ವಿಜಯಪುರ ಜಿಲ್ಲೆ, ಇಂಡಿ ತಾಲೂಕಿನ ಕೃಷಿಕ ಸುಧಾಕರ್ ಅವರು, ಸಾವಯವ ಕೃಷಿಯ ಮೂಲಕ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ. ಇವರು ತಮ್ಮ ಕಬ್ಬು ಬೆಳೆಗೆ ಡಾ.ಸಾಯಿಲ್ ಶುಗರ್ ಕೇನ್ ಸ್ಪೆಷಲ್ ಬಳಸಿದ್ದರಿಂದ, ಇಂದು ಕಬ್ಬು ಬೆಳೆ ಎಕರೆಗೆ 60 ಕ್ವಿಂಟಾಲ್ ಇಳುವರಿ ನೀಡಲು ಶಕ್ತವಾಗಿದೆ. ಹೌದು.. ಕಬ್ಬು ಬೆಳೆ ಸಾವಯವ ಕೃಪೆಯಿಂದ ಎಕರೆಗೆ 60 ಕ್ವಿಂಟಾಲ್ ಇಳುವರಿ ನಿಡ್ತಾಯಿರುವುದು ಸತ್ಯ. ಆದ್ರೆ ಕೃಷಿಕ ಮಾಡ್ತಾಯಿರುವ ಆ ಒಂದು ತಪ್ಪಿನಿಂದ ಇನ್ನೂ ಹೆಚ್ಚಿನ ಇಳುವರಿ ಕೈತಪ್ಪಿದೆ.
ಕಬ್ಬು ಕಟಾವಾದ ಕೂಡಲೇ ರವದಿಗೆ ಬೆಂಕಿ ಇಡುವುದು..!
ಕಬ್ಬಿನ ತೋಟದಲ್ಲಿ ರವದಿ ನಾಶ ಮಾಡಲು, ಕೃಷಿಕ ಸುಧಾಕರ್ ಅವರು ರವದಿಗೆ ಬೆಂಕಿ ಹಚ್ಚುತ್ತಾರೆ. ಬೆಂಕಿ ಇಡ್ತಾಯಿರುವುದು, ಇದೇ ಮೊದಲಲ್ಲ. ಹಾಗೆ ಇವರೊಬ್ಬರೇ ಅಲ್ಲ. ಇಡಿ ಊರಿಗೆ ಊರೇ, ತಪ್ಪು ತಿಳುವಳಿಕೆಯಿಂದ ತಲತಲಾಂತರದಿಂದ ಬೆಂಕಿ ಇಡುವ ಪದ್ಧತಿಯನ್ನ ಮುಂದುವರೆಸಿಕೊಂಡು ಬರ್ತಾಯಿದ್ದಾರೆ.
ತೋಟಕ್ಕೆ ಬೆಂಕಿ ಇಡುವುದರ ಪರಿಣಾಮ:
ಒಂದು ಇಂಚು ಮಣ್ಣು, ಶಿಲೆಗಳಿಂದ ಶಿಥಿಲೀಕರಣಗೊಂಡು, ತಯಾರಾಗಲು 500 ರಿಂದ 600 ವರ್ಷಗಳೇ ಬೇಕಾಗುತ್ತೆ. ಆದ್ರೆ ಕೃಷಿಕ ಕಬ್ಬು ಕಟಾವಾದ ಮೇಲೆ ಬಿದ್ದ ರವದಿಯನ್ನ ಸುಡಲು ಹೋಗಿ, ಕೃಷಿ ಭೂಮಿಯ ಮೇಲ್ಪದರನ್ನ ಬರಡು ಮಾಡಿಕೊಳ್ಳುತ್ತಿರುವುದೇ ವಿಪರ್ಯಾಸ. ಹಾಗಾದ್ರೆ ರವದಿ ಸುಡುವುದರಿಂದ ರೈತನಿಗೆ ಆಗುವ ತೊಂದರೆ ಯಾವುವು? ಎಂಬುವುದನ್ನ ಒಂದೊಂದಾಗಿ ತಿಳಿಯೋಣ.
- ಮಣ್ಣಿನ ಮೇಲ್ಪದರ ಫಲವತ್ತತೆ ಕಳೆದುಕೊಳ್ಳುತ್ತೆ
- ಮಣ್ಣಿನಲ್ಲಿದ್ದ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳ ಸಾಮೂಹಿಕ ಮಾರಣ ಹೋಮವಾಗುತ್ತೆ.
- ಮಣ್ಣಿನಲ್ಲಿ ಜೈವಿಕ ಪರಿಸರ ಇಲ್ಲದ ಕಾರಣ, ಮಣ್ಣು ಗಟ್ಟಿಯಾಗುತ್ತೆ
- ಮಳೆಯಾದ್ರೆ, ಮಣ್ಣಿನಲ್ಲಿ ನೀರು ಇಂಗುವುದಿಲ್ಲ
- ಮಳೆ ನೀರಿನ ಜತೆಗೆ ಮೇಲ್ಪದರ ಮಣ್ಣು ಕೊಚ್ಚಿಕೊಂಡು ಹೋಗುತ್ತೆ
ಒಟ್ಟಿನಲ್ಲಿ ರೈತರು ಬೆಂಕಿ ಇಡುವ ಮೂಲಕ ತೋಟದಲ್ಲಿದ್ದ, ಖನಿಜ ಸಂಪನ್ಮೂಲವನ್ನ ಸ್ವತ: ತಾವೇ ಆಹುತಿಕೊಟ್ಟಂತಾಗುತ್ತೆ.
ರವದಿಯಿಂದಾಗುವ ಉಪಯೋಗ:
ರವದಿ ಒಂದು ಉತ್ತಮ ತ್ಯಾಜ್ಯ. ಇದಕ್ಕೆ ರೈತರು ಬೆಂಕಿ ಇಡುವುದನ್ನ ನಿಲ್ಲಿಸಿ, ಸದ್ಭಳಕೆ ಮಾಡಿಕೊಳ್ಳಬೇಕು. ಬಿದ್ದ ರವದಿಯನ್ನ ಒಂದು ಸ್ಥಳದಲ್ಲಿ ಶೇಖರಣೆ ಮಾಡಿ, 500 ಲೀಟರ್ ನೀರಿಗೆ 1 ಲೀಟರ್ ಡಾ.ಸಾಯಿಲ್ ಡಿಕಂಪೋಸರ್ ಮಿಕ್ಸ್ ಮಾಡಿ, ರವದಿ ಮೇಲೆ ಸುರಿಯಬೇಕು. ನಂತರ 2 ತಿಂಗಳಿಗೆ ತ್ಯಾಜ್ಯ ಜೈವಿಕ ವಿಘಟನೆಗೊಂಡು, ಉತ್ತಮ ಕಾಂಪೋಸ್ಟ್ ಗೊಬ್ಬರವಾಗುತ್ತೆ. ಈ ಗೊಬ್ಬರವನ್ನ ರೈತರು ತಮ್ಮ ಕೃಷಿ ಭೂಮಿಗೆ ಬಳಿಸಿದ್ರೆ, ಮಣ್ಣು ಫಲತ್ತಾಗಿ, ಉತ್ತಮ ಇಳುವರಿ ನೀಡಲು ಶಕ್ತವಾಗುತ್ತೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=tV9TIvJCbro&t=330s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/