ವಿಜಯಪುರ: ವಾರ್ಷಿಕ ಬೆಳೆಯಾದ ಕಬ್ಬು ಬೆಳೆಯಲ್ಲಿ ಮರಿಸಂಖ್ಯೆ ಕಡಿಮೆಯಾಯ್ತು, ಗಣಿಕೆಗಳು ಹೆಚ್ಚಾಗಲಿಲ್ಲ. ಗೊಣ್ಣೆ ಹುಳುಗಳ ಕಾಟ ಹೆಚ್ಚಾಯ್ತು. ಕಬ್ಬು ಬೆಳೆದಂತೆಲ್ಲ ಮರಿಸಂಖ್ಯೆಗಳು ನಶಿಸಿಹೋಗುತ್ತವೆ ಎಂಬುದು ಬಹುತೇಕ ಕಬ್ಬು ಬೆಳೆಗಾರರ ಸಮಸ್ಯೆಗಳು. ಇವುಗಳಿಂದ ಕೃಷಿಕನಿಗೆ ಸಿಗಬೇಕಾದ ಇಳುವರಿ ಕೈಗೆಟುಕುವುದಿಲ್ಲ
ಆದರೆ ಈ ಕೃಷಿಕನ ತೋಟದಲ್ಲಿ ಈ ತರಹದ ಯಾವುದೆ ಸಮಸ್ಯೆ ಇಲ್ಲ. ಹೌದು ವಿಜಯಪುರ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕು, ಮಹಲಿಂಗಪುರ ಗ್ರಾಮದ ಕೃಷಿಕ ಮಹಲಿಂಗಪ್ಪ ಅವರು, ತಮ್ಮ 16 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯಿಂದ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದಾರೆ. ಕಬ್ಬು ಬೆಳೆ 30 ಗಣಿಕೆಗಳನ್ನು ಹೊತ್ತು,15 ಮರಿ ಸಂಖ್ಯೆಯಿಂದ ಬೀಗುತ್ತಿದೆ. ಜತೆಗೆ ಯಾವುದೇ ತರಹದ ಕೀಟ, ರೋಗ ಬಾಧೆಯೂ ಇವರ ಬೆಳೆಯತ್ತ ಸುಳಿದಿಲ್ಲ. ಇಳುವರಿಯೂ ಕೂಡ ಭರ್ಜರಿಯಾಗಿದೆ.
ಮಹಲಿಂಗಪ್ಪ ಅವರ ಕಬ್ಬು ಬೆಳೆಯಲ್ಲಿ ಈ ರೀತಿ ಫಲಿತಾಂಶ ಬರಲು ಕಾರಣಗಳು ಹೀಗಿವೆ
ಕಬ್ಬು ಬೆಳೆಯಲ್ಲಿ ಬೇಕು ಸೂಕ್ತ ಅಂತರ:
ಕೃಷಿಕ ಕಬ್ಬು ಬೆಳೆಯಲ್ಲಿ 3, 4 ಅಡಿ ಅಂತರವನ್ನು ಕೊಡದೆ ಸಾಲಿನಿಂದ ಸಾಲಿಗೆ 8 ಅಡಿ ಅಂತರವನ್ನು ಕಾಯ್ದುಕೊಂಡು ಕಬ್ಬು ನಾಟಿ ಮಾಡಿದರು. ಹೀಗಾಗಿ ಬೆಳೆ ಬೆಳೆಯುವ ಹಂತದಲ್ಲಿ ಬೆಳೆಗೆ ಸಿಗಬೇಕಾದಂತಹ ಗಾಳಿ, ಬೆಳಕು ಸಮರ್ಪಕವಾಗಿ ದೊರೆತು ದ್ಯುತಿಸಂಶ್ಲೇಷಣೆ ಕ್ರಿಯೆ ಸರಾಗವಾಗಿ ನಡೆಯುತ್ತಿದೆ. ಮರಿಸಂಖ್ಯೆ, ಗಣಿಕೆಗಳ ಸಂಖ್ಯೆ ಹೆಚ್ಚಾಗಿ ಕೃಷಿಕನಿಗೆ 1 ಎಕರೆಗೆ 100 ಟನ್ ಇಳುವರಿ ನಿರೀಕ್ಷೆ ಹುಟ್ಟಿಸಿದೆ.
ಸಾವಯವ ಕೃಷಿ ಪದ್ಧತಿ (ಜೈವಿಕ ಗೊಬ್ಬರದ ಬಳಕೆ)
ಮಹಲಿಂಗಪ್ಪ ಅವರು ಮೊದಲು ರಾಸಾಯನಿಕ ಗೊಬ್ಬರವನ್ನು ಬಳಸಿ ಭೂಮಿಯನ್ನು ಗಟ್ಟಿಯಾಗಿಸಿಕೊಂಡಿದ್ದರು. ನೀರು ಕೂಡ ಭೂಮಿಯಲ್ಲಿ ಇಂಗದೆ ಗಟ್ಟಿಯಾಗಿತ್ತು. ಇದನ್ನು ಗಮನಿಸಿದ ನಂತರ, ರಾಸಾಯನಿಕ ಕೃಷಿ ಬಿಟ್ಟು ಸಾವಯವ ಕೃಷಿಗೆ ಬದಲಾವಣೆ ಕಂಡರು. ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರವಾದ ಡಾ.ಸಾಯಿಲ್ ಶುಗರ್ ಕೇನ್ ಸ್ಪೆಷಲ್ ಗೊಬ್ಬರ ಬಳಸಿದ ಮೇಲೆ ಗಟ್ಟಿಯಾಗಿದ್ದ ಭೂಮಿ ಮೃದುವಾಗಿ ಮಣ್ಣು ಫಲವತ್ತಾಯ್ತು. ಎರೆಹುಳುಗಳು ಅಧಿಕ ಪ್ರಮಾಣದಲ್ಲಿ ಸೃಷ್ಠಿಯಾಯ್ತು. ಬೆಳೆಗೆ ಸಮಗ್ರ ಪೋಷಕಾಂಶಗಳು ಡಾ.ಸಾಯಿಲ್ ಶುಗರ್ ಕೇನ್ ಸ್ಪೆಷಲ್ ಗೊಬ್ಬರದಿಂದ ದೊರೆತಂತಾಯಿತು.
ತ್ಯಾಜ್ಯ ಹಾಗೂ ನೀರಿನ ನಿರ್ವಹಣೆ
ಕೃಷಿ ಭೂಮಿಯಲ್ಲಿ ಬಂದಂತಹ ತ್ಯಾಜ್ಯ, ಕಬ್ಬಿನ ರವದಿಯನ್ನು ಕೃಷಿಕ ಸುಡುವ ಬದಲು, ಭೂಮಿಯ ಮೇಲೆ ಹೊದಿಕೆ ಮಾಡಿದರು. ತ್ಯಾಜ್ಯವು ಎರೆಹುಳುವಿಗೆ ಆಹಾರವಾಗಿದ್ದಲ್ಲದೆ, ಕೃಷಿ ಭೂಮಿಗೆ ಉತ್ತಮ ಗೊಬ್ಬರವಾಯಿತು. ಭೂಮಿಗೆ ಉಚಿತವಾಗಿ ಪೋಷಕಾಂಶಗಳು ಸಿಕ್ಕಂತಾಯಿತು. ಮಣ್ಣು ಫಲವತ್ತಾಗಿ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಾಗಿದ್ದರಿಂದ, ಹೆಚ್ಚು ನೀರಿನ ಅವಶ್ಯಕತೆ ಬೆಳೆಗೆ ಬೇಕಾಗಲಿಲ್ಲ. ಇದರಿಂದ ಬೆಳೆಗೆ ಹೆಚ್ಚಾಗಿ ನೀರನ್ನು ನೀಡದೆ, 15 ದಿನಕ್ಕೆ ಒಂದು ಬಾರಿ ನೀಡಿದರು.
ಕೃಷಿಕ ಮಹಲಿಂಗಪ್ಪ ಅವರು ಸಾವಯವ ಕೃಷಿಯಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಾ ಕಬ್ಬು ಬೆಳೆಯಲ್ಲಿ ಅಧಿಕ ಲಾಭ ಪಡೆಯುತ್ತಿದ್ದಾರೆ.
ಈ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=Up5ZuH2yY48&t=78s
ವರದಿ: ವನಿತಾ ಪರಸಣ್ಣವರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/