ಮಣ್ಣು ಜೀವಿಸಲಿ ಘೋಷವಾಕ್ಯದೊಂದಿಗೆ ನಾಡಿನ ಉದ್ದಗಲಕ್ಕೂ ಜಾಗೃತಿ ಜಾಥಾ ನಡೆಸುತ್ತಿರುವ ಮೈಕ್ರೋಬಿ ಫೌಂಡೇಶನ್ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮಣ್ಣು ಜೀವಿಸಲಿ ಅಭಿಯಾನದಲ್ಲಿ ಜೋನಲ್ ಹೆಡ್ ಗಳು, ದಾಸ್ತಾನುಗಾರರು, ವಿತರಕರು ಮತ್ತು ಮೈಕ್ರೋಬಿ ಆಗ್ರೋಟೆಕ್ ನ ಸಿಬ್ಬಂದಿ ಹಾಜರಿದ್ದರು.
ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರ ಸಾರಥ್ಯದಲ್ಲಿ ನಿರಂತರವಾಗಿ 9 ತಿಂಗಳ ಕಾಲ ಈ ಅಭಿಯಾನ ನಡೆಯುತ್ತದೆ. ಜನರನ್ನು ಉದ್ದೇಶಿಸಿ ಮಾತನಾಡಿದ ಡಾ.ಕೆ.ಆರ್.ಹುಲ್ಲುನಾಚೆಗೌಡರು, ಮಣ್ಣು ಎಲ್ಲಾ ಸಂಪತ್ತಿನ ಆಗರ, ಮಣ್ಣು ಉಳಿಸಲು ನಾಡಿನ ಎಲ್ಲ ಜನರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಅಭಿಯಾನಕ್ಕೆ ಗ್ರಾಮದ ರೈತರು ತಮ್ಮ ಬೆಂಬಲ ಸೂಚಿಸಿ ಮಣ್ಣು ಜೀವಿಸಲಿ ಘೋಷವಾಕ್ಯಗಳೊಂದಿಗೆ ಊರಿನಲ್ಲಿ ಜಾಥಾ ನಡೆಸಿದರು. ನಂತರ ವಕೀಲರಾದ ಮುರಳಿಧರ್ ಮಾತನಾಡಿ, ಮಣ್ಣು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಇದಕ್ಕಾಗಿ ಎಲ್ಲರ ಬೆಂಬಲ ಮುಖ್ಯ ಎಂದು ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದರು.
ರೈತ ವೈ ಎಮ್ ಮಂಜುನಾಥ್ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿದ ಹುಲ್ಲುನಾಚೇಗೌಡರ ನೇತೃತ್ವದ ಮೈಕ್ರೋಬಿ ತಂಡ, ರೈತರಿಗೆ ಮಣ್ಣಿನ ಫಲವತ್ತತೆ ಮತ್ತು ಹೊದಿಕೆ ಯ(mulching) ಪ್ರಾಮುಖ್ಯತೆ ತಿಳಿಸಿ ಕೊಟ್ಟಿತು. ರೈತರು ಹೆಚ್ಚು ಆದಾಯ ಮಾಡುವುದು ಹೇಗೆಂದು ತಿಳಿಸಿದರು. ಮುಖ್ಯ ಬೆಳೆ ಅಡಿಕೆಯ ಜೊತೆ ಅಂತರ ಬೆಳೆಯಾಗಿ ಬಾಳೆ ಹಾಕಿದರೆ ಆಗುವ ಲಾಭ ಮತ್ತು ಅದರಿಂದ ಸಿಗುವ ಪೋಷಕಾಂಶಗಳ ಬಗ್ಗೆ ತಿಳಿಸಿದರು. ಮಣ್ಣು ಜೀವಿಸಲಿ ಅಭಿಯಾನದ ಅಂಗವಾಗಿ ಮುಂದಿನ 9 ತಿಂಗಳು ಸಲಹೆ ಸೂಚನೆಗಳು ಸಿಗುವುದಾಗಿ ತಿಳಿಸಿದರು.
ಬರಹ: ರವಿಕುಮಾರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/