ಕಬ್ಬು ಒಂದು ವಾಣಿಜ್ಯ ಬೆಳೆಯಾಗಿದೆ. ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಸಕ್ಕರೆನಾಡು ಎಂದೇ ಖ್ಯಾತಿ ಪಡೆದಿರುವ ಮಂಡ್ಯದಲ್ಲಿ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಕಳಿಸಲಾಗುವ ಈ ಕಬ್ಬಿನಲ್ಲಿ ಇಳುವರಿ ಉತ್ತಮವಾದರೆ ರೈತನಿಗೆ ಉತ್ತಮ ಆದಾಯ. ಇಲ್ಲವಾದಲ್ಲಿ ನಷ್ಟ ಅನುಭವಿಸಬೇಕಾದಂತಹ ಸ್ಥಿತಿ. ಕಬ್ಬಿನಲ್ಲಿ ಲಾಭ ಗಳಿಸಲು ಏನು ಮಾಡಬೇಕು?
ಸಾಮಾನ್ಯವಾಗಿ ಕಬ್ಬಿನಲ್ಲಿ 3ನೇ ಕುಳೆವರೆಗೆ ಬೆಳೆ ತೆಗೆಯುತ್ತಾರೆ. ನಂತರದಲ್ಲಿ ಇಳುವರಿ ಕಡಿಮೆಯಾಗುವುದರಿಂದ 3ನೇ ಕುಳೆಗೆ ಕಬ್ಬು ಬೆಳೆ ನಿಲ್ಲಿಸಲಾಗುತ್ತದೆ. ಆದರೆ ಮಂಡ್ಯ ತಾಲ್ಲೂಕಿನ ಶಂಭುನಳ್ಳಿ ಗ್ರಾಮದ ಮಹೇಶ್ ಎಂಬ ಈ ರೈತ 4ನೇ ಕುಳೆಯಲ್ಲಿ 65 ಟನ್ ಕಬ್ಬು ಬೆಳೆದಿದ್ದಾರೆ..! ಈವರೆಗೆ ರಾಸಾಯನಿಕ ಪದ್ಧತಿಯಲ್ಲಿ 3 ಅಡಿ ಅಂತರದಲ್ಲಿ ಕಬ್ಬು ಕೃಷಿ ಮಾಡುತ್ತಿದ್ದ ಮಹೇಶ್, ಡಾ.ಸಾಯಿಲ್ ದಾಸ್ತಾನುದಾರರಾದ ಜೋಗಿಗೌಡ ಅವರ ಸಲಹೆಯಂತೆ ಡಾ.ಸಾಯಿಲ್ ಶುಗರ್ ಕೇನ್ ಜೈವಿಕ ಗೊಬ್ಬರ ಬಳಸಿ 6 ಅಡಿ ಅಂತರ ಕೊಟ್ಟು ಮಾಡಿದ ಕಬ್ಬು ಬೆಳೆ ಯಶಸ್ವಿಯಾಗಿದೆ. 2 ಮತ್ತು 3ನೇ ಕುಳೆ ಬೆಳೆಯ ಇಳುವರಿಯಲ್ಲಿ ಕುಂಠಿತ ಕಂಡಿದ್ದ ಮಹೇಶ್, ಸಾವಯವ ಪದ್ಧತಿಯಲ್ಲಿ ಈಗ ಏರಿಕೆ ಕಂಡಿದ್ದಾರೆ. ಇದನ್ನು ಕಂಡು ಸ್ವತಃ ರೈತರೇ ಬೆರಗಾಗಿದ್ದಾರೆ. ಮುಂದೆಯೂ ಡಾ.ಸಾಯಿಲ್ ಬಳಸಿ ಸಾವಯವ ಪದ್ಧತಿಯಲ್ಲೇ ಕೃಷಿ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಸಾವಯದಲ್ಲಿ ಹೇಗೆ ಇವರು ಇಳುವರಿ ಹೆಚ್ಚಿಸಿಕೊಂಡರು ಎಂದು ರೈತರ ಮಾತಲ್ಲೆ ಕೇಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=RVkS31VJnVU&t=7s
ಬರಹ: ರವಿಕುಮಾರ್
#kannadablog #drsoil #microbiagrotech #agricultureblogs #agricultureinkannada #integratedfarming #sugarcane #sugar #10feetsugarcane
Blog