ಇದು ಎಲ್ಲಾ ರೈತರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರ. ಕೃಷಿ ಭೂಮಿ ಉಳುಮೆ ಮಾಡಿದ್ದೆ, ಕೆ.ಜಿ ಕೆ.ಜಿ ಗೊಬ್ಬರ ಹಾಕಿದ್ದೆ, ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಿದರೂ ಕೂಡ, ಇಳುವರಿ ಮಾತ್ರ ಬರಲೇ ಇಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬಾರದು. ಬದಲಿಗೆ, ಬಿತ್ತನೆಗೂ ಮುನ್ನ ರೈತರು ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಂಡು ನಂತರ ಬಿತ್ತನೆ ಮಾಡುವುದು ಸೂಕ್ತ. ಬೆಳೆಯಲ್ಲಿ ಮುಂದೆ ಆಗುವ ನಷ್ಟಗಳನ್ನು ತಡೆಯಬಹುದು.
ಬೀಜಗಳನ್ನು ಬಿತ್ತುವ ಮುನ್ನ ರೈತರು ಮನೆಯಲ್ಲಿಯೇ ಬೀಜಗಳ ಪರೀಕ್ಷೆ ಮಾಡಿಕೊಳ್ಳಬೇಕು. ಬಿತ್ತಿದ ಬೀಜಗಳು ಉತ್ತಮ ಮೊಳಕೆಯೊಡೆಯುತ್ತಾ, ಬೀಜಗಳು ಗುಣಮಟ್ಟದ್ದಾಗಿದೆಯಾ ಎಂಬುದನ್ನ ಪರೀಕ್ಷಿಸಿ ನಂತರ ಬಿತ್ತುವುದು ಒಳ್ಳೆಯದು. ಈ ವಿಚಾರದಲ್ಲಿ ರೈತರು ಗುಣಮಟ್ಟದ ಬೀಜಗಳೆಂದು ಹೊರಗಡೆಯಿಂದ ತಂದು ಮೋಸ ಹೋಗುವುದನ್ನು ತಡೆಯಬಹುದು.
ಮನೆಯಲ್ಲಿ ಬೀಜಗಳ ಪರೀಕ್ಷೆ ಮಾಡುವುದು ಹೇಗೆ..? ಎಂಬುದರ ಕುರಿತು ವಿಡೀಯೋ ಮುಖಾಂತರ ಸಮಗ್ರವಾದ ಮಾಹಿತಿಯನ್ನು ತಿಳಿಸಲಾಗಿದೆ. ವಿಡೀಯೊ ನೋಡಿ ಮನೆಯಲ್ಲಿ ಎಲ್ಲಾ ರೈತರು ಬಿತ್ತನೆಗೂ ಮುನ್ನ ಬೀಜಗಳ ಪರೀಕ್ಷೆ ಮಾಡಿಕೊಳ್ಳಿ.
https://www.youtube.com/watch?v=Fqi_Uzz_MeU&t=2s
ಕೃಷಿ ಎಂದರೆ ಮೂಟೆ ಮೂಟೆ ರಾಸಾಯನಿಕ ಗೊಬ್ಬರಗಳನ್ನು ತಂದು ಹಾಕುವುದಷ್ಟೇ ಅಲ್ಲ. ಕೃಷಿ ಎಂದರೆ ಸಮಗ್ರ ಸುಸ್ಥಿರವಾಗಿ ಸಾವಯವ ಕೃಷಿ ಮಾಡುವುದು. ವೈಜ್ಞಾನಿಕ ಮಾಹಿತಿಗಳೊಂದಿಗೆ ಮಾಡುವುದು. ಆಗ ಮಾತ್ರ ರೈತ ಕಣ್ಣೀರು ಹಾಕುವುದನ್ನು ತಡೆಯಬಹುದು, ಕಡಿಮೆ ಖರ್ಚಿನಲ್ಲಿ ವಿಷಮುಕ್ತ ಆಹಾರ ಬೆಳೆಯಬಹುದು.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ: ವನಿತಾ ಪರಸಣ್ಣವರ್