ಅನ್ನದಾತರಿಗೆ ಮಣ್ಣಿನ ಮಹತ್ವ ತಿಳಿಸಲು ಮೈಕ್ರೋಬಿ ಫೌಂಡೇಶನ್ 9 ತಿಂಗಳ ನಿರಂತರ ಅಭಿಯಾನ ನಡೆಸುತ್ತಿದೆ. ಇದರ ಅಂಗವಾಗಿ ನಾಡಿನಾದ್ಯಂತ ವಿವಿಧ ಹಳ್ಳಿಗಳಿಗೆ ಸಂಚರಿಸಿ ಅಭಿಯಾನ ನಡೆಸುತ್ತಿದೆ.
ಮೈಕ್ರೋಬಿ ಫೌಂಡೇಶನ್ ಸಂಸ್ಥಾಪಕರು, ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರೂ ಆದ ಡಾ.ಕೆ.ಆರ್.ಹುಲ್ಲುನಾಚೇಗೌಡರ ಸಾರಥ್ಯದಲ್ಲಿ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ದೊಡ್ಡ ಅಗ್ರಹಾರ ಗ್ರಾಮ ಪಂಚಾಯಿತಿಯ ವಡ್ಡನಹಳ್ಳಿ ಗ್ರಾಮದಲ್ಲಿ ಮಣ್ಣು ಜೀವಿಸಲಿ ಅಭಿಯಾನ ನಡೆಸಲಾಯಿತು. ರೈತ ಪಾಟೀಲ್ ಅವರ ತೋಟಕ್ಕೆ ಭೇಟಿ ನೀಡಿದ ಮೈಕ್ರೋಬಿ ತಂಡವು, ಉತ್ತಮ ಇಳುವರಿ ಪಡೆಯಲು ಸಲಹೆ, ಸೂಚನೆಗಳನ್ನು ನೀಡಿತು.
ಅಭಿಯಾನದ ಆರಂಭದಲ್ಲಿ ಧಾತು ಆಪ್ ಬಗ್ಗೆ ತಿಳಿಸಿದ ಡಾ.ಕೆ ಆರ್ ಹುಲ್ಲುನಾಚೇಗೌಡರು ಇದರ ಉಪಯೋಗ ಮತ್ತು ಮಣ್ಣು ಜೀವಿಸಲಿ ಅಭಿಯಾನದ ಉದ್ದೇಶದ ಬಗ್ಗೆ ತಿಳಿಸಿದರು. ಧಾತು ಆಪ್ ನೇರ ಮಾರುಕಟ್ಟೆ ಒದಗಿಸುವುದರಿಂದ ರೈತರು ಲಾಭ ಹೆಚ್ಚು ಪಡೆಯಬಹುದು ಎಂದು ತಿಳಿಸಿದರು.
ದೇಶದ ಸಂಪತ್ತು, ಮುಂದಿನ ಪ್ರಜೆಗಳಾದ ಶಾಲಾ ಮಕ್ಕಳಿಗೆ ಡಾ.ಕೆ ಆರ್ ಹುಲ್ಲುನಾಚೇಗೌಡರು ಮಣ್ಣಿನ ಮಹತ್ವ ತಿಳಿಸಿಕೊಟ್ಟರು. ಮಕ್ಕಳು ಕೂಡ ಉತ್ಸಾಹದಿಂದ ಅಭಿಯಾನದಲ್ಲಿ ಪಾಲ್ಗೊಂಡು, ಮಣ್ಣು ಜೀವಿಸಲಿ ಘೋಷವಾಕ್ಯಗಳನ್ನು ಕೂಗಿದರು.
ಮಣ್ಣು ಜೀವಿಸಲಿ ಅಭಿಯಾನದಲ್ಲಿ ಫೌಂಡೇಶನ್ ಸದಸ್ಯರು, ಗ್ರಾಮಸ್ಥರು, ಡಾ.ಸಾಯಿಲ್ ಜೋನಲ್ ಮುಖ್ಯಸ್ಥರು, ದಾಸ್ತಾನುಗಾರರು, ವಿತರಕರು ಮತ್ತು ಮೈಕ್ರೋಬಿ ಆಗ್ರೋಟೆಕ್ ನ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಬರಹ: ರವಿಕುಮಾರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/