ಚಿಕ್ಕಮಗಳೂರು: ವಿಲ್ಟ್ ರೋಗಕ್ಕೆ ತುತ್ತಾಗಿ ನರಳುತಿದ್ದ 300 ಕಾಳು ಮೆಣಸು ಬಳ್ಳಿಗಳು ಈಗ, ಕೇವಲ 4 ತಿಂಗಳಲ್ಲಿ ಸುಧಾರಿಸಿದ್ದು, ಹಚ್ಚ ಹಸಿರಿನೊಂದಿಗೆ ಹೆಚ್ಚು ಇಳುವರಿಯನ್ನು ನೀಡುತ್ತಿವೆ.
ಕಾಳುಮೆಣಸು ಉತ್ಪಾದನೆಯಲ್ಲಿ ಪ್ರಸಿದ್ಧಿ ಹೊಂದಿರುವ ಚಿಕ್ಕಮಗಳೂರಿನ ಮೆಣಸಿನ ಮಲ್ಲೇದೇವರಹಳ್ಳಿ ಗ್ರಾಮದಲ್ಲಿ, ಕೃಷಿಕ ಮಂಜುನಾಥ್ ಅವರ ತೋಟದ ಕಾಳುಮೆಣಸು ವಿಲ್ಟ್ ರೋಗದಿಂದ ಹಳದಿಯಾಗಿ ಸಂಪೂರ್ಣ ನಾಶವಾಗಿ ಹೋಗಿತ್ತು. ಹೀಗಿರುವಾಗ ಕೃಷಿಕ ತಮ್ಮ ಕೃಷಿ ಪದ್ಧತಿಯನ್ನು ಬದಲಿಸಿಕೊಂಡು, ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸೋಕೆ ಶುರುಮಾಡಿದರು. ಇದಾದ ಮೇಲೆ 4 ತಿಂಗಳಲ್ಲಿ ವಿಲ್ಟ್ ರೋಗ ಮಾಯವಾಗಿ ಬೆಳೆ ಹಸಿರಾಗಿದೆ. ಜತೆಗೆ ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ನೀರಿನ ನಿರ್ವಹಣೆ, ತ್ಯಾಜ್ಯಗಳ ಮೌಲ್ಯವರ್ಧನೆ ಮಾಡಿಕೊಂಡಿದ್ದಾರೆ.
ವಿಲ್ಟ್ ರೋಗ ತಡೆಗೆ ಈ ಕ್ರಮಗಳನ್ನು ಅನುಸರಿಸಬೇಕು:
- ನೀರಿನ ನಿರ್ವಹಣೆ ಸರಿಯಾದ ರೀತಿಯಲ್ಲಿರಬೇಕು
- ಪಕ್ಕದ ತೋಟದಿಂದ ರೋಗಗಳು ನಮ್ಮ ತೋಟಕ್ಕೆ ಬಾರದಂತೆ ನೋಡಿಕೊಳ್ಳಬೇಕು
- ರೋಗಗ್ರಸ್ಥ ತ್ಯಾಜ್ಯಗಳನ್ನು ಬಳಸಬಾರದು
- ನಾಟಿ ಮಾಡುವಾಗ ಸಸಿಗಳ ಆಯ್ಕೆ ಬಗ್ಗೆ ನಿಗಾವಹಿಸಬೇಕು
ಸಾವಯವ ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕವಾಗಿ ಈ ಎಲ್ಲ ಕ್ರಮಗಳನ್ನು ಹೇಗೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.
https://www.youtube.com/watch?v=ntfnAQUd4IU&t=58s
ವರದಿ: ವನಿತಾ ಪರಸನ್ನವರ್
Blog