Blog

ರಾಸಾಯನಿಕ ಕೃಷಿಯ ಮೂಲಕ ಕೇವಲ ವಿಷಯುಕ್ತ ಆಹಾರವನ್ನಷ್ಟೆ ಜನರಿಗೆ ಕೊಡಬಹುದೆ ಹೊರತು, ಆರೋಗ್ಯಕರ ಆಹಾರವನ್ನಲ್ಲ. ದೇಶದಾದ್ಯಂತ ಸಾವಯವ ಉತ್ಪನ್ನಗಳ ಮಹತ್ವ ಮತ್ತು ಬೇಡಿಕೆ ಹೆಚ್ಚುತ್ತಿದೆ. ರಾಸಾಯನಿಕ ಬಳಕೆಯಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ಕಂಡ ಸರ್ಕಾರ, ರೈತರು ಸಾವಯವ ಕೃಷಿಗೆ ಬರುವಂತೆ ಪ್ರೇರೇಪಿಸಲು 2015ರಲ್ಲಿ ಯೋಜನೆ ಜಾರಿಗೆ ತಂದಿದೆ. "ಪರಂಪರಾಗತ್ ಕೃಷಿ ವಿಕಾಸ್ ಯೋಜನೆ" (PKVY) ಎಂಬ ಯೋಜನೆಯ ಮುಖಾಂತರ ರೈತರಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದೆ.

       "ಪರಂಪರಾಗತ್ ಕೃಷಿ ವಿಕಾಸ್ ಯೋಜನೆ" ಎಂಬುದು ಸುಸ್ಥಿರ ಕೃಷಿಯ ರಾಷ್ಟ್ರೀಯ ಮಿಷನ್ (NMSA) ನ ಪ್ರಮುಖ ಯೋಜನೆಯಾದ ಮಣ್ಣಿನ ಆರೋಗ್ಯ ನಿರ್ವಹಣೆಯ (SHM) ಒಂದು ವಿಸ್ತೃತ ಅಂಶವಾಗಿದೆ. PKVY ಅಡಿಯಲ್ಲಿ ಸಾವಯವ ಕೃಷಿಯನ್ನು ಕ್ಲಸ್ಟರ್ ವಿಧಾನ ಮತ್ತು PGS ಪ್ರಮಾಣೀಕರಣದ ಮೂಲಕ ಸಾವಯವ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಮೂಲಕ ಉತ್ತೇಜಿಸಲಾಗುತ್ತದೆ. PGS (Participatory Guarantee System) ಎಂಬುದು ಈ ಯೋಜನೆಯ ಒಂದು ಕಾನೂನುಬದ್ಧ ಸಾವಯವ ಪ್ರಮಾಣ ಪತ್ರವಾಗಿದೆ. ಈ ಯೋಜನೆಯಡಿ ಬರುವ ಸಹಾಯಧನವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸೇರಿ ಕೊಡುತ್ತವೆ. ರಾಜ್ಯ ಸರ್ಕಾರದಿಂದ 40% ಮತ್ತು ಕೇಂದ್ರ ಸರ್ಕಾರದಿಂದ 60% ಸಹಾಯಧನ ರೈತರಿಗೆ ದೊರೆಯುತ್ತದೆ.

 

ಸೌಲಭ್ಯಗಳು:

ಈ ಯೋಜನೆಯಡಿ ಸೌಲಭ್ಯ ಪಡೆಯಲು 50 ಎಕರೆಯ ಕ್ಲಸ್ಟರ್ ರಚನೆ ಅಗತ್ಯ.

- 1 ಹೆಕ್ಟೇರ್ ಜಮೀನಿಗೆ 3 ವರ್ಷದಲ್ಲಿ 50 ಸಾವಿರ ರೂಪಾಯಿಗಳ ಸಹಾಯಧನ.

- PSU, Indian Council of Agricultural Research (ICAR), ಕೃಷಿ ವಿಜ್ಞಾನ ಕೇಂದ್ರ(KVK) ಗಳಿಂದ ಮಾದರಿ ಕ್ಲಸ್ಟರ್ ನ ಪ್ರದರ್ಶನ.

- ಕ್ಲಸ್ಟರ್ ನ ರೈತರಿಗೆ ವರ್ಷದಲ್ಲಿ 3 ಉಚಿತ ತರಬೇತಿಗಳು.

- ಈ ಕ್ಲಸ್ಟರ್ ಗಳಲ್ಲಿ ಬರುವ ರೈತರಿಗೆ ಉಚಿತ ತರಬೇತಿ ಮತ್ತು PGS ಸರ್ಟಿಫಿಕೇಶನ್.

- ಸಾವಯವ ಕೃಷಿಗೆ ಬದಲಾಗಲು 3 ವರ್ಷಗಳ ಅವಕಾಶ.

- ಸಂಪೂರ್ಣ ಸಾವಯವ ಕೃಷಿ ಪದ್ಧತಿಗೆ ಅಳವಡಿಸಿಕೊಳ್ಳುವವರೆಗೆ PGS India Green ಪ್ರಮಾಣ ಪತ್ರ.

- ಸಂಪೂರ್ಣ ಸಾವಯವ ಕೃಷಿ ಪದ್ಧತಿಗೆ ಅಳವಡಿಸಿಕೊಂಡ ಮೇಲೆ PGS India ಪ್ರಮಾಣಪತ್ರ.

- ಸಾವಯವ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಉತ್ತಮ ಬೆಲೆ.

       PKVY ಯೋಜನೆಯ ಸೌಲಭ್ಯಗಳನ್ನು ಪಡೆಯಲು ಕ್ಲಸ್ಟರ್ ಮಾಡುವ ಅನಿವಾರ್ಯತೆ ಇರುವುದರಿಂದ, ಹತ್ತಿರದ KVKಗಳಲ್ಲಿ ವಿಚಾರಿಸಿ, ಇತರ ರೈತರೊಂದಿಗೆ ಸೇರಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳುವುದು ಉತ್ತಮ. www.jaivikkheti.in ಈ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು, ಇದರ ಮುಖಾಂತರ ರೈತರು ಸಾವಯವ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಮಾಡಬಹುದು.

       ದೇಶದೆಲ್ಲೆಡೆ ಸಾವಯವ ಬಿರುಗಾಳಿ ಬೀಸುತ್ತಿದ್ದು, ಸರ್ಕಾರದ "ಪರಂಪರಾಗತ್ ಕೃಷಿ ವಿಕಾಸ್ ಯೋಜನೆ" ರೈತರಿಗೆ ವರದಾನವಾಗಲಿದೆ. ರೈತರಿಗೆ ಕ್ಲಸ್ಟರ್ ಮಾದರಿಯಲ್ಲಿ ಸಾವಯವ ಪ್ರಮಾಣಪತ್ರ ಮತ್ತು ಆನ್ ಲೈನ್ ಮುಖಾಂತರ ನೇರ ಮಾರುಕಟ್ಟೆ ಸಿಗಲಿದೆ.

ಬರಹ: ರವಿಕುಮಾರ್

 

1 Acre areca farm, 20 crops, 10 lakhs yearly income | 1 ಎಕರೆ ಅಡಿಕೆ ತೋಟ, 20 ಬೆಳೆ, ವರ್ಷ 10 ಲಕ್ಷ ಆದಾಯ

https://www.youtube.com/watch?v=EGQF5rtRZ7U&t=10s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 

#microbiagrotech  #drsoil  #microbifoundation  #integratedfarming  #soil  #agricultureinkannada  #kannadablogs  #pkvy  #organicfarming  #microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  



Blog




Home    |   About Us    |   Contact    |   
microbi.tv | Powered by Ocat Online Advertising Service in India