ ಕಡಿಮೆಯಾಗುತ್ತಿರುವುದು ದುಃಖದ ಸಂಗತಿ. ಹಾಗಾದ್ರೆ ಬೆಟ್ಟದ ನೆಲ್ಲಿಯನ್ನು ಕೃಷಿಯಲ್ಲಿ ಬಳಸಿಕೊಂಡಾಗ, ರೈತರಿಗೆ ಸಿಗುವ ಲಾಭಗಳೆಷ್ಟು ಗೊತ್ತಾ?

 

ಬೆಟ್ಟದ ನೆಲ್ಲಿ ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದರೆ, ಬಾಯಿಗೆ ಒಗರು ಒಗರಾಗಿ ರುಚಿ ಉಣಿಸುವ ಬೆಟ್ಟದ ನೆಲ್ಲಿಕಾಯಿ ದೇಹದ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೆ.

  • ತಲೆ ಹೇನು ಮತ್ತು ಹೊಟ್ಟು ಸಮಸ್ಯೆ ನಿವಾರಣೆ
  • ಅಸ್ತಮಾ ನಿಯಂತ್ರಣ
  • ಚರ್ಮದ ಕಾಂತಿ ಹೆಚ್ಚಳ
  • ಸಕ್ಕರೆ ಖಾಯಿಲೆ ತಡೆಯುವಿಕೆ
  • ಕ್ಯಾನ್ಸರ್ ಸಮಸ್ಯೆ ತಡೆಯುವಿಕೆ
  • ಲಿವರ್, ಬಾಯಿ ನೋವು ಸಮಸ್ಯೆ ನಿವಾರಣೆ

ನ್ನೂ ಹಲವಾರು ಸಮಸ್ಯೆಗಳಿಗೆ ಬೆಟ್ಟದ ನೆಲ್ಲಿ ರಾಮಬಾಣವಾಗಿದೆ. ಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೆ.ಜಿಗೆ 100 ರೂ. ಬೆಲೆಯಲ್ಲಿ ನಾವು ಇದನ್ನು ಪಡೆಯಬಹುದು. ಹಾಗಾಗಿ ಈ ಬೆಳೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡಾಗ, ರೈತರು ಇದರಿಂದ ಹೆಚ್ಚಿನ ಆದಾಯ ಪಡೆಯುವುದರಲ್ಲಿ ಅನುಮಾನವೇ ಇಲ್ಲ.

 

ಕೃಷಿಕರು ಮುಖ್ಯ ಬೆಳೆಯ ಜತೆಗೆ ಹೊಲದ ಬದುವಿನಲ್ಲಿ ಅಥವಾ ಬೆಳೆಗಳ ಜತೆ ಜಿಗ್ ಜಾಗ್ ರೂಪದಲ್ಲಿ ಬೆಳೆಸಿಕೊಂಡರೆ, ವರ್ಷಗಳು ಕಳೆದಂತೆ ಬಂಡವಾಳವಿಲ್ಲದೆ ಲಾಭವನ್ನು ಪಡೆಯಬಹುದು. ವೈಜ್ಞಾನಿಕ ರೀತಿಯಲ್ಲಿ ಬೆಟ್ಟದ ನೆಲ್ಲಿಕಾಯಿ ಬೆಳೆದರೆ ಲಕ್ಷ ಲಕ್ಷ ಲಾಭ ಖಂಡಿತ. ಹಾಗಾದ್ರೆ ಇದನ್ನು ಕೃಷಿಯಲ್ಲಿ ಬೆಳೆಯುವ ಕ್ರಮ ಹೇಗೆ? ಮತ್ತು ಮಾರುಕಟ್ಟೆಯ ಮಾಹಿತಿ ಬಗ್ಗೆ ತಿಳಿಯಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಪೂರ್ತಿಯಾಗಿ ವಿಡೀಯೋ ನೋಡಿ.

https://www.youtube.com/watch?v=X5fSrY0G3NQ

 

 

ವರದಿ: ವನಿತಾ ಪರಸನ್ನವರ್

 

 ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing