ಕೃಷಿ ಭೂಮಿಯಲ್ಲಿ ತಿಪ್ಪೆ ಇದ್ದರೆ, ಅದರಲ್ಲಿ ಎರೆಹುಳು ಗೊಬ್ಬರದ ಕಾರ್ಖಾನೆಯನ್ನೇ ಸೃಷ್ಟಿ ಮಾಡಬಹುದು. ಆದರೆ ತಿಪ್ಪೆಯನ್ನು ನಿರ್ಮಾಣ ಮಾಡುವ ಹಂತದಲ್ಲಿ ಕೃಷಿಕರು ಕೆಲವೊಂದು ವೈಜ್ಞಾನಿಕ ವಿಚಾರಗಳನ್ನು ತಿಳಿಯಬೇಕಾಗುತ್ತೆ.
ತಿಪ್ಪೆಯನ್ನು ಮಾಡಲು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಳ ಹೆಚ್ಚಾಗಿ ಬಿಸಿಲು ಬೀಳುವಂತಹ ಕಡೆ ಇರಬಾರದು. ನೆರಳು ಇರುವಂತಹ ಜಾಗವಾಗಿರಬೇಕು. ಜಮೀನಿನಲ್ಲಿ ಗಿಡ ಮರಗಳ ಕೆಳಗೆ ತಿಪ್ಪೆ ಮಾಡುವುದು ಸೂಕ್ತ. ಯಾಕೆಂದರೆ ಹೆಚ್ಚಾಗಿ ಬಿಸಿಲು ಇದ್ರೆ, ತಿಪ್ಪೆಯಲ್ಲಿಯ ಉಪಕಾರಿ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ. ಹಾಗಾಗಿ ನೆರಳು ಪ್ರದೇಶ ಉತ್ತಮ. ಇನ್ನು ತಿಪ್ಪೆ ಸರಿಯಾಗಿ ಕಳಿಯಬೇಕೆಂದರೆ ಡಿಕಂಪೋಸಿಂಗ್ ಚೆನ್ನಾಗಿ ಆಗಬೇಕು. ಡಾ.ಸಾಯಿಲ್ ಡಿಕಂಪೋಸರ್ ಬಳಸಿಕೊಂಡಾಗ ಕೆಲವೇ ವಾರಗಳಲ್ಲಿ ತ್ಯಾಜ್ಯಗಳು ಕಳಿಯುವುದಲ್ಲದೆ, ಎರೆಹುಳುಗಳ ಕಾರ್ಖಾನೆಯೇ ಸೃಷ್ಟಿಯಾಗುತ್ತದೆ.
ಸಾವಯವ ಕೃಷಿಕರಾದ ರಮೇಶ್ ಅವರು, ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಶುಗರ್ ಕೇನ್ ಬಳಸಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದಾರೆ. ಬೆಳೆಯಲ್ಲಿ ಸೂಕ್ತ ಅಂತರ ಕೊಟ್ಟಿದ್ದರಿಂದ 1 ಎಕರೆಗೆ 100 ಟನ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಅದರ ಜತೆಗೆ ತಿಪ್ಪೆಗೆ ಡಾ.ಸಾಯಿಲ್ ಡಿಕಂಪೋಸರ್ ಬಳಸಿದ್ದರಿಂದ ಎರೆಹುಳುಗಳ ಸಂಖ್ಯೆ ಹೆಚ್ಚಾಗಿದೆ. ತಿಪ್ಪೆ ಕಳಿತು, ಎರೆಹುಳು ಗೊಬ್ಬರ ತಯಾರಾಗಿದೆ. ಹೆಚ್ಚು ಹಣ ಖರ್ಚು ಮಾಡಿ, ಹೊರಗಡೆಯಿಂದ ಎರೆಹುಳು ಗೊಬ್ಬರ ತರುವ ಅವಶ್ಯಕತೆ ಇಲ್ಲ. ಇವರ ತಿಪ್ಪೆಯೇ ಎರೆಹುಳು ಗೊಬ್ಬರವಾಗಿದೆ.
ಸಾವಯವ ಕೃಷಿಕ ರಮೇಶ್ ಅವರ ವೈಜ್ಞಾನಿಕ ತಿಪ್ಪೆ ಹೇಗಿದೆ ಎಂಬುದರ ಬಗ್ಗೆ ವಿಡೀಯೋ ಇಲ್ಲಿದೆ ನೋಡಿ
https://www.facebook.com/microbiagrotech/videos/791855421984363
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ : ವನಿತಾ