Blog

       ಅಲೋವೆರಾ(ಲೋಳೆರಸ) ಒಂದು ಕ್ಯಾಕ್ಟಸ್(ಕಳ್ಳಿ) ತರಹದ ಸಸ್ಯ. ಅಲೋವೆರಾ ಒಂದು ಚಮತ್ಕಾರಿ ಸಸ್ಯ ಎಂದರೆ ತಪ್ಪಾಗಲಾರದು. ಅನೇಕ ಔಷಧೀಯ ಗುಣಗಳಿರುವ ಇದನ್ನು ಪಾನೀಯಗಳು, ಚರ್ಮದ ಲೋಷನ್, ಸೌಂದರ್ಯವರ್ಧಕಗಳು, ಮುಲಾಮುಗಳು ಅಥವಾ ಸಣ್ಣ ಸುಟ್ಟಗಾಯಗಳಿಗೆ ಜೆಲ್ ರೂಪದಲ್ಲಿ ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ, ಇದನ್ನು ಬೆಳೆಯಾಗಿ ಬೆಳೆಯಬಹುದು ಮತ್ತು ಆದಾಯ ಗಳಿಸಬಹುದು ಎಂಬುದು. ಇದೊಂದು ನಿರ್ಲಕ್ಷ್ಯಕ್ಕೊಳಗಾದ ಬೆಳೆ. ಕಡಿಮೆ ನಿರ್ವಹಣೆಯಲ್ಲಿ ಬೆಳೆಯಬಹುದಾದರೂ ತಿಳುವಳಿಕೆಯ ಆಭಾವದಿಂದ ನಿರ್ಲಕ್ಷ್ಯಕ್ಕೊಳಗಾಗಿದೆ.

 

ಅಲೋವೆರಾದ ನಾನಾ ಉಪಯೋಗಗಳು:

ಅಲೋವೆರಾ ಕೇವಲ ಸೌಂದರ್ಯವರ್ಧಕವಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ತೂಕ ನಷ್ಟಕ್ಕೆ ಸಹಕಾರಿ. ಹೀಗೆ ಅನೇಕ ಉಪಯೋಗಗಳಿರುವ ಅಲೋವೆರಾಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇದರ ಉಪಯೋಗ ರೈತರು ಪಡೆದುಕೊಳ್ಳಬಹುದು.

 

ಖರ್ಚು, ನಿರ್ವಹಣೆ ಎರಡೂ ಕಡಿಮೆ

      ಇದನ್ನು ಮನೆಯ ಮುಂದೆ ಅಲಂಕಾರಕ್ಕಾಗಿ ಬೆಳೆಯುವುದಲ್ಲದೇ, ಕೃಷಿಯಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಬಹುದು. ಬೇರೆ ಬೆಳೆಗಳ ತುಲನೆಯಲ್ಲಿ ಅಲೋವೆರಾ ಬೆಳೆಯುವುದು ಸುಲಭ ಮತ್ತು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ನಿರ್ವಹಣೆ ಕಡಿಮೆ ಇರುವುದರಿಂದ ಖರ್ಚು ಕಡಿಮೆ ಮಾಡಿ, ಆದಾಯ ಹೆಚ್ಚಿಸಿಕೊಳ್ಳಬಹುದು. ಅಲೋವೆರಾವನ್ನು ಯಾವುದೇ ಕಾಲದಲ್ಲಿ ಬೆಳೆಯಬಹುದು. ನೀರಿನ ವ್ಯವಸ್ಥೆ ಇಲ್ಲದಿದ್ದರೆ ಮಳೆಗಾಲದಲ್ಲಿ ಬೆಳೆಯಬಹುದು ಹಾಗೂ ಗಿಡಗಳ ಮಧ್ಯದಲ್ಲಿ ಅಂತರ ಬೆಳೆಗಳನ್ನು ಬೆಳೆದು ಆದಾಯಗಳಿಸಬಹುದು. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುವುದರಿಂದ ಮಣ್ಣಿನಲ್ಲಿರುವ ಫಲವತ್ತತೆ ಮತ್ತು ಪೋಷಕಾಂಶಗಳನ್ನೇ ಬಳಸಿಕೊಂಡು, ಹೊರಗಡೆಯಿಂದ ಯಾವುದೇ ರೀತಿಯ ಆಹಾರ ಕೊಡದೇ ಬೆಳೆಯಬಹುದು. ಹಾಗಾದರೆ ಇದನ್ನು ಬೆಳೆಯುವುದು ಹೇಗೆ? ನಿರ್ವಹಣೆ ಹೇಗೆ? ಯಾವ ಪದ್ಧತಿಯಲ್ಲಿ ಮಾಡಿದರೆ ಲಾಭ ಜಾಸ್ತಿ? ಇದೆಲ್ಲದರ ಮಾಹಿತಿಗಾಗಿ ಕೆಳಗಿನ ವಿಡೀಯೋ ನೊಡಿ.

https://www.youtube.com/watch?v=yvN-e2fAtZU

 

ಬರಹ: ರವಿಕುಮಾರ್

 

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #aloevera  #lolerasa  #aloeverafarming  #cosmetics  



Blog




Home    |   About Us    |   Contact    |   
microbi.tv | Powered by Ocat Online Advertising Service in India