ಸಕ್ಕರೆ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಎಲ್ಲಿ ನೋಡಿದ್ರೂ ಪಾಕದಿಂದ ಮಾಡಿದ ತಿನಿಸುಗಳು, ಪಾನೀಯಗಳು. ಬಿಸ್ಕಟ್, ಫ್ರೂಟ್ ಜ್ಯೂಸ್, ಹೀಗೆ ಹೋದ್ರೆ ದೊಡ್ಡ ಪಟ್ಟಿ ಆಗಿ ಬಿಡುತ್ತೆ. ಎಲ್ಲರಿಗೂ ಗೊತ್ತಿರೋ ವಿಷಯ ಅಂದ್ರೆ, ಸಕ್ಕರೆ ತಯಾರಾಗೋದು ಕಬ್ಬಿನಿಂದ. ಇದೊಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಬ್ಬಿಗೆ ಎಂದೂ ಕಡಿಮೆಯಾಗದಂತಹ ಡಿಮ್ಯಾಂಡ್ ಇದೆ. ಕಬ್ಬು ಬೆಳೆದರೆ ಮಾರ್ಕೆಟ್ ಮಾಡುವುದು ಕಷ್ಟದ ವಿಷಯವಲ್ಲ. ಹೆಚ್ಚು ಕಬ್ಬು ಹೆಚ್ಚು ಲಾಭ. ಆದರೆ ಇಲ್ಲಿ ಪ್ರಶ್ನೆ ಇರುವುದು ಕಬ್ಬಿನ ಇಳುವರಿ ಹೆಚ್ಚಿಸಲು ಏನು ಮಾಡ್ಬೇಕು ಅಂಥ. ಏನು ಮಾಡಿದರೆ, ಯಾವ ತಪ್ಪುಗಳನ್ನು ಸರಿ ಮಾಡಿಕೊಂಡರೆ ಇಳುವರಿ ಹೆಚ್ಚಿಸಿಕೊಳ್ಳಬಹುದು.
ಬೆಳೆಗೆ ಬೇಕು ಮೂಲಭೂತ ಸೌಲಭ್ಯಗಳು
ಬೆಳೆಯಾಗಲಿ, ಮರಗಳಾಗಲಿ, ಮನುಷ್ಯರಾಗಲಿ ಎಲ್ಲದಕ್ಕೂ ಮೂಲಭೂತ ಸೌಕರ್ಯಗಳು ಸಿಗದೆ ಹೋದರೆ, ಬೆಳವಣಿಗೆ ಉತ್ತಮವಾಗಿರುವುದಿಲ್ಲ. ಅದೇ ರೀತಿ ಕಬ್ಬು ಉತ್ಕೃಷ್ಟವಾಗಿ ಬೆಳೆಯಲು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಉತ್ತಮ. ಅದರಲ್ಲಿ ಪ್ರಮುಖ 4 ಅಂಶಗಳೆಂದರೆ:
- ಗಾಳಿ
- ಬೆಳಕು
- ನೀರು
- ಆಹಾರ
ಪ್ರತಿ ಗಿಡ, ಮರ, ಪ್ರತಿ ಜೀವಿಗಳಿಗೂ ಮೇಲಿನ ಅಂಶಗಳು ಮುಖ್ಯ. ಸಾಮಾನ್ಯವಾಗಿ ಕಬ್ಬಿನಲ್ಲಿ ರೈತರು ಮಾಡುವ ತಪ್ಪುಗಳೆಂದರೆ ಅಂತರ ಕಡಿಮೆ ಕೊಡುವುದು, ಹೆಚ್ಚಾಗಿ ನೀರು ಕೊಡುವುದು. ಇದರಿಂದ ಉಸಿರುಕಟ್ಟಿದಂತಾಗಿ ಕಬ್ಬಿನ ಬೆಳವಣಿಗೆ ಕುಂಠಿತವಾಗುತ್ತದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ.
ಹಾಗಾದರೆ ಈ 4 ಅಂಶಗಳ ಮಹತ್ವ ಏನು? ಇದರಿಂದ ಕಬ್ಬಿನ ಇಳುವರಿ ಹೇಗೆ ಹೆಚ್ಚಾಗುತ್ತದೆ? ಇವೆಲ್ಲವನ್ನು ತಿಳಿಯಲು, ನಾಡಿನ ಖ್ಯಾತ ಸಾವಯವ ಕೃಷಿತಜ್ಞರಾದ ಡಾ.ಕೆ. ಆರ್. ಹುಲ್ಲುನಾಚೆಗೌಡರ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=VF8DBtbSgBQ
ಬರಹ: ರವಿಕುಮಾರ
#kannadablog #drsoil #microbiagrotech #agricultureblogs #agricultureinkannada #integratedfarming #sugarcane #sugarcanefarming #10feetsugarcanefarming #crops
Blog