ಕಿವಿ ಒಂದು ವಿದೇಶಿ ಹಣ್ಣು. ಪೌಷ್ಟಿಕ ಹಣ್ಣು. ನ್ಯೂಜಿಲ್ಯಾಂಡ್ ದೇಶದ ಹಣ್ಣಾದ್ದರಿಂದ ಇದನ್ನು ಕಿವಿ ಹಣ್ಣೆಂದು ಕರೆಯುತ್ತಾರೆ. ಕೊರೋನ ಕಾರ್ಮೋಡ ನಂತರ ಜನರು ಆರೋಗ್ಯದ ಬಗ್ಗೆ ಜಾಗೃತರಾಗಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೊಸ ಉತ್ಪನ್ನಗಳು ತಲೆ ಎತ್ತಿವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಆಯ್ಕೆಗಳಲ್ಲಿ ಕಿವಿ ಹಣ್ಣು ಮುಂಚೂಣಿ ಎಂದರೆ ತಪ್ಪಾಗಲಾರದು. ರುಚಿ, ಬೇಡಿಕೆ ಮತ್ತು ಆರೊಗ್ಯದ ಪ್ರಯೋಜನಗಳಿಂದ ಮಾರುಕಟ್ಟೆಯಲ್ಲಿ ಇದರ ಬೆಲೆ ತುಸು ಹೆಚ್ಚೇ ಎನ್ನಬಹುದು.
ದುಬಾರಿ ಹಣ್ಣು ಕಿವಿ
ಹೌದು, ಕಿವಿ ಹಣ್ಣು ದುಬಾರಿ. ಆದರೆ ಏಕೆ? ಇದೊಂದು ವಿದೇಶಿ ಹಣ್ಣಾದ್ದರಿಂದ ಜ್ಞಾನದ ಕೊರತೆ ಮತ್ತು ವಾತಾವರಣದ ವ್ಯತ್ಯಾಸದಿಂದ ನಮ್ಮ ದೇಶದಲ್ಲಿ ಹೆಚ್ಚು ಪ್ರದೇಶಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಕಿವಿ ಹಣ್ಣು ಬೆಳೆಯುವವರು ಕಡಿಮೆ. ಇದರ ಪರಿಣಾಮವಾಗಿ ಹೆಚ್ಚಾಗಿ ಅಮದು ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಹಣ್ಣು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ತೆರಿಗೆ, ಸಾಗಾಣಿಕೆ ಇತ್ಯಾದಿಗಳಿಂದ ಇದರ ಬೆಲೆಯಲ್ಲಿ ವ್ಯತ್ಯಾಸ ಬೀಳುತ್ತದೆ. ಕಿವಿ ಹಣ್ಣಿನ ಉತ್ಪಾದನೆಯಲ್ಲಿ ಚೀನಾ ಮುಂಚೂಣಿಯಲ್ಲಿದ್ದರೆ, ನ್ಯೂಜಿಲ್ಯಾಂಡ್ ಮತ್ತು ಇಟಲಿ ನಂತರದ ಸ್ಥಾನದಲ್ಲಿವೆ. ಭಾರತದಲ್ಲಿ ಕೇವಲ 10650 ಟನ್ ನಷ್ಡು ಮಾತ್ರ ಕಿವಿಹಣ್ಣು ಬೆಳೆಯಲಾಗುತ್ತಿದೆ. ಮುಖ್ಯವಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಕೇರಳ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ (ಡಾರ್ಜಿಲಿಂಗ್) ಶೀತ ಪ್ರದೇಶಗಳ ಹವಾಮಾನ ಪರಿಸ್ಥಿತಿಗಳು ಕಿವಿ ಹಣ್ಣುಗಳನ್ನು ಬೆಳೆಯಲು ಸೂಕ್ತವಾಗಿದೆ. ಈ ರಾಜ್ಯಗಳು ಸಮಶೀತೋಷ್ಣ ಹವಾಮಾನ, ಫಲವತ್ತಾದ ಮಣ್ಣು ಮತ್ತು ಅನುಕೂಲಕರವಾದ ಮಳೆಯ ಪರಿಸ್ಥಿತಿಗಳನ್ನು ಹೊಂದಿವೆ. ಹಾಗಾಗಿ ಸಹಜವಾಗಿಯೇ ಇದರ ಪೂರೈಕೆ ಕಡಿಮೆ ಇದೆ. ಇವೆಲ್ಲ ಕಾರಣಗಳಿಂದ ಇದೊಂದು ದುಬಾರಿ ಹಣ್ಣಾಗಿದೆ.
ಪೌಷ್ಟಿಕಾಂಶಗಳ ವಿವರ
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್(USDA) ಪ್ರಕಾರ ಒಂದು ಕಿವಿಹಣ್ಣಿನ ಪೌಷ್ಟಿಕಾಂಶದ ವಿವರ ಇಲ್ಲಿದೆ:
42 ಕ್ಯಾಲರಿ
215 ಮಿ.ಗ್ರಾಂ. ಪೊಟ್ಯಾಶಿಯಂ ಅಥವಾ ಶೇ. 5ಶಿಫಾರಸು ಮಾಡಿದ ದೈನಂದಿನ ಮೌಲ್ಯ (DV)
1 ಗ್ರಾಂ. ಆಹಾರದ ಫೈಬರ್, ಅಥವಾ 8% DV
8 ಗ್ರಾಂ. ಪ್ರೋಟೀನ್ ಅಥವಾ 2% DV
23 ಮಿ.ಗ್ರಾಂ. ಕ್ಯಾಲ್ಸಿಯಂ ಅಥವಾ 2% DV
64ಮಿ.ಗ್ರಾಂ. ವಿಟಮಿನ್ ಸಿ, ಅಥವಾ 107% DV
2 ಗ್ರಾಂ. ಸಕ್ಕರೆ
1 ಮಿ.ಗ್ರಾಂ. ವಿಟಮಿನ್ ಇ ಅಥವಾ 5% DV
8 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಕೆ ಅಥವಾ 35% DV
7ಮಿ.ಗ್ರಾಂ. ಮೆಗ್ನೀಶಿಯಮ್ ಅಥವಾ 3% DV
ವಿಟಮಿನ್ ಎ 1% DV
17 ಮೈಕ್ರೋಗ್ರಾಂ ಫೋಲೇಟ್
ಅನಾರೋಗ್ಯದ ಕಿವಿ ಹಿಂಡುವ ಕಿವಿ ಹಣ್ಣು
ರಕ್ತಹೆಪ್ಪುಗಟ್ಟುವಿಕೆ ತಡೆಯುತ್ತದೆ. ಜೀರ್ಣಕ್ರಿಯೆ ಸುಧಾರಣೆಯಲ್ಲಿ ಸಹಾಯ ಮಾಡುತ್ತದೆ. ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ. ತ್ವಚೆಯ ಆರೋಗ್ಯ ಕಾಪಾಡುತ್ತದೆ. ರೊಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೃದಯದ ಆರೋಗ್ಯ ವೃದ್ಧಿಸುತ್ತದೆ.
ಬರಹ: ರವಿಕುಮಾರ್ ನಾಯಕ್
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=JVVXbU7X_PI&list=PLuN9VcGQAtK7-6zk5mGOIJw8j-d89ka_H&index=3