ರಾಯಚೂರು: ನಮ್ಮ ರೈತರು ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಬೇಕೆಂಬ ಆಸೆಯಿಂದ, ಸಾಲಸೋಲ ಮಾಡಿ ಹೆಚ್ಚು ಹೆಚ್ಚು ಖರ್ಚಿನಿಂದ ರಾಸಾಯನಿಕ ಗೊಬ್ಬರವನ್ನು ತಂದು ಹಾಕುತ್ತಾರೆ. ಆದರೆ, ಕೊನೆಗೆ ರೈತರಿಗೆ ಸಿಗುವಂತಹ ಲಾಭ ಮಾತ್ರ ರೋಗಗಳು, ಕೀಟಗಳ ಬಾಧೆ .ಇದರಿಂದ ಬೆಳೆ ನಾಶವಾಗಿ ರೈತನನ್ನು ಕಷ್ಟಕ್ಕೆ ತಳ್ಳಿಬಿಡುತ್ತೆ. ಅದೇ ರೀತಿ ಇಲ್ಲೊಬ್ಬ ಕೃಷಿಕನ ತೋಟದಲ್ಲಿ 25 ವರ್ಷದಿಂದ ಯಾವ ಬೆಳೆ ಬೆಳೆದರೂ, ಉತ್ತಮ ಇಳುವರಿ ಸಿಗುತ್ತಿರಲಿಲ್ಲವಂತೆ. ಆದರೀಗ..!
ರಾಯಚೂರು ಜಿಲ್ಲೆ, ದೇವದುರ್ಗ ತಾಲೂಕು, ಕುರಕಲ ಗ್ರಾಮದ ಕೃಷಿಕ ಧರ್ಮಣ್ಣ ಅವರ 3 ಎಕರೆ ತೋಟದಲ್ಲಿ, ಕಳೆದ 25 ವರ್ಷದಿಂದ ಯಾವುದೇ ಬೆಳೆ ಬೆಳೆದರೂ, ಏಳಿಗೆ ಇರುತ್ತಿರಲಿಲ್ಲ. ಕಾರಣ ರೈತ ಸತತವಾಗಿ ರಾಸಾಯನಿಕ ಗೊಬ್ಬರವನ್ನು ಬಳಸಿ ಭೂಮಿಯನ್ನು ಗಟ್ಟಿಯಾಗಿಸಿಕೊಂಡಿದ್ದರು. ಹೀಗಾಗಿ ಬೆಳೆ ರೈತನಿಗೆ ಲಾಭ ನೀಡುವಲ್ಲಿ ವಿಫಲವಾಗುತ್ತಿತ್ತು. ಆದರೆ ಒಂದೂವರೆ ತಿಂಗಳಿಂದ ಮೆಣಸಿನ ಕಾಯಿ ಬೆಳೆ ಮಾತ್ರ ಭರ್ಜರಿ ಇಳುವರಿ ನೀಡುತ್ತಿದೆ.
ಕೃಷಿಕ ಧರ್ಮಣ್ಣ ಈ ಬಾರಿ ಮೆಣಸಿನಕಾಯಿ ಹಾಗೂ ಶೇಂಗಾ ಬೆಳೆಯನ್ನು ಬೆಳೆಯುತ್ತಿದ್ದಾರೆ. 25 ವರ್ಷದಿಂದ ಬಾರದ ಬೆಳೆ ಇಳುವರಿ ಈ ಬಾರಿ ಲಭಿಸುತ್ತಿದೆ. ರಾಸಾಯನಿಕ ಕೃಷಿ ಬಿಟ್ಟು ಸಾವಯವ ಕೃಷಿಯನ್ನು ಪಾಲಿಸುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ 3 ಎಕರೆಗೆ ಎರಡೂವರೆ ಲಕ್ಷ ಖರ್ಚು ಮಾಡುತ್ತಿದ್ದ ರೈತ ಈಗ, ಕೇವಲ 20 ಸಾವಿರ ಖರ್ಚು ಮಾಡುತ್ತಿದ್ದಾರೆ. ಜತೆಗೆ ಮೆಣಸಿನ ಕಾಯಿ ಬೆಳೆಗೆ ಮುಟುರು ರೋಗವು ಶಾಪದಂತೆ ವಕ್ಕರಿಸಿಸುತ್ತಿತ್ತು. ಇದು ಬೆಳೆಗೆ ಆವರಿಸಿಕೊಂಡರೆ ಬೆಳೆಗೆ ಉಳಿಗಾಲವಿಲ್ಲದ ಹಾಗೆ ಆಗಿ ಬಿಡುತ್ತೆ. ಆದರೆ ಈ ಬಾರಿ ರೋಗದ ಕಾಟವು ಕೂಡ ನಿಂತಿದೆ.
ಕಡಿಮೆ ಖರ್ಚಿನಲ್ಲಿ ರೈತ ಯಾವ ರೀತಿ ಕೃಷಿಯನ್ನು ಮಾಡುತ್ತಿದ್ದಾರೆ. ಇನ್ನು 25 ವರ್ಷದಿಂದ ಬಾರದ ಬೆಳೆ ಒಂದೂವರೆ ತಿಂಗಳಲ್ಲಿ ಹೇಗೆ ಬಂತು ಎಂಬುದರ ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಸಮಗ್ರ ಸಂಗತಿ ದೊರೆಯುತ್ತದೆ.
https://www.youtube.com/watch?v=10-izOUZPck
ವರದಿ: ವನಿತಾ ಪರಸನ್ನವರ್
Blog