ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಾಬು ರಾಯ್ ಅವರು, ತಮ್ಮ ಮೂರು ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ಕಬ್ಬು ಬೆಳೆಯುತ್ತಿದ್ದಾರೆ. ಇಲ್ಲಿ ಕೃಷಿಕ 6 ಅಡಿ ಅಂತರ ಕೊಟ್ಟು, ಬೆಳೆಗೆ ಆಗುವ ಲಾಭದ ಬಗ್ಗೆ ಅನುಭವ ಪಡೆಯುವ ಯತ್ನ ಮಾಡಿದ್ದಾರೆ. 3.5 ಅಡಿ ಅಂತರದಿಂದ ಮೂರು ಎಕರೆ ಕಬ್ಬು ಬೆಳೆದರೆ, ಪರೀಕ್ಷಾರ್ಥ ದೃಷ್ಟಿಯಿಂದ 2 ಸಾಲೂ ಕಬ್ಬಿಗೆ 6 ಅಡಿ ಅಂತರ ನೀಡಿದ್ದಾರೆ.
3.5 ಅಡಿ ಅಂತರದ ಕಬ್ಬು ಬೆಳೆ:
ಸಾವಯವ ಕೃಷಿ ಮೂಲಕ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಭೂಮಿ ಫಲವತ್ತಾಗಿದೆ. ಬೆಳೆ ಆರೋಗ್ಯಕರವಾಗಿದೆ. ಆದ್ರೆ ಸೂಕ್ತ ಅಂತರವಿಲ್ಲದ ಕಾರಣ ಕಬ್ಬು ಗಣಿಕೆಗಳು ಮತ್ತು ಮರಿ ಸಂಖ್ಯೆಗಳು ಹೇಳಿಕೊಳ್ಳುವಂತಿಲ್ಲ. ಕಾರಣ ಬೆಳೆಗೆ ಸಿಗಲೆಬೇಕಾದ ಗಾಳಿ, ಬೆಳಕಿನ ಅಭಾವ.
6 ಅಡಿ ಅಂತರದ 2 ಸಾಲಿನ ಕಬ್ಬು ಬೆಳೆ:
ಗಾಳಿ, ಬೆಳಕು ಪ್ರತಿಯೊಂದು ಗಿಡಗಳಿಗೂ ಸಿಗುತ್ತಿರುವ ಕಾರಣ ಕಬ್ಬು ಬೆಳೆಯಲ್ಲಿ ಹೆಚ್ಚು ಗಣಿಕೆ, ಹೆಚ್ಚು ಮರಿಗಳನ್ನು ಕಾಣಬಹುದು. ಬೆಳೆ ಕೀಟಬಾಧೆ, ರೋಗಬಾಧೆಯ ಜಂಜಾಟವಿಲ್ಲದೆ ಆರೋಗ್ಯಕರವಾಗಿದೆ.
ಕೃಷಿಕ ಬಾಬುರಾಯ್ ಅವರು, ಹೆಚ್ಚು ಅಂತರದಿಂದಾಗುವ ಲಾಭದ ಬಗ್ಗೆ ಒಂದೊಳ್ಳೆ ಅನುಭವ ಪಡೆದರು. ನಂತರ ಪರೀಕ್ಷೆ ಇಷ್ಟಕ್ಕೆ ನಿಲ್ಲಿಸದೆ, ಸಾವಯವಕ್ಕೂ ರಾಸಾಯನಿಕಕ್ಕೂ ಇರುವ ವ್ಯತ್ಯಾಸವನ್ನ ತಿಳಿಯಲು ಹೊಸ ಪರೀಕ್ಷೆ ಕೈಗೊಂಡರು. ಮೂರು ಎಕರೆ ಸಾವಯವ ಮಾಡಿದ್ರೆ, ಮತ್ತೆ ಎರಡೇ ಎರಡು ಸಾಲಿಗೆ ಮಾತ್ರ ರಾಸಾಯನಿಕ ಗೊಬ್ಬರ ಹಾಕಿದ್ರು. ಆಗ ಸಾವಯವ ತೋಟ ಸೌಂದರ್ಯದಿಂದ ಬೀಗುತ್ತಿದ್ರೆ, ರಾಸಾಯನಿಕ ಕಳಪೆಯಾಗಿ ಕಾಣುತ್ತಿತ್ತು. ಹೀಗಾಗಿ ಕೃಷಿಕ ರಾಸಾಯನಿಕ ಮತ್ತು 3.5 ಅಡಿ ಅಂತರ ಬಿಡಲು ಮನಸ್ಸು ಮಾಡಿದ್ರು.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=nLrcvRRT1CQ
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/