Blog

ಒಂದಷ್ಟು ವರ್ಷಗಳ ಹಿಂದೆ ಹೋದರೆ ಹಳ್ಳಿಗಳಲ್ಲಿ ಮನೆಮುಂದೆ, ಹಿತ್ತಲಲ್ಲಿ ಒಂದು ಬಾಳೆ ಗಿಡ ಇರುತ್ತಿತ್ತು. ಅದರ ಸುತ್ತಾ ಇನ್ನಷ್ಟು ಬಾಳೆ ಗಿಡಗಳು. ಅದರ ನೆರಳಲ್ಲಿ ಪಾತ್ರೆ ತೊಳೆಯೋದು, ಬಟ್ಟೆ ತೊಳೆಯೋದು ನಡೀತಿತ್ತು. ಎಷ್ಟೋ ವರ್ಷಗಳ ತನಕ ಗೊನೆಗಳು ಬಿಡುತ್ತಿದ್ದವು. ಇದೇ ಫಾರ್ಮುಲಾವನ್ನು ಕೃಷಿಯಲ್ಲಿ ಅಳವಡಿಸಿಕಂಡರೆ ಹೇಗೆ? ಇದನ್ನೇ ಗುಂಪುಬಾಳೆ ಪದ್ಧತಿ ಎನ್ನುತ್ತಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯುವ ಸರಳ ಸೂತ್ರ.

 

ಗುಣಿ ಪದ್ಧತಿಯಲ್ಲಿ ಬಾಳೆ:

       ಗುಣಿ ಬಾಳೆ ಪದ್ಧತಿ ಎಂದರೆ ಗುಂಪು ಬಾಳೆ. ಕಡಿಮೆ ಅಂತರ ಕೊಟ್ಟು ಹೆಚ್ಚು ಗಿಡ ನೆಟ್ಟು ಉಸಿರುಕಟ್ಟಿಸುವ ಬದಲು, ಹೆಚ್ಚಿನ ಅಂತರ ಕೊಟ್ಟರೆ, ಕಡಿಮೆ ಗಿಡಗಳಲ್ಲೇ ಅದೇ ಇಳುವರಿ ಪಡೆಯಬಹುದು. ಇದರಿಂದ ಅನೇಕ ಅನುಕೂಲಗಳಿವೆ. ಅಂತರ ಹೆಚ್ಚಿರುವುದರಿಂದ ಗಾಳಿ, ಬೆಳಕು, ನೀರಿನ ಸಮರ್ಪಕ ಬಳಕೆಯಾಗುತ್ತದೆ. ಸೂರ್ಯನ ಬೆಳಕು, ಶಾಖ, ಗಾಳಿ ಚೆನ್ನಾಗಿ ಸಿಗುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಉಪಯುಕ್ತವಾಗುತ್ತದೆ. ಇನ್ನೊಂದು ಲಾಭವೆಂದರೆ, ನಡುವೆ ಇರುವ ಅಂತರದಲ್ಲಿ ಅಂತಬೆಳೆಗಳನ್ನು ಬೆಳೆದುಕೊಳ್ಳಬಹುದು. ಇದರಿಂದ ವರ್ಷಕ್ಕೊಮ್ಮೆ ಆದಾಯಕ್ಕಾಗಿ ಕಾಯದೆ, ನಿರಂತರ ಆದಾಯ ಪಡೆಯಬಹುದು ಮತ್ತು ಮಣ್ಣಿನ ಫಲವತ್ತತೆ ಕಾಪಾಡಲು, ವೃದ್ಧಿಸಲು ಹಸಿರೆಲೆ ಗೊಬ್ಬರ ದೊರಕಿದಂತಾಗುತ್ತದೆ. ಹಾಗಾದರೆ ಗುಂಪುಬಾಳೆ ಮಾಡುವುದು ಹೇಗೆ? ಎಷ್ಟು ಅಂತರ ಕೊಡಬೇಕು?

 

PWD ಆಫೀಸರ್ ಪ್ರಯೋಗ

       ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮಧುಸೂದನ್ ರವರು PWD ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, 2 ರ್ಷ ದಿಂದ ಕೃಷಿ ಮಾಡುತ್ತಿದ್ದಾರೆ. ಯುಟ್ಯೂಬ್ ನಲ್ಲಿ ಹುಡುಕಿ ಮೈಕ್ರೋಬಿ ಸಂಸ್ಥೆಯ ಡಾ. ಕೆ.ಆರ್. ಹುಲ್ಲುನಾಚೇಗೌಡರನ್ನು ಸಂಪರ್ಕಿಸಿ, ಮಾರ್ಗದರ್ಶನ ಪಡೆದು ಗುಂಪುಬಾಳೆಯಲ್ಲಿ ತೊಡಗಿದ್ದಾರೆ. ಪ್ರಸ್ತುತವಾಗಿ ಎರಡೂವರೆ ಎಕರೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡಿದ್ದಾರೆ. ತಜ್ಞರ ಸಲಹೆಯಂತೆ 15 15 ಅಡಿಗೆ ಒಂದು ಬಾಳೆ ಗಿಡ ನಾಟಿ ಮಾಡಿದ್ದಾರೆ. ಒಂದು ಗಿಡದಿಂದ 6-7 ಮರಿಗಳು ಬಂದಿವೆ ಮತ್ತು ಗೊನೆ ಬಿಡುವುದು ಪ್ರಾರಂಭವಾಗಿದೆ. ಈ ರೀತಿಯಾಗಿ ತಮ್ಮ ಎರಡೂವರೆ ಎಕರೆಯಲ್ಲಿ 350 ಗುಣಿ ಮಾಡಿದ್ದಾರೆ. ಪ್ರತಿ 20-30 ದಿನಕ್ಕೊಮ್ಮೆ ಡಾ.ಸಾಯಿಲ್ ಬಯೋ ಫರ್ಟಿಲೈಸರ್ ಬಳಸುತ್ತಿದ್ದಾರೆ. ಅವರೇ ಹೇಳುವ ಹಾಗೆ ಒಂದು ಗೊನೆ 12 ಕೆ.ಜಿಯವರೆಗೆ ತೂಕವಿದೆ. ನಡುವಿನ ಅಂತರದಲ್ಲಿ ಶೇಂಗಾ ಬಿತ್ತಿ ಫಸಲು ತೆಗೆದುಕೊಂಡಿದ್ದಾರೆ. ಶೇಂಗಾ ಬೆಳೆಯಲು ಬೀಜೋಪಚಾರ ಬಿಟ್ಟರೆ ಯಾವ ಗೊಬ್ಬರವನ್ನೂ ಬಳಸದೆರ್ಚೇ ಇಲ್ಲದೆ, ಲಾಭ ಮಾಡಿದ್ದಾರೆ. ಶೇಂಗಾ ದ್ವಿದಳ ಧಾನ್ಯವಾದ್ದರಿಂದ ಸಾರಜನಕ ಸ್ಥಿರೀಕರಣದಲ್ಲೂ ಸಹಾಯ ಮಾಡಿದೆ.

       ಹೀಗೆ ಅಂತರ ಹೆಚ್ಚಿಸಿಕೊಂಡು ಗುಂಪುಬಾಳೆ ಮಾಡುವುದರಿಂದ ಅಂತಬೆಳೆ ಬೆಳೆದು ಲಾಭ ಮಾಡಿಕೊಳ್ಳಬಹುದು ಮತ್ತು ಹೆಚ್ಚು ತೂಕದ ಗೊನೆಗಳನ್ನು ಬೆಳೆಯಬಹುದು. ಸಾವಯವ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಕಡಿಮೆ ಖರ್ಚು ಮಾಡಿ ಅಧಿಕ ಇಳುವರಿ ಪಡೆಯಬಹುದು. ಇವೆಲ್ಲವುಗಳ ಜೊತೆ ಸಾವಯವ ಪದ್ಧತಿಯಿಂದ ಮಣ್ಣಿನ ಫಲವತ್ತತೆಯನ್ನು ವೃದ್ಧಿಸಿಕೊಳ್ಳಬಹುದು.

 

ಬರಹ: ರವಿಕುಮಾರ್

ಇನ್ನೂ ಹೆಚ್ಚಿನ ಮಾಹಿತಿಗಾಗಿ, ಗುಂಪುಬಾಳೆ ಜೊತೆ ಸಮಗ್ರ ಕೃಷಿ ಪದ್ಧತಿ ಹೇಗೆ ಮಾಡಿದ್ದಾರೆಂದು ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=VTBi0t2HSqM&t=13s

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #gumpubale  #bananafarming  #bananafarminginkannada  #gunipaddhati  



Blog




Home    |   About Us    |   Contact    |   
microbi.tv | Powered by Ocat Online Advertising Service in India