Blog

ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಪಟ್ಟಿಕೊಪ್ಳು ಗ್ರಾಮದ ಕೃಷಿಕ ಚಿಕ್ಕಣ್ಣ ಅವರು, ತಮ್ಮ 20 ಎಕರೆ ಕೃಷಿ ಭೂಮಿಯಲ್ಲಿ 30ಕ್ಕೂ ಹೆಚ್ಚು ಬೆಳೆ ಬೆಳೆದುಕೊಂಡು ತೋಟಕ್ಕೆ ಅರಣ್ಯದ ಳೆ ನೀಡಿದ್ದಾರೆ. ಕೃಷಿಕ ಚಿಕ್ಕಣ್ಣ ಅವರದ್ದು, ಒಟ್ಟಾರೆ 20 ಎಕರೆ ಕೃಷಿ ಭೂಮಿ. ಇವರು 5 ಎಕರೆ ಕೃಷಿ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳು, ದನಕರುಗಳಿಗೆ ಮೇವು ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಮಿಕ್ಕ 15 ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಟೀಕ್, ಕಿತ್ತಳೆ, ಪಪ್ಪಾಯ, ಪೇರಲ, ನುಗ್ಗೆ, ಕಾಡು ಬೇವು, ಕಾಫಿ( ಅರೇಬಿಕಾ ಮತ್ತು ರೋಬೊಸ್ಟಾ) ಹೀಗೆ 30ಕ್ಕೂ ಹೆಚ್ಚು ಬೆಳೆಗಳನ್ನ ಬೆಳೆದು ತೋಟವನ್ನ ಅರಣ್ಯದಂತೆ ಮಾಡಿದ್ದಾರೆ.

 

ಸಮಗ್ರ ಬೆಳೆಯಿಂದ ರೈತನಿಗೆ ಆಗುವ ಲಾಭ:

ಒಬ್ಬ ಕೃಷಿಕ ಒಂದೇ ಬೆಳೆ ನಂಬುವುದನ್ನ ಬಿಟ್ಟುಸಮಗ್ರ ಬೆಳೆಯತ್ತ ಚಿತ್ತ ಹರಿಸಬೇಕು. ಏಕೆಂದರೆ ರೈತನಿಗೆ ಸಮಗ್ರ ಬೆಳೆಗಳು ತಲೆಬೇನೆಯಾಗದೆ ನೆಮ್ಮದಿ ನೀಡುತ್ತೆ. ಹೀಗಾಗಿ ಈ ಕೃಷಿಕ ಬ್ಯಾಂಕ್ ಹುದ್ದೆಯಲ್ಲಿದ್ದುಕೊಂಡೇ ತಮ್ಮ ತೋಟದಲ್ಲಿ ಸಾಕಷ್ಟು ಬೆಳೆಗಳನ್ನ ಪೋಷಿಸಲು ಮುಂದಾದರು. ಈಗ ನಿವೃತ್ತಿಯ ಬಳಿಕ, ಆ ಎಲ್ಲ ಬೆಳೆಗಳು ಬೆಳೆದು ಫಲ ನೀಡುತ್ತಿವೆ. ಹೀಗಾಗಿ ತೋಟದಿಂದ ಗಳಿಸುತ್ತಿರುವ ವಾರ್ಷಿಕ ಆದಾಯ 25 ರಿಂದ 30 ಲಕ್ಷ ರೂ. ಆಗಿದೆ  ಎಂದು ಸಂತಸದಿಂದ ನುಡಿಯುತ್ತಿದ್ದಾರೆ ಕೃಷಿಕ ಚಿಕ್ಕಣ್ಣ.

 

ಹೈನೋದ್ಯಮ:

ಬಹುತೇಕ ಕೃಷಿಕರು ಕೃಷಿಯಲ್ಲಿ ಬೆಳೆಯೊಂದನ್ನೇ ಅವಲಂಬಿಸಿ ಕುಳಿತು ಬಿಡುತ್ತಾರೆ. ಆದ್ರೆ ಬೆಳೆಗಳ ಜತೆ ಹೈನುಗಾರಿಕೆ ಮತ್ತು ಕುರಿ, ಕೋಳಿ ಸಾಕಾಣಿಕೆಯಂತಹ ಉಪಕಸಬುಗಳನ್ನ ಅಳವಡಿಸಿಕೊಂಡರೆ ಆರ್ಥಿಕ ಸುಧಾರಣೆಯಾಗುತ್ತದೆ. ಜತೆಗೆ ಕೃಷಿ ಭೂಮಿಗೆ ಮತ್ತು ಬೆಳೆಗಳಿಗೆ ಸಾವಯವ ತ್ಯಾಜ್ಯ (ಕೊಟ್ಟಿಗೆ ಗೊಬ್ಬರ, ಆಕಳು ಗಂಜಲ, ಕುರಿ ಹಿಕ್ಕೆ, ಕೋಳಿ ಕಥಾ) ದೊರೆಯುತ್ತೆ. ಬೆಳೆ ಉತ್ಕೃಷ್ಟವಾಗಿ ಬೆಳೆಯಲು ಸಾಧ್ಯವಾಗುತ್ತೆ.

 

ಒಟ್ಟಿನಲ್ಲಿ ಸಾವಯವ ಕೃಷಿಯಲ್ಲಿ ರೈತರು ಸಮಗ್ರ ಬೆಳೆ ಬೆಳೆಯೋದ್ರಿಂದ ಬೆಳೆಗಳು ಕಡಿಮೆ ಖರ್ಚಿನಲ್ಲಿ, ಹೆಚ್ಚು ಆದಾಯ ನೀಡುತ್ತವೆ ಹಾಗೂ ಆರೋಗ್ಯವಾಗಿರುತ್ತವೆ. ಬೆಳೆಗಳೊಂದಿಗೆ ಉಪಕಸುಬುಗಳನ್ನ ಅಳವಡಿಸಿಕೊಂಡರೆ ರೈತನ ಕೃಷಿ ಜೀವನ ಸರಳವಾಗುತ್ತೆ.


ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 

https://www.youtube.com/watch?v=TG0pq-svNcs&t=48s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

#Howtodointegratedfarming  #integratedorganicfarming  #integratedfarmingsystem  #integratedfarminginkannada  #multiplefruitvarieties  #SuccessfulIntegratedfarming  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies